೬ ನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಧಕ್ಕೆಯಾಗುವಂತಿದ್ದ ಪಾಠ ರದ್ದು

ಯಜ್ಞದ ಹೆಸರಿನಲ್ಲಿ ಪ್ರಾಣಿಗಳ ಹತ್ಯೆಯಾಗುತ್ತಿರುವ ಹಾಗೂ ಪುರೋಹಿತರ ಬಗ್ಗೆ ದ್ವೇಷವನ್ನು ಹಬ್ಬಿಸುವ ಮಾಹಿತಿಯು ಪಾಠದಲ್ಲಿತ್ತು !

ಶಿಕ್ಷಣ ಸಚಿವ ಸುರೇಶ ಕುಮಾರ ಇವರಿಂದ ಮಾಹಿತಿ

ಈ ರೀತಿಯ ಪಾಠವನ್ನು ಪುಸ್ತಕದಲ್ಲಿ ತೆಗೆದುಕೊಂಡಿದ್ದ ಸಂಬಂಧಪಟ್ಟವರ ಮೇಲೆಯೂ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಇದರಿಂದ ಇತರರಿಗೂ ಎಚ್ಚರಿಕೆಯಾಗುವುದು ಇಲ್ಲದಿದ್ದರೆ ಇಂತಹ ಪಾಠಗಳು ಬರುತ್ತಲೇ ಇರುವುದು !

ಶಿಕ್ಷಣ ಸಚಿವ ಸುರೇಶ ಕುಮಾರ

ಉಡುಪಿ – ರಾಜ್ಯದಲ್ಲಿ ೬ ನೇ ತರಗತಿಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಅವಮಾನಿಸುವ ಪಾಠವನ್ನು ಕೈಬಿಡಲಾಗಿದೆ, ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ಇವರು ಮಾಹಿತಿಯನ್ನು ನೀಡಿದರು. ಈ ಪಾಠದ ಬಗ್ಗೆ ನಗರದ ಶ್ರೀಕೃಷ್ಣ ಮಠದ ಈಶಪ್ರಿಯತೀರ್ಥರು ಆಕ್ಷೇಪವನ್ನು ಆಡಿಯೋ ಮೂಲಕ ಸಚಿವರಿಗೆ ಕಳುಹಿಸಿದ್ದರು. (ಸಾಧು-ಸಂತರಿಗೆ ಧರ್ಮಹಾನಿಯನ್ನು ತಡೆಗಟ್ಟಲು ಮುಂದೆ ಬರಬೇಕಾಗುತ್ತದೆ, ಇದು ಹಿಂದೂಗಳಿಗಾಗಿ ನಾಚಿಕೆಯ ವಿಷಯವಾಗಿದೆ ! – ಸಂಪಾದಕರು)

ಈ ಪಾಠದಲ್ಲೇನಿದೆ ?

೧. ಉತ್ತರ ವೇದ ಕಾಲದಲ್ಲಿ ಯಜ್ಞ-ಯಾಗಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. (ಯಜ್ಞದಲ್ಲಿ ಪ್ರಾಣಿಗಳನ್ನು ಕೊಲ್ಲುತ್ತಿರುವುದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹಿಂದೂ ಧರ್ಮದಲ್ಲಿ ಹೇಳಿದ ಯಜ್ಞಕರ್ಮದ ಬಗ್ಗೆ ಇಂತಹ ಸುಳ್ಳು ಮಾಹಿತಿಯನ್ನು ಸೇರಿಸುವವರನ್ನು ಸೆರೆಮನೆಗೆ ಹಾಕಬೇಕು ! ಇದರಿಂದ ‘ಕರ್ನಾಟಕ ಶಿಕ್ಷಣ ಮಂಡಳಿಯಲ್ಲಿ ಹಿಂದುದ್ವೇಷಿಗಳು ತುಂಬಿದ್ದಾರೆ’, ಎಂದೆನಿಸುತ್ತದೆ ! – ಸಂಪಾದಕರು) ಇದರಿಂದ ಆಹಾರ ಉತ್ಪಾದನೆ ಕುಂಠಿತವಾಯಿತು.

೨. ‘ಯಜ್ಞ-ಯಾಗಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ‘ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು’, ಎಂದು ಈ ಪಾಠದಲ್ಲಿ ಬರೆಯಲಾಗಿತ್ತು. (ಈ ಮೂಲಕ ಸಂಸ್ಕೃತವು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿತ್ತು, ಎಂದು ತೋರಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಂಸ್ಕೃತ ಹಾಗೂ ಬ್ರಾಹ್ಮಣ ಇವುಗಳ ಬಗ್ಗೆ ಯಾವ ರೀತಿಯಲ್ಲಿ ದ್ವೇಷ ಹಬ್ಬಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ! – ಸಂಪಾದಕರು)