ಕಳ್ಳಸಾಗಣಿಕೆದಾರರೊಂದಿಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕನ ಮಗನೊಂದಿಗೆ ಆರ್ಥಿಕ ನಂಟು

ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣ

ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಕೊಡಿಯಾರಿ ಬಾಲಕೃಷ್ಣನ್‌ ಹಾಗೂ ಅವರ ಮಗ ಬಿನೇಶ

ನವ ದೆಹಲಿ – ಮಾದಕವಸ್ತು ನಿಯಂತ್ರಣ ದಳವು (ಎನ್.ಸಿ.ಬಿ.ಯು) ಬೆಂಗಳೂರಿನಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯ ಜಾಲದ ಮುಖ್ಯ ರೂವಾರಿ ಮಹಮ್ಮದ್ ಅನುಪನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿದೆ. ಆತ ನೀಡಿದ ಮಾಹಿತಿಯಲ್ಲಿ ಕೇರಳದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ ಪಕ್ಷದ ನಾಯಕ ಹಾಗೂ ನಟ ಕೊಡಿಯಾರಿ ಬಾಲಕೃಷ್ಣನ್‌ನ ಮಗ ಬಿನೇಶನ ಉಲ್ಲೇಖವೂ ಇದೆ. ಮಹಮ್ಮದ ೨೦೧೫ ರಲ್ಲಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಬಾಡಿಗೆಗಾಗಿ ಸ್ಥಳವನ್ನು ತೆಗೆದುಕೊಳ್ಳಲು ಬಿನೇಶನಿಂದ ಸಾಲ ಪಡೆದಿದ್ದನು. ೨೦೧೨ ರಿಂದ ಬಿನೇಶನು ಮಹಮ್ಮದ ಅನುಪನ ಮಿತ್ರನಾಗಿರುವುದನ್ನು ಒಪ್ಪಿಕೊಂಡಿದ್ದಾನೆ; ಆದರೆ ಮಹಮ್ಮದನ ಮಾದಕವಸ್ತುಗಳ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾನೆ.(ಸಾಲದಿಂದ ಪಡೆದ ಹಣವನ್ನು ಸ್ನೇಹಿತನು ಏನು ಮಾಡುತ್ತಾನೆ ?, ಎಂಬುದು ಬಿನೇಶನಿಗೆ ಗೊತ್ತಿಲ್ಲ, ಇದು ಒಪ್ಪಿಕೊಳ್ಳಲು ಸಾಧ್ಯವಿದೆಯೇ ? – ಸಂಪಾದಕರು)

೧. ಬೆಂಗಳೂರಿಲ್ಲಿ ಮಾದಕವಸ್ತುಗಳ ಕಳ್ಳಸಾಗಣೆಯ ಜಾಲದ ಬಗ್ಗೆ ಎನ್.ಸಿ.ಬಿ.ಯ ಉಪನಿರ್ದೇಶಕರಾದ ಕೆ.ಪಿ.ಎಸ್. ಮಲ್ಹೊತ್ರಾ ಇವರು, ಸಂಗೀತಗಾರರು, ನಟರು ಅಷ್ಟೇ ಅಲ್ಲ, ಕರ್ನಾಟಕದ ಗಣ್ಯ ವ್ಯಕ್ತಿಗಳ ಮಕ್ಕಳಿಗೂ ಮಾದಕವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಿದರು.

೨. ಬೆಂಗಳೂರಿನಿಂದ ವಶಪಡಿಸಿಕೊಳ್ಳಲಾದ ಮಾದಕವಸ್ತುಗಳನ್ನು ಪಶ್ಚಿಮ ಯುರೋಪ, ವಿಶೇಷವಾಗಿ ಬೆಲ್ಜಿಯಮ್‌ನ ರಾಜಧಾನಿ ಬ್ರಸ್ಲೇಮ್‌ನಿಂದ ತರಲಾಗುತ್ತಿತ್ತು. ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಭಾರತದಲ್ಲಿ ತರಲಾಗುತ್ತದೆ, ಎಂದು ಎನ್.ಸಿ.ಬಿ.ಯ ಅಧಿಕಾರಿಗಳು ಹೇಳಿದರು. (ಈ ರೀತಿಯಲ್ಲಿ ಕಳ್ಳ ಸಾಗಣೆಯಾಗುತ್ತಿರುವಾಗ ಕಸ್ಟಮ್ ಇಲಾಖೆ ಮನಲಗಿತ್ತೇ ? -ಸಂಪಾದಕರು)