‘ಸೆರೆಮನೆಯಲ್ಲಿನ ಮುಸಲ್ಮಾನ ಬಂಧಿತರ ಸಂಖ್ಯೆ ಹೆಚ್ಚಿರುವುದು, ಇದು ಒಂದು ಅನ್ಯಾಯದ ಮತ್ತೊಂದು ಸಾಕ್ಷಿ !’ – ಅಸಾದುದ್ದೀನ್ ಓವೈಸಿ

ನಾರ್ವೆಯಿಂದ ಮುಸಲ್ಮಾನರನ್ನು ಹೊರಗಟ್ಟಿದ ನಂತರ ಅಲ್ಲಿಯ ಅಪರಾಧಗಳು ಶೇ. ೩೧ ರಷ್ಟು ಇಳಿಕೆಯಾಗಿದೆ. ಇದು ಬೆಳಕಿಗೆ ಬಂದಿರುವುದನ್ನು ನೋಡಿದರೆ ಭಾರತದಲ್ಲಿಯ ಸೆರೆಮನೆಯಲ್ಲಿ ಬಂಧನದಲ್ಲಿರುವ ಓವೈಸಿಯವರು ಹೇಳುತ್ತಿರುವ ಜನರು ನಿಜವಾಗಿಯೂ ಅಪರಾಧಿಗಳೇ ಆಗಿದ್ದಾರೆ, ಎಂದು ಯಾರಾದರು ಹೇಳಿದರೆ ಅದರಲ್ಲಿ ತಪ್ಪೇನಿದೆ ?

ಭಾರತದ ಅಪರಾಧಿಗಳ ಗುಂಪುಗಳ ಹೆಸರುಗಳನ್ನು ನೋಡಿದರೆ, ಅದರಲ್ಲಿ ಯಾರ ಸಂಖ್ಯೆಯು ಹೆಚ್ಚಾಗಿದೆ, ಎಂಬುದು ಓವೈಸಿಯವರು ಏಕೆ ಹೇಳುವುದಿಲ್ಲ ? ದೇಶದ್ರೋಹಿ ಚಟುವಟಿಕೆಗಳನ್ನು ಮಾಡುವ ಭಯೋತ್ಪಾದಕರು ಯಾರಿರುತ್ತಾರೆ, ಎಂಬುದು ಓವೈಸಿಯವರು ಏಕೆ ಹೇಳುವುದಿಲ್ಲ ?

ನವ ದೆಹಲಿ – ಮೊದಲಿನಿಂದಲೂ ಮುಸಲ್ಮಾನ ಪುರುಷರನ್ನು ದೊಡ್ಡ ಸಂಖ್ಯೆಯಲ್ಲಿ ಬಂಧಿಸಲಾಗಿತ್ತು; ಆದರೆ ಈಗ ಅವರ ಸಂಖ್ಯೆ ಹೆಚ್ಚಾಗಿದೆ. ಇವರೆಲ್ಲರೂ ಕಾನೂನಿನ ದೃಷ್ಟಿಯಿಂದ ನಿರಪರಾಧಿಗಳಾಗಿದ್ದಾರೆ; ಆದರೆ ಹೀಗಿರುವಾಗಲೂ ಅವರು ಅನೇಕ ವರ್ಷಗಳಿಂದ ಜೈಲಿನಲ್ಲಿರಬೇಕಾಗುತ್ತಿದೆ. ಅನ್ಯಾಯವಾಗುತ್ತಿರುವುದರ ಇದು ಮತ್ತೊಂದು ಪುರಾವೆಯಾಗಿದೆ. ಇದನ್ನು ನಾವು ಎದುರಿಸುತ್ತಿದ್ದೇವೆ, ಎಂದು ಎಮ್.ಐ.ಎಮ್.ನ ಅಧ್ಯಕ್ಷ ಹಾಗೂ ಶಾಸಕ ಅಸಾದುದ್ದೀನ್ ಓವೈಸಿ ಟ್ವಿಟ್ ಮಾಡಿದ್ದಾರೆ. ಅವರು ಒಂದು ಆಂಗ್ಲ ದೈನಿಕದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು (ಎನ್‌ಸಿ.ಆರ್.ಬಿ.) ದೇಶದಲ್ಲಿ ಸೆರೆಮನೆಯಲ್ಲಿರುವ ಕೈದಿಗಳಿಗೆ ಸಂಬಂಧಿಸಿದ ಅಂಕಿಅಂಶವನ್ನು ಘೋಷಿಸಿದ ವಾರ್ತೆಯನ್ನು ಪ್ರಸಾರ ಮಾಡಿದೆ.

ಈ ವಾರ್ತೆಗನುಸಾರ ೨೦೧೯ರ ಕೊನೆಯಲ್ಲಿ ದೇಶದಾದ್ಯಂತ ಬಂಧಿಸಲ್ಪಟ್ಟಿರುವ ಶೇ. ೨೧.೭ ಬಂಧಿತರು ಪರಿಶಿಷ್ಟ ಜಾತಿ-ಪಂಗಡದವರಾಗಿದ್ದಾರೆ. ದೇಶದ ಶೇ. ೧೪.೨ ರಷ್ಟು ಜನಸಂಖ್ಯೆ ಇದ್ದ ಮುಸಲ್ಮಾನರ ಸಂಖ್ಯೆ ಶೇ. ೧೬.೬ ರಷ್ಟಿದೆ; ಆದರೆ ಇವುಗಳ ಪೈಕಿ ಶೇ. ೧೮.೭ ರಷ್ಟು ಬಂಧಿತರ ಮೇಲೆ ಮೊಕದ್ದಮೆ ನೆಡೆಯುತ್ತಿದೆ, ಎಂದು ಹೇಳಲಾಗಿದೆ.