ಧರ್ಮಪ್ರೇಮಿ ವಕೀಲ ಅನಯ ಶ್ರೀವಾಸ್ತವರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಲ್ಲಿ ದೂರುಪೊಲೀಸರಿಗೆ ದೂರು ನೀಡಿದ ನಂತರವೂ ಪೊಲೀಸರಿಂದ ಯಾವುದೇ ಕ್ರಮವಿಲ್ಲ ! |
ಉತ್ತರ ಪ್ರದೇಶದಲ್ಲಿ ಹಿಂದೂಗಳ ದೇವತೆಗಳನ್ನು ಈ ರೀತಿ ಅವಮಾನಿಸಲಾಗುತ್ತಿರುವಾಗ ಅವರ ವಿರುದ್ಧ ದೂರುಗಳಿದ್ದರೂ ನಿಷ್ಕ್ರಿಯವಾಗಿರುವ ಪೊಲೀಸರ ವಿರುದ್ಧವೂ ಸರಕಾರ ಕ್ರಮ ಕೈಗೊಳ್ಳಬೇಕು !
ಭದೋಹಿ (ಉತ್ತರ ಪ್ರದೇಶ) – ಇಲ್ಲಿಯ ಸುರಿಂಯಾವಾ ಪ್ರದೇಶದಲ್ಲಿ ‘ಶಂಕರ್ ಪಾರ್ವತಿ ಛಾಪ್ ಬೀದಿ’ ಎಂಬ ಬೀಡಿಯನ್ನು ಹಲವು ವರ್ಷಗಳಿಂದ ತಯಾರಿಸಲಾಗುತ್ತಿದೆ. ಈ ಉತ್ಪನ್ನದ ಪ್ಯಾಕೆಟ್‌ನಲ್ಲಿ ಭಗವಾನ್ ಶಂಕರ್ ಮತ್ತು ಪಾರ್ವತಿಯ ಚಿತ್ರವನ್ನೂ ಮುದ್ರಿಸಲಾಗಿದೆ. ಅನೇಕ ಜನರು ಈ ಬೀಡಿಯನ್ನು ಬಳಸುತ್ತಿದ್ದಾರೆ ಮತ್ತು ಅದರ ಪ್ಯಾಕೆಟ್‌ಗಳನ್ನು ಚರಂಡಿಗಳಲ್ಲಿ ಮತ್ತು ಕಸದಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ದೇವತೆಗಳ ಅವಮಾನ ಆಗುತ್ತಿರುವುದರಿಂದ ಧರ್ಮಪ್ರೇಮಿ ಶಿವ ಯಾದವ್ ಇವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಆರ್‌ಟಿಐನಿಂದ ಮಾಹಿತಿ ಕೋರಲಾಗಿದೆ. ಇದರಲ್ಲಿ ಬೀಡಿ ಉತ್ಪಾದಕ ವಿನಯ್ ಚೌರಾಸಿಯಾ ಇವರು ೩೦ ವರ್ಷಗಳ ಹಿಂದೆ ಈ ಹೆಸರನ್ನು ನೋಂದಾಯಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ’, ಎಂದರು. (ಪೊಲೀಸರು ಈ ಬಗ್ಗೆ ಮುಂದೆ ಹೋಗಿ ಕ್ರಮ ಕೈಗೊಳ್ಳಬೇಕು ಎಂಬುದು ಅಪೇಕ್ಷಿತವಾಗಿತ್ತು, ಅದು ಏಕೆ ಕೈಗೊಳ್ಳಲಿಲ್ಲ, ಇದಕ್ಕೆ ಅವರು ಉತ್ತರಿಸಬೇಕು ! ಇತರ ಧರ್ಮದವರ ಬಗ್ಗೆ ಈ ರೀತಿಯಲ್ಲಿ ಅವಮಾನ ಆಗುತ್ತಿದ್ದರೆ, ಪೊಲೀಸರು ಇದೆ ರೀತಿಯ ನಿಲುವನ್ನು ತೋರಿಸುತ್ತಿದರೇ ? – ಸಂಪಾದಕ) ಇದರ ಬಗ್ಗೆ ಮಾಹಿತಿ ಸಿಕ್ಕಿದನಂತರ ಅಲಾಹಾಬಾದ ಉಚ್ಚ ನ್ಯಾಯಾಲಯದ ನ್ಯಾಯವಾದಿ ಅನಯ ಶ್ರೀವಾಸ್ತವ ಇವರು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಲ್ಲಿ ದೂರನ್ನು ದಾಖಲಿಸಿ ಉತ್ಪಾದಕರ ಮೇಲೆ ಭಗವಾನ್ ಶಂಕರ ಹಾಗೂ ಪಾರ್ವತಿಯ ಚಿತ್ರವನ್ನು ಬಳಸುವುದರ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದಾರೆ.