ದೇವಸ್ಥಾನ ಸರಕಾರಿಕರಣದ ವಿರುದ್ಧ ಧರ್ಮಪ್ರೇಮಿಗಳಿಂದ ಟ್ವಿಟರ್‌ನಲ್ಲಿ #FreeHinduTemples ಹೆಸರಿನ ಹ್ಯಾಶ್‌ಟ್ಯಾಗ್ ಟ್ರೆಂಡ್ !

ರಾಷ್ಟ್ರೀಯ ಟ್ರೆಂಡ್‌ನಲ್ಲಿ ಪ್ರಥಮ ಸ್ಥಾನ !

ಮುಂಬಯಿ : ಇಂದು ದೇಶದ ಅನೇಕ ಚಿಕ್ಕ ದೊಡ್ಡ ದೇವಾಲಯಗಳು ಸರಕಾರದ ನಿಯಂತ್ರಣದಲ್ಲಿವೆ. ಅವರ ಸ್ಥಿತಿ ತುಂಬಾ ಭಯಾನಕವಿದೆ. ಸರಕಾರ ನಡೆಸುವ ದೇವಾಲಯಗಳ ನಿರ್ವಹಣಾ ಸಮಿತಿಗಳಲ್ಲಿ ಭ್ರಷ್ಟಾಚಾರ ಆಗುತ್ತಿರುವುದು ಬೆಳಕಿಗೆ ಬರುತ್ತಿದೆ. ಹಿಂದೂಗಳ ಧಾರ್ಮಿಕ ಪದ್ಧತಿ, ಆಚರಣೆಗಳು ಮತ್ತು ವ್ಯವಸ್ಥೆಗಳಲ್ಲಿ ಸರಕಾರ ನಿರಂಕುಶವಾಗಿ ಹಸ್ತಕ್ಷೇಪ ಮಾಡುತ್ತಿದೆ. ಈ ಕಾರಣದಿಂದಾಗಿ, ದೇವಸ್ಥಾನಗಳ ಮತ್ತು ತೀರ್ಥಕ್ಷೇತ್ರಗಳ ಸಾತ್ವಿಕತೆ ನಾಶವಾಗುತ್ತಿದೆ. ಇದರ ವಿರುದ್ಧ ಮಾರ್ಚ್ ೧೪ ರಂದು ಬೆಳಗ್ಗೆ ಟ್ವಿಟರ್‌ನಲ್ಲಿ #FreeHinduTemples ಎಂಬ ಹೆಸರಿನಲ್ಲಿ ಹ್ಯಾಶ್‌ಟ್ಯಾಗ್ ಉಪಯೋಗಿಸಿ ಧರ್ಮ ಪ್ರೇಮಿಗಳು ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಬಿಡಿಸುವಂತೆ ಬೇಡಿಕೆ ಇಟ್ಟರು. ಈ ಕುರಿತು ೩ ಲಕ್ಷಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು ಮತ್ತು ಮಧ್ಯಾಹ್ನದವರೆಗೆ ಇದು ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಇದರಲ್ಲಿ ದೇವಾಲಯಗಳ ದುಸ್ಥಿತಿಯನ್ನು ಬದಲಾಯಿಸುವ ಸಲುವಾಗಿ ದೇವಾಲಯಗಳ ನಿಯಂತ್ರಣವನ್ನು ಜಾತ್ಯತೀತ ಸರಕಾರಗಳ ಕೈಯಿಂದ ಬಿಡಿಸಿ ಭಕ್ತರಿಗೆ ಹಸ್ತಾಂತರಿಸಬೇಕೆಂದು ಧರ್ಮಪ್ರೇಮಿಗಳು ಒತ್ತಾಯಿಸಿದರು.

ಕೆಲವು ಧರ್ಮನಿಷ್ಠ ಹಿಂದೂಗಳು ಮಾಡಿದ ಟ್ವೀಟ್‌ಗಳು!

೧. ಯಾವುದೇ ಮಸೀದಿ ಅಥವಾ ಚರ್ಚ್‌ಅನ್ನು ತಮ್ಮ ನಿಯಂತ್ರಣದಲ್ಲಿ ತೆಗೆದುಕೊಳ್ಳಲು ಸರಕಾರ ಏಕೆ ಧೈರ್ಯ ಮಾಡುವುದಿಲ್ಲ ? ಹಿಂದೂ ದೇವಾಲಯಗಳ ಬಗ್ಗೆ ಮಾತ್ರ ಅಂತಹ ಧೈರ್ಯವನ್ನು ತೋರಿಸುತ್ತಿದೆ ?

. ದೇವಾಲಯದಲ್ಲಿ, ಭಕ್ತರು ಶ್ರದ್ಧಾ ಭಕ್ತಿಯಿಂದ ಹಣವನ್ನು ಅರ್ಪಿಸುತ್ತಾರೆ; ಆದರೆ ಸರಕಾರಿಕರಣದಿಂದಾಗಿ, ಈ ದೇವಾಲಯಗಳಲ್ಲಿ ಮುಂದೆ ಈ ಸಂಪತ್ತು ಏನಾಗುತ್ತದೆ ಎಂದು ತಿಳಿಯುವುದಿಲ್ಲ. ದೇವಾಲಯಗಳಲ್ಲಿ ಭ್ರಷ್ಟಾಚಾರದ ವರದಿಯಾಗಿದೆ. ಒಂದುವೇಳೆ ದೇವಾಲಯಗಳಲ್ಲಿ ನೀಡಲಾಗುವ ಹಣಗಳ ಭ್ರಷ್ಟಾಚಾರ ಮಾಡುತ್ತಿದ್ದಲ್ಲಿ ಹಾಗೂ ಹಣವು ಭ್ರಷ್ಟರ ಜೇಬಿಗೆ ಹೋಗುತ್ತಿದ್ದರೆ, ಭಕ್ತರು ದೇವಾಲಯಗಳಿಗೆ ಏಕೆ ದಾನ ಮಾಡಬೇಕು ?

೩. ದೇವಾಲಯಗಳಲ್ಲಿ ಸಂಗ್ರಹಿಸಿದ ಹಣವನ್ನು ಹಿಂದೂಗಳ ಧಾರ್ಮಿಕ ಕಾರ್ಯಗಳಿಗಾಗಿ ಮಾತ್ರ ಖರ್ಚು ಮಾಡಬೇಕು. ಹಿಂದೂಗಳಿಗೆ ಧರ್ಮ ಶಿಕ್ಷಣವನ್ನು ನೀಡಲು, ಹಿಂದೂಗಳ ಶಿಥಿಲವಾದ ದೇವಾಲಯಗಳ ನವೀಕರಣ, ಗುರುಕುಲಗಳ ನಿರ್ಮಾಣ ಇತ್ಯಾದಿಗಳಿಗೆ ಇದನ್ನು ಬಳಸಬೇಕು.