ಕಳ್ಳಸಾಗಣಿಕೆದಾರರೊಂದಿಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗನೊಂದಿಗೆ ಆರ್ಥಿಕ ನಂಟು

ಮಾದಕವಸ್ತು ನಿಯಂತ್ರಣ ದಳವು (ಎನ್.ಸಿ.ಬಿ.ಯು) ಬೆಂಗಳೂರಿನಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯ ಜಾಲದ ಮುಖ್ಯ ರೂವಾರಿ ಮಹಮ್ಮದ್ ಅನುಪನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯಲ್ಲಿ ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ ಪಕ್ಷದ ನಾಯಕ ಹಾಗೂ ನಟ ಕೊಡಿಯಾರಿ ಬಾಲಕೃಷ್ಣನ್‌ನ ಮಗ ಬಿನೇಶನ ಉಲ್ಲೇಖವೂ ಇದೆ.

ಗೌರಿ ಲಂಕೇಶರ ಸ್ಮರಣಾರ್ಥ ಸೆಪ್ಟೆಂಬರ ೫ ರಂದು ಆಯೋಜಿಸಲಾಗಿರುವ ರಾಷ್ಟ್ರೀಯ ಅಭಿಯಾನದಲ್ಲಿ ೪೦೦ ಕ್ಕೂ ಹೆಚ್ಚು ಸಂಘಟನೆಗಳ ಸಹಭಾಗ

ಭಾರತಾದ್ಯಂತ ೪೦೦ ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಸೆಪ್ಟೆಂಬರ ೫ ರಂದು ಗೌರಿ ಲಂಕೇಶ ಇವರ ಸ್ಮರಣಾರ್ಥ ಜನರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ, ಅನ್ಯಾಯಗಳ ವಿರುದ್ಧ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ. ಗೌರಿ ಲಂಕೇಶ ಇವರ ಹತ್ಯೆಯ ಮೂರನೇ ವಾರ್ಷಿಕದಿನದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

‘ಸೆರೆಮನೆಯಲ್ಲಿನ ಮುಸಲ್ಮಾನ ಬಂಧಿತರ ಸಂಖ್ಯೆ ಹೆಚ್ಚಿರುವುದು, ಇದು ಒಂದು ಅನ್ಯಾಯದ ಮತ್ತೊಂದು ಸಾಕ್ಷಿ !’ – ಅಸಾದುದ್ದೀನ್ ಓವೈಸಿ

ಮೊದಲಿನಿಂದಲೂ ಮುಸಲ್ಮಾನ ಪುರುಷರನ್ನು ದೊಡ್ಡ ಸಂಖ್ಯೆಯಲ್ಲಿ ಬಂಧಿಸಲಾಗಿತ್ತು; ಆದರೆ ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲರೂ ಕಾನೂನಿನ ದೃಷ್ಟಿಯಿಂದ ನಿರಪರಾಧಿಗಳಾಗಿದ್ದಾರೆ; ಆದರೆ ಹೀಗಿರುವಾಗಲೂ ಅವರು ಅನೇಕ ವರ್ಷಗಳಿಂದ ಜೈಲಿನಲ್ಲಿರಬೇಕಾಗುತ್ತಿದೆ. ಅನ್ಯಾಯವಾಗುತ್ತಿರುವುದರ ಇದು ಮತ್ತೊಂದು ಪುರಾವೆಯಾಗಿದೆ.

ಉಜ್ಜೈನ್‌ನಲ್ಲಿನ ಮಹಾಕಾಲ ದೇವಸ್ಥಾನದ ಶಿವಲಿಂಗದ ಮೇಲೆ ಪಂಚಾಮೃತದ ಬದಲು ಕೇವಲ ಶುದ್ಧ ಹಾಲಿನ ಅಭಿಷೇಕವನ್ನು ಮಾಡಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ಮಧ್ಯಪ್ರದೇಶದ ಉಜ್ಜೈನ್‌ನಲ್ಲಿನ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಶಿವಲಿಂಗವು ಸವೆಯುವುದನ್ನು ತಡೆಗಟ್ಟಲು ಶಿವ ಭಕ್ತರು ಅದರ ಮೇಲೆ ಪಂಚಾಂಮೃತದ ಅಭಿಷೇಕವನ್ನು ಮಾಡಬೇಡಿ. ಶಿವಲಿಂಗದ ಮೇಲೆ ಶುದ್ಧ ಹಾಲಿನ ಅಭಿಷೇಕವನ್ನು ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ.

ಜಬಲಪುರ (ಮಧ್ಯಪ್ರದೇಶ) ಆಡಳಿತ ವರ್ಗದವರಿಂದ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಕಸದ ವಾಹನಗಳ ಬಳಕೆ : ವಾಹನವನ್ನು ತಡೆದ ಹಿಂದುತ್ವನಿಷ್ಠ ಸಂಘಟನೆಗಳು

ಇಲ್ಲಿಯ ಪುರಸಭೆಯ(ಮುನಿಸಿಪಾಲಿಟಿ) ಆಡಳಿತವರ್ಗದವರು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಕಸದ ವಾಹವನ್ನು ಉಪಯೋಗಿಸುತ್ತಿದ್ದರು. ಇದನ್ನು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸುತ್ತಾ ಆ ವಾಹನವನ್ನು ತಡೆಗಟ್ಟಿದರು.

೬ ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಧಕ್ಕೆಯಾಗುವಂತಿದ್ದ ಪಾಠ ರದ್ದು

ರಾಜ್ಯದಲ್ಲಿ ೬ ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಅವಮಾನಿಸುವ ಪಾಠವನ್ನು ಕೈಬಿಡಲಾಗಿದೆ, ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಇವರು ಮಾಹಿತಿಯನ್ನು ನೀಡಿದರು. ಈ ಪಾಠದ ಬಗ್ಗೆ ನಗರದ ಶ್ರೀಕೃಷ್ಣ ಮಠದ ಈಶಪ್ರಿಯತೀರ್ಥರು ಆಕ್ಷೇಪವನ್ನು ಆಡಿಯೋ ಮೂಲಕ ಸಚಿವರಿಗೆ ಕಳುಹಿಸಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಮೇಲಿನ ನೋಟಿಸನ್ನು ವಜಾ ಮಾಡಲು ಕಾನೂನು ಹೋರಾಟ ಮಾಡಿದ ನ್ಯಾಯವಾದಿ ಶ್ಯಾಮಪ್ರಸಾದ ಕೈಲಾರ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಒಂದು ತಾಲೂಕಿನಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯ ಆಯೋಜನೆ ಮಾಡಲಾಗಿತ್ತು. ಸಮಿತಿಯ ವತಿಯಿಂದ ಕಾರ್ಯಕ್ರಮದ ಪ್ರಸಾರದ ದೃಷ್ಟಿಯಿಂದ ಭಿತ್ತಿಪತ್ರಗಳನ್ನು ಅಂಟಿಸುವುದು, ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುವುದು ಮತ್ತು ಕಾರ್ಯಕ್ರಮ ಆಯೋಜನೆ ಇವುಗಳಿಗಾಗಿ ಅನುಮತಿ ಪಡೆಯಲಾಗಿತ್ತು.

೧೦ ನೇ ತರಗತಿಯ ಪರೀಕ್ಷೆಯಲ್ಲಿ ಸನಾತನದ ಬಾಲ ಸಾಧಕರ ಸುಯಶಸ್ಸು !

ಪ್ರತಿ ವಾರ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುತ್ತಾನೆ. ಪ್ರತಿದಿನ ಬೆಳಗ್ಗೆ ೫.೩೦ ಗಂಟೆಗೆ ಏಳುತ್ತಾನೆ ಮತ್ತು ತಪ್ಪದೇ ಅಗ್ನಿಹೋತ್ರ, ಸಂಧ್ಯಾವಂದನೆ ಮಾಡುತ್ತಾನೆ. ಈ ಬಾರಿ ಪರೀಕ್ಷೆಯ ದಿನಾಂಕ ಬದಲಾಗುತ್ತಿದ್ದರೂ ಅವನು ವಿಚಲಿತನಾಗದೆ ವಿದ್ಯಾಭ್ಯಾಸ ಮತ್ತು ವ್ಯಷ್ಟಿ ಸಾಧನೆಯತ್ತ ಗಮನ ಕೊಡುತ್ತಿದ್ದರು. ‘ಇದೆಲ್ಲ ಗುರುಕೃಪೆ ಮತ್ತು ಗುರುಗಳು ಹೇಳಿದ ಸಾಧನೆಯಿಂದ ಸಾಧ್ಯವಾಯಿತು ಎನ್ನುತ್ತಾನೆ ಎಂದು ಹೇಳಿದ್ದಾರೆ.

ಲಖಿಸರಾಯ(ಬಿಹಾರ)ದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಶೃಂಗಿಋಷಿ ಧಾಮ್‌ನ ಅರ್ಚಕರ ಹತ್ಯೆ

ಇಲ್ಲಿಂದ ಅಪಹರಿಸಲಾಗಿದ್ದ ಓರ್ವ ಆರ್ಚಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಆರ್ಚಕರ ಹೆಸರು ನೀರಜ ಝಾ ಎಂದಾಗಿದೆ. ನೀರಜ ಝಾ ಇವರು ಅಗಸ್ಟ್ ೨೨ ರಂದು ಪೂಜೆ ಮಾಡುತ್ತಿರುವಾಗಲೇ ನಕ್ಸಲರು ಅವರನ್ನು ಅಪಹರಿಸಿದರು. ನಂತರ ನಕ್ಸಲರು ನೀರಜ ಝಾ ಇವರ ಕುಟುಂಬದವರಲ್ಲಿ ೧ ಕೋಟಿ ರೂಪಾಯಿಗಳ ಒತ್ತೆ ಹಣವನ್ನು ಕೇಳಿದರು.

ಗಣೇಶೋತ್ಸವದ ಕಾಲಾವಧಿಯಲ್ಲಿ ವಿವಿಧ ಮಾಧ್ಯಮಗಳಿಂದ ಆಗುತ್ತಿರುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ದೊರೆತ ಯಶಸ್ಸು

ಗಣೇಶೋತ್ಸವದ ಕಾಲದಲ್ಲಿ ವಿವಿಧ ಮಾಧ್ಯಮಗಳಿಂದಾಗುವ ಶ್ರೀ ಗಣೇಶನ ವಿಡಂಬನೆಯನ್ನು ತಡೆಗಟ್ಟುವಲ್ಲಿ ಹಿಂದೂ ಜನಜಾಗೃತಿ ಸಮಿತಿಗೆ ಯಶಸ್ಸು ಸಿಕ್ಕಿದೆ. ಫ್ಲಿಪ್‌ಕಾರ್ಟ್, ಮ್ಯಾಕ್‌ಡೊನಾಲ್ಡ್ , ಹಾಗೂ ಮಧ್ಯಪ್ರದೇಶ ಸೈಬರ ಪೊಲೀಸರು ಚಿತ್ರಗಳ ಮಾಧ್ಯಮದಿಂದ ಮಾಡಿದ ಶ್ರೀ ಗಣೇಶನ ವಿಡಂಬನೆಯನ್ನು ಹಿಂದೂಗಳು ಸಂಘಟಿತರಾಗಿ ಕಾನೂನು ಮಾರ್ಗದಿಂದ ವಿರೋಧಿಸಿ ತಡೆಗಟ್ಟಿದರು.