ಕೇಂದ್ರ, ರಾಜ್ಯ ಮತ್ತು ೬ ಪಕ್ಷಗಳಿಗೆ ಉತ್ತರಿಸಲು ಜಿಲ್ಲಾ ನ್ಯಾಯಾಲಯದ ಆದೇಶ
ಹಿಂದೂ ಬಹುಸಂಖ್ಯಾತ ದೇಶದಲ್ಲಿ, ಹಿಂದೂಗಳು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನ್ಯಾಯಾಲಯಗಳಲ್ಲಿ ಅಥವಾ ಇತರ ಹಂತಗಳಲ್ಲಿ ದೀರ್ಘಕಾಲ ಹೋರಾಡ ಬೇಕಾಗಿ ಬರುವುದು ನಾಚಿಕೆಗೇಡಿನ ಸಂಗತಿ ! ಹಿಂದೂಗಳಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಹಿಂದೂ ರಾಷ್ಟ್ರವೇ ಬೇಕು !
ವಾರಾಣಸಿ (ಉತ್ತರ ಪ್ರದೇಶ) – ಪ್ರಸ್ತುತ ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಮತ್ತು ಅಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲು ಅನುಮತಿ ಕೋರಿ ವಾರಾಣಸಿಯ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ೬ ಪಕ್ಷಗಳಿಂದ ಉತ್ತರ ಕೋರಿದೆ. ಕಾಶಿ ವಿಶ್ವನಾಥ ದೇವಾಲಯವನ್ನು ನೆಲಸಮಗೊಳಿಸಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿತ್ತು.
೧. ನ್ಯಾಯಾಲಯವು ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರಕಾರದ ಜೊತೆಗೆ ಜಿಲ್ಲಾಧಿಕಾರಿ, ವಾರಾಣಸಿಯ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಪ್ರದೇಶ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಅಂಜುಮಾನ್ ಇಂತೆಜಾಮಿಯಾ ಮಸೀದಿಯ ಆಡಳಿತ ಮಂಡಳಿ ಮತ್ತು ಶ್ರೀ ಕಾಶಿ ವಿಶ್ವನಾಥ ಮಂದಿರದ ಟ್ರಸ್ಟಿಗಳ ಮಂಡಳಿಗೆ ಸಹ ನೋಟಿಸ್ ಕಳುಹಿಸಿದೆ. ಈ ಎಲ್ಲ ಪಕ್ಷಗಳು ತಮ್ಮ ಉತ್ತರಗಳನ್ನು ಏಪ್ರಿಲ್ ೨ ರವರೆಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ ೯ ರಂದು ನಡೆಯಲಿದೆ.
೨. ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಸನಾತನ ಧರ್ಮದ ಅನುಯಾಯಿಗಳು ಮತ್ತು ಶಿವ ಭಕ್ತರು, ನ್ಯಾಯಾಲಯಕ್ಕೆ ಒಂದು ಆದೇಶ ಹೊರಡಿಸುವಂತೆ ಕೋರಿದ್ದಾರೆ. ಆ ಆದೇಶವನ್ನು ಜಾರಿಗೊಳಿಸಿದರೆ, ಭಕ್ತರು ವಿವಾದಿತ ಪ್ರದೇಶದಲ್ಲಿ ಭಗವಾನ್ ಹನುಮಾನ್, ದೇವಿ ಗೌರಿ ಮತ್ತು ಇತರ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿ ಸಿಗಬಹುದು.
೩. ವಿವಾದಿತ ಪ್ರದೇಶ ಭಗವಾನ ಶಿವನದ್ದಾಗಿದೆ. ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ೧೬೬೯ ರಲ್ಲಿ ಈ ದೇವಾಲಯವನ್ನು ನೆಲಸಮ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಲಾಯಿತು. ಹಳೆಯ ದೇವಾಲಯದ ಅವಶೇಷಗಳನ್ನು ಇಂದಿಗೂ ಜ್ಞಾನವಾಪಿ ಮಸೀದಿ ಕಟ್ಟಡದಲ್ಲಿ ಕಾಣಬಹುದು.
೪. ವಿವಾದಿತ ಸ್ಥಳದಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಪ್ರತಿವಾದಿಗಳು ದೇವಾಲಯ ನಿರ್ಮಾಣದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅರ್ಜಿಯ ಮೂಲಕ ನ್ಯಾಯಾಲಯಕ್ಕೆ ಆದೇಶ ಕೋರಿದೆ.
೫. ಮಥುರಾದ ಇನ್ನೊಂದು ನ್ಯಾಯಾಲಯದಲ್ಲಿ ಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಇದೇ ರೀತಿಯ ಅರ್ಜಿಯ ವಿಚಾರಣೆ ನಡೆಸಲಾಗುತ್ತಿದೆ.