ವೆಬ್ ಸರಣಿಯಲ್ಲಿ ಮಕ್ಕಳ ಲೈಂಗಿಕ ಸಂಬಂಧಗಳ ಚಿತ್ರಣ
ವೆಬ್ ಸರಣಿಗಳಿಗಾಗಿ ಕೇಂದ್ರ ಸರಕಾರವು ಮಾಡಿದ ನಿಯಮಾವಳಿಂದಾಗಿ ವೆಬ್ ಸರಣಿಗಳ ನಿರ್ಮಾಪಕರ ಮೇಲೆ ಯಾವುದೇ ರೀತಿಯ ಪ್ರಭಾವ ಆದಂತೆ ಕಂಡುಬರುತ್ತಿಲ್ಲ ! ಅದಕ್ಕಾಗಿಯೇ, ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಅಂತಹ ಚಿತ್ರಗಳನ್ನು ತಡೆಯಲು ಕಾನೂನು ಇರಲೇಬೇಕು !
ಮುಂಬಯಿ : ‘ಬಾಂಬೆ ಬೇಗಮ್ಸ್’ ಎಂಬ ನೆಟ್‌ಫ್ಲಿಕ್ಸ್ ವೆಬ್ ಸರಣಿಯ ಪ್ರಸಾರವನ್ನು ನಿಷೇಧಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್.ಸಿ.ಪಿ.ಸಿ.ಆರ್) ಒತ್ತಾಯಿಸಿದೆ. ವೆಬ್ ಸರಣಿಯನ್ನು ಮಾರ್ಚ್ ೮ ಅಂದರೆ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರದರ್ಶಿಸಲಾಯಿತು. ಇದರಲ್ಲಿ ಮಕ್ಕಳ ಲೈಂಗಿಕ ಸಂಬಂಧಗಳನ್ನು ಚಿತ್ರಿಸಲಾಗಿದೆ ಎಂದು ಎನ್.ಸಿ.ಪಿ.ಸಿ.ಆರ್ ಆರೋಪಿಸಿ ನಿಷೇಧಿಸುವಂತೆ ಒತ್ತಾಯಿಸಿದೆ. ‘ಈ ವೆಬ್ ಸರಣಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿ’ ಎಂದು ನೆಟ್‌ಫ್ಲಿಕ್ಸ್‌ಗೆ ನೋಟಿಸ್ ಕಳುಹಿಸಲಾಗಿದೆ. ೨೪ ಗಂಟೆಯೊಳಗೆ ವಿವರಣೆ ನೀಡುವಂತೆ ಒತ್ತಾಯಿಸಲಾಗಿದೆ. ‘ಹಾಗೆ ಮಾಡದೇ ಇದ್ದಲ್ಲಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.
೧. ‘ಬಾಂಬೆ ಬೇಗಮ್ಸ್’ನಲ್ಲಿ ಚಿಕ್ಕ ಮಕ್ಕಳ ಲೈಂಗಿಕ ಸಂಬಂಧ ಮತ್ತು ಮಾದಕ ದ್ರವ್ಯಗಳನ್ನು ಬಳಸುವುದನ್ನು ತೋರಿಸಿದೆ. ‘ಈ ರೀತಿಯ ಚಿತ್ರಣವು ಸಮಾಜದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಅದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದರಿಂದ ಮಕ್ಕಳ ಮೇಲಿನ ದೌರ್ಜನ್ಯದ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ದೃಶ್ಯಗಳು ತಪ್ಪ ಘಟನೆಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದು ಎನ್.ಸಿ.ಪಿ.ಸಿ.ಆರ್ ನೆಟ್‌ಫ್ಲಿಕ್ಸ್ ವಿರುದ್ಧದ ಹೇಳಿಕೆಯಲ್ಲಿ ತಿಳಿಸಿದೆ.
೨. ವೆಬ್ ಸರಣಿಯಲ್ಲಿ ತಿಲಕ ಹಚ್ಚಿಕೊಂಡಿರುವ ನಾಯಕನನ್ನು ತೋರಿಸಲಾಗಿದೆ. ಆತ ಭಗವದ್ಗೀತೆಯನ್ನು ಉಲ್ಲೇಖಿಸಿ, ‘ಪುರುಷರ ಭಾವನೆಗಳನ್ನು ತೃಪ್ತಿಪಡಿಸುವುದು ಮಹಿಳೆಯ ಅತ್ಯುನ್ನತ ಧರ್ಮವಾಗಿದೆ’ ಎಂದು ಹೇಳುತ್ತಿರುವಂತೆ ತೋರಿಸಲಾಗಿದೆ. (ಇದರಿಂದ, ‘ಶ್ರೀಮದ್ ಭಗವದ್ಗೀತೆ ಸ್ತ್ರೀ ವಿರೋಧಿ’ ಎಂದು ಈ ವೆಬ್ ಸರಣಿಯಿಂದ ತೋರಿಸಲು ಒಂದು ಅಶ್ಲಾಘ್ಯ ಪ್ರಯತ್ನ ಮಾಡಿದೆ. ಹಿಂದೂಗಳು ಇಂತಹ ವೆಬ್ ಸರಣಿಗಳನ್ನು ಕಾನೂನುಬದ್ಧ ರೀತಿಯಲ್ಲಿ ವಿರೋಧಿಸಬೇಕು ! – ಸಂಪಾದಕ)
೩. ಈ ವೆಬ್ ಸರಣಿಯಲ್ಲಿ ಪೂಜಾ ಭಟ್ ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂಬಯಿನ ವಿವಿಧ ಭಾಗಗಳ ೫ ಮಹಿಳೆಯರ ಜೀವನವನ್ನು ಈ ವೆಬ್ ಸರಣಿ ಆಧರಿಸಿದೆ.