ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಡಾ. ಉದಯ ಧುರಿಯವರಿಂದ ಮುಂಬಯಿ ಪೊಲೀಸ್ ಆಯುಕ್ತರಲ್ಲಿ ದೂರು !

`AstaGuru’ ಈ ಸಂಸ್ಥೆಯು ಹಿಂದೂದ್ವೇಷಿ ಚಿತ್ರಕಾರ ಎಮ್.ಎಫ್. ಹುಸೇನ ಇವರು ವಿಕೃತವಾಗಿ ಬಿಡಿಸಿದ ಶ್ರೀ ಗಣೇಶ ಮತ್ತು ಭಗವಾನ ಶಿವನ ಚಿತ್ರಗಳನ್ನು ಗಣೇಶೋತ್ಸವದ ಕಾಲದಲ್ಲಿ ಆನ್‌ಲೈನ್‌ದಲ್ಲಿ ಮಾರಾಟಕ್ಕೆ ಇಟ್ಟಿತ್ತು. `AstaGuru’ ಈ ಹರಾಜು ಮಾಡುವ ಸಂಸ್ಥೆಯು 29 ಮತ್ತು 30 ಆಗಸ್ಟ್ 2020 ರಲ್ಲಿ ‘ಆನ್‌ಲೈನ್’ ಮೂಲಕ ಈ ಚಿತ್ರಗಳನ್ನು ಹರಾಜು ಮಾಡಲು ಆಯೋಜನೆ ಮಾಡಿತ್ತು. ಆದರೆ ಇದು ವರೆಗೂ ಈ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ.

ಕನ್ನಡ ಹಾಗೂ ಹಿಂದಿ ಸನಾತನ ಪಂಚಾಂಗ ಆಪ್ ಪ್ರತಿಯೊಂದು ೧೦ ಲಕ್ಷಕ್ಕೂ ಹೆಚ್ಚು ಜನರಿಂದ ‘ಡೌನ್‌ಲೋಡ್’ !

‘ಸನಾತನ ಸಂಸ್ಥೆಯ ವತಿಯಿಂದ ಪ್ರತೀವರ್ಷ ವಾರ್ಷಿಕ ‘ಸನಾತನ ಪಂಚಾಂಗ’ (ದಿನದರ್ಶಿಕೆ) ಪ್ರಕಾಶಿಸಲಾಗುತ್ತದೆ. ಅಲ್ಪಾವಧಿಯಲ್ಲೇ ಈ ಪಂಚಾಗವು ಜನಪ್ರಿಯವಾಗಿದೆ. ಈ ಪಂಚಾಂಗ ಅಂದರೆ ಸಾಧನೆ ಹಾಗೂ ಧರ್ಮಶಿಕ್ಷಣ ವಿಷಯಗಳಿಂದ ಪರಿಪೂರ್ಣವಾಗಿದೆ. ‘ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗ !’ ಎಂದು ಇದರ ಘೋಷವಾಕ್ಯವಾಗಿದೆ.

ನಗದು ಬಿಕ್ಕಟ್ಟಿನಿಂದಾಗಿ ತಿರುಪತಿ ದೇವಸ್ಥಾನವು ೧೨ ಸಾವಿರ ಕೋಟಿ ರೂಪಾಯಿಗಳನ್ನು ಅಡವಿಟ್ಟು ತಿಂಗಳ ಬಡ್ಡಿ ತೆಗೆದುಕೊಳ್ಳುವುದು

ತಿರುಮಲ ತಿರುಪತಿಯಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೋನಾದ ಸಂಕಟದಿಂದಾಗಿ ಭಕ್ತರಿಂದ ನಗದು ರೂಪದ ಅರ್ಪಣೆಗಳಲ್ಲಿ ತೀವ್ರ ಇಳಿಕೆಯಾದುದರಿಂದ ತಿರುಮಲ ತಿರುಪತಿ ದೇವಸ್ಥಾನವು ಆಗಸ್ಟ್ ೨೮ ರಂದು ನಡೆದ ಸಭೆಯಲ್ಲಿ ೧೨ ಸಾವಿರ ಕೋಟಿ ರೂಪಾಯಿಗಳ ನಗದನ್ನು ಅಡವಿಟ್ಟು ಬಡ್ಡಿಯನ್ನು ತಿಂಗಳ ಸ್ವರೂಪದಲ್ಲಿ ರೂಪಾಂತರಿತಗೊಳಿಸುವ ನಿರ್ಣಯವನ್ನು ತೆಗೆದುಕೊಂಡಿತು.

ಶಬರಿಮಲೈ ದೇವಸ್ಥಾನ ಬಂಗಾರವನ್ನು ಅಡವಿಟ್ಟು ಬಡ್ಡಿ ಪಡೆಯಲಿರುವ ತ್ರಾವಣಕೋರ್ ದೇವಸ್ವಮ್ ಮಂಡಳಿ

ಕೊರೋನಾದಿಂದಾಗಿ ದೇವಸ್ಥಾನಗಳ ಉತ್ಪನ್ನದಲ್ಲಿ ವ್ಯತ್ಯಯವಾಗಿದ್ದರಿಂದ ಶಬರಿಮಲೈ ದೇವಸ್ಥಾನದ ಬಂಗಾರವನ್ನು ರಿಝರ್ವ್ ಬ್ಯಾಂಕಿನಲ್ಲಿ ಅಡವಿಟ್ಟು ಅದರ ಬಡ್ಡಿಯನ್ನು ತೆಗೆದುಕೊಂಡು ದೇವಸ್ಥಾನದ ನಿಯಮಿತ ಖರ್ಚನ್ನು ತುಂಬಿಸುವ ಬಗ್ಗೆ ತ್ರಾವಣಕೋರ ದೇವಸ್ವಮ್ ಬೋರ್ಡ್ ನಿರ್ಣಯ ತೆಗೆದುಕೊಂಡಿದೆ.

ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಇವರ ಭದ್ರತೆಯಲ್ಲಿ ಹೆಚ್ಚಳ

ಇಲ್ಲಿಯ ಗೋಶಾ ಮಹಲ ಚುನಾವಣಾಕ್ಷೇತ್ರದಲ್ಲಿಯ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರ ಮೇಲೆ ಭಯೋತ್ಪಾದನೆ ದಾಳಿಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

‘ಪಿತೃಪಕ್ಷದಲ್ಲಿಯ ಶ್ರಾದ್ಧದ ಮಹಿಮೆ ಹಾಗೂ ಶಾಸ್ತ್ರ’ ಈ ವಿಷಯದಲ್ಲಿ ವಿಶೇಷ ಕಾರ್ಯಕ್ರಮ !

ಪಿತೃಪಕ್ಷದಲ್ಲಿ ‘ಪಿತೃಋಣ’ವನ್ನು ತೀರಿಸಲು ಶ್ರಾದ್ಧವಿಧಿಯನ್ನು ಮಾಡುವುದು ಆವಶ್ಯಕವಾಗಿರುತ್ತದೆ; ಆದರೆ ಪ್ರಸ್ತುತ ಅನೇಕ ಹಿಂದೂಗಳಲ್ಲಿರುವ ಧರ್ಮಶಿಕ್ಷಣದ ಅಭಾವ, ತಥಾಕಥಿತ ಬುದ್ಧಿಜೀವಿಗಳ ಅಪಪ್ರಚಾರ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಕಾಣುವ ವೃತ್ತಿಯಿಂದಾಗಿ ಶ್ರಾದ್ಧವಿಧಿಯತ್ತ ದುರ್ಲಕ್ಷ ಮಾಡುವ ಪ್ರಮಾಣ ಹೆಚ್ಚಾಗುತ್ತಿದೆ.

ಮ್ಯಾಕಡೊನಾಲ್ಡ್‌ನಿಂದ ಆಗುತ್ತಿದ್ದ ಶ್ರೀ ಗಣೇಶನ ವಿಡಂಬನೆಯ ವಿರುದ್ಧ ಧರ್ಮಾಭಿಮಾನಿಗಳಿಂದ ಪತ್ರ

ಮ್ಯಾಕಡೊನಾಲ್ಡ್ ಸಂಸ್ಥೆಯಿಂದ ‘ಫ್ರೆಂಚ್ ಫ್ರೈಜ’ ಈ ಆಹಾರ ಪದಾರ್ಥದ ಉತ್ಪಾದನೆಯ ಜಾಹೀರಾತಿನಲ್ಲಿ ಫ್ರೆಂಚ್ ಫ್ರೈಜನಿಂದ ಶ್ರೀ ಗಣೇಶನ ಕೇವಲ ಸೊಂಡಿಲಿನ ಆಕಾರ ಮಾಡಿದ್ದರು ಮತ್ತು ಸೊಂಡಿಲಿನ ಕೊನೇಯ ಭಾಗದಲ್ಲಿ ಸಾಸ್‌ನ ಬಟ್ಟಲು ಇಡಲಾಗಿತ್ತು. ಇನ್ನೊಂದು ಚಿತ್ರದಲ್ಲಿ ಫ್ರೆಂಚ ಫ್ರೈಜನಿಂದ ಶ್ರೀ ಗಣೇಶನ ಚಿತ್ರ ಬಿಡಿಸಿ ಸಮಸ್ತ ಹಿಂದೂ ಭಕ್ತರ ಭಾವನೆಯನ್ನು ನೋಯಿಸಲಾಗಿದೆ.

ದೇಶದಲ್ಲಿ ಈಗ ಮುಸಲ್ಮಾನರು ಅಲ್ಪಸಂಖ್ಯಾತರಾಗಿಲ್ಲ, ಆದ್ದರಿಂದ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತನ್ನಿ !

ಅಯೋಧ್ಯೆಯಲ್ಲಿ ಇನನು ಭಗವಾನ ಶ್ರೀರಾಮನ ದೇವಸ್ಥಾನ ನಿರ್ಮಿಸಬೇಕಾಗಿದೆ, ಅಷ್ಟರಲ್ಲೇ ದೇಶದಲ್ಲಿ ಅದನ್ನು ಧ್ವಂಸ ಮಾಡುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂದು ಹೇಳುವುದು ಯೋಗ್ಯವಿಲ್ಲ. ಅದಕ್ಕಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ರೂಪಿಸಬೇಕು

‘ಐಐಟಿ ಇಂದೂರ್’ನಲ್ಲಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಕಲಿಸಲಾಗುತ್ತಿದೆ !

ಪ್ರಾಚೀನ ಗಣಿತತಜ್ಞ ಭಾಸ್ಕರಾಚಾರ್ಯ ಇವರ ‘ಲೀಲಾವತಿ’ ಈ ಗಣಿತ ವಿಷಯದ ಗ್ರಂಥದೊಂದಿಗೆ ಭಾರತದಲ್ಲಿನ ಇತರ ಪ್ರಾಚೀನ ವೈಜ್ಞಾನಿಕ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ಅರಿತುಕೊಂಡು ಅದರ ಮೂಲ ರೂಪದಲ್ಲಿ ತಿಳಿದುಕೊಳ್ಳಲು ‘ಐಐಟಿ ಇಂದೂರ್’ ಇದು ೧೫ ದಿನಗಳ ವಿಶೇಷ ಆನ್‌ಲೈನ್ ‘ಕೋರ್ಸ್’ ಆರಂಭಿಸಿದೆ.

ರಾಜ್ಯದಲ್ಲಿ ‘ಲವ್ ಜಿಹಾದ್’ನ ಘಟನೆಯನ್ನು ತಡೆಗಟ್ಟಲು ‘ಕಾರ್ಯ ಯೋಜನೆ’ ನಿರ್ಮಿಸಲು ಯೋಗಿ ಆದಿತ್ಯನಾಥ ಇವರ ಆದೇಶ

ಇತ್ತೀಚೆಗೆ ಉತ್ತರಪ್ರದೇಶದ ಮೆರಠ, ಕಾನಪುರ ಹಾಗೂ ಲಖಿಮಪುರ ಖಿರಿಯಲ್ಲಿ ಮತಾಂಧರು ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮೋಸಗೊಳಿಸುವ ಘಟನೆಯು ಬಹಿರಂಗಗೊಂಡಿತ್ತು. ‘ಲವ್ ಜಿಹಾದ್’ನ ಘಟನೆಗಳಲ್ಲಿ ಮೆರಠ ಹಾಗೂ ಲಖಿಮಪುರ ಖಿರಿಯಲ್ಲಿ ಹಿಂದೂ ಹುಡುಗಿಯರ ಹತ್ಯೆಯೂ ಆಗಿತ್ತು.