ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಒಂದು ತಾಲೂಕಿನಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಯ ಆಯೋಜನೆ ಮಾಡಲಾಗಿತ್ತು. ಸಮಿತಿಯ ವತಿಯಿಂದ ಕಾರ್ಯಕ್ರಮದ ಪ್ರಸಾರದ ದೃಷ್ಟಿಯಿಂದ ಭಿತ್ತಿಪತ್ರಗಳನ್ನು ಅಂಟಿಸುವುದು, ಧ್ವನಿವರ್ಧಕದ ಮೂಲಕ ಪ್ರಸಾರ ಮಾಡುವುದು ಮತ್ತು ಕಾರ್ಯಕ್ರಮ ಆಯೋಜನೆ ಇವುಗಳಿಗಾಗಿ ಅನುಮತಿ ಪಡೆಯಲಾಗಿತ್ತು. ಸಮಿತಿಯ ಕಾರ್ಯಕರ್ತರು ಈ ಸಭೆಯ ನಿಮಿತ್ತ ಪ್ರಸಾರ ದೃಷ್ಟಿಯಿಂದ ‘ಹಿಂದೂ ಗಳೆಲ್ಲರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡೋಣ ಎಂಬ ಆಶಯದ ಭಿತ್ತಿಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿದ್ದರು. ‘ಈ ಭಿತ್ತಿಪತ್ರಗಳಿಂದ ಕೋಮುಭಾವನೆ ಸೃಷ್ಟಿಸಿ ಕೋಮು ಸಂಘರ್ಷಕ್ಕೆ ಕಾರಣವಾಗಿದೆ ಎಂದು ಪೊಲೀಸರ ಸುಳ್ಳು ದೂರಿನ ಮೇರೆಗೆ ಆ ತಾಲೂಕಿನ ದಂಡಾಧಿಕಾರಿಗಳು ಸಮಿತಿಯ ಕಾರ್ಯಕರ್ತರ ಮೇಲೆ ‘ಸಿ.ಆರ್.ಪಿ.ಸಿ.ಯ ಕಲಂ ೧೦೮ ಅಡಿಯಲ್ಲಿ ಏಕೆ ಕ್ರಮ ಕೈಗೊಳ್ಳಬಾರದು ? ಮತ್ತು ಒಂದು ವರ್ಷಕ್ಕೆ ೫ ಲಕ್ಷ ಮುಚ್ಚಳಿಕೆಯನ್ನು ಏಕೆ ಪಡೆದುಕೊಳ್ಳಬಾರದು ?, ಎಂಬ ಆಶಯದ ನೋಟಿಸೊಂದನ್ನು ೮.೧.೨೦೨೦ ರಂದು ಹೊರಡಿಸಿದ್ದರು. ಈ ನೋಟಿಸ್ ದ್ವೇಷಪೂರಿತವಾಗಿತ್ತು. ಮಾತ್ರವಲ್ಲದೇ, ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವಂತದ್ದು ಕೂಡ ಆಗಿದೆ ಎಂಬುವುದು ಅವರ ವರ್ತನೆಯಿಂದ ಸ್ಪಷ್ಟವಾಗುತ್ತದೆ.
ಸಮಿತಿಯ ಕಾರ್ಯಕರ್ತರಿಗೆ ಭರವಸೆ ನೀಡಿ ಹಾಗೂ ಅವರ ಸಮಯ ವ್ಯರ್ಥವಾಗದಿರುವಂತೆ ಮಾಡುವುದು
ನಂತರ ತಾಲೂಕು ದಂಡಾಧಿಕಾರಿಗಳು ನೀಡಿದ ಈ ನೊಟೀಸಿನ ವಿರುದ್ದ ಕಾನೂನು ಹೋರಾಟಕ್ಕಾಗಿ ಸಮಿತಿಯ ಕಾರ್ಯಕರ್ತರು ಹಿಂದುತ್ವನಿಷ್ಠ ನ್ಯಾಯವಾದಿ ಶ್ಯಾಮ ಪ್ರಸಾದ ಕೈಲಾರ ಇವರನ್ನು ಸಂಪರ್ಕ ಮಾಡಿದಾಗ ಅವರು ಕೂಡಲೇ ಅದಕ್ಕೆ ಒಪ್ಪಿದರು. ‘ನೀವೇನು ಚಿಂತಿಸಬೇಡಿ. ಇದರ ವಿರುದ್ಧ ನಾನು ಹೋರಾಟ ಮಾಡುವೆನು, ಎಂದು ಭರವಸೆಯನ್ನು ನೀಡಿದರು. ನ್ಯಾಯವಾದಿ ಕೈಲಾರ ಇವರು ಈ ಆದೇಶದ ವಿರುದ್ದ ಜಿಲ್ಲಾ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದರು. ಅವರು ಧರ್ಮಕಾರ್ಯ ಮಾಡುವ ಕಾರ್ಯಕರ್ತರ ಸಮಯ ವ್ಯರ್ಥವಾಗಬಾರದು ಎಂಬ ವಿಚಾರದಿಂದ ತೀರಾ ಅವಶ್ಯವಿದ್ದಾಗ ಮಾತ್ರ ಸಂಬಂಧಿತ ಸಮಿತಿಯ ಕಾರ್ಯಕರ್ತನನ್ನು ಕರೆಯುತ್ತಿದ್ದರು ಮತ್ತು ನ್ಯಾಯವಾದಿ ಶ್ಯಾಮಪ್ರಸಾದ ಕೈಲಾರ ಇವರು ಸ್ವತಃ ಕಾನೂನು ಹೋರಾಟ ಪ್ರಾರಂಭಿಸಿದರು. ಅವರು ಪೂರ್ಣ ಜವಾಬ್ದಾರಿಯಿಂದ ಹಾಗೂ ನೇತೃತ್ವವನ್ನು ವಹಿಸಿ ಉಚಿತವಾಗಿ ಹೋರಾಡಿದರು. ನ್ಯಾಯವಾದಿ ಶ್ಯಾಮಪ್ರಸಾದ ಇವರು ತಳಮಳದಿಂದ ಮಾಡಿದ ಪ್ರಯತ್ನದಿಂದಾಗಿ ಕೊನೆಗೆ ಸಮಿತಿ ಕಾರ್ಯಕರ್ತನ ವಿರುದ್ಧದ ಅದೇಶವನ್ನು ಸ್ವೀಕರಿಸಲು ಯಾವುದೇ ಸಾಕ್ಷಿಗಳು ಇಲ್ಲ ಮತ್ತು ಸಿ.ಆರ್.ಪಿ.ಸಿ. ಕಲಂನ ೧೧೧ ಯಾವುದೇ ನಿಯಮಗಳ ಪಾಲನೆ ಮಾಡಿಲ್ಲವೆಂದು ನ್ಯಾಯಾಲಯವು ಕಾರ್ಯಕರ್ತನ ಮೇಲಿನ ನೋಟಿಸನ್ನು ರದ್ದು ಪಡಿಸಿ ಅದೇಶ ಹೊರಡಿಸಿತು. ನ್ಯಾಯವಾದಿ ಶ್ಯಾಮಪ್ರಸಾದರವರು ಮಾಡಿದ ನ್ಯಾಯಾಲಯ ಹೋರಾಟ ಮತ್ತು ಸಮಪರ್ಕವಾದದಿಂದ ಈ ಗೆಲುವು ಸಿಗಲು ಸಾಧ್ಯವಾಗಿದೆ. ಹಿಂದುತ್ವದ ಕಾರ್ಯ ಮಾಡುವ ಕಾರ್ಯಕರ್ತರಿಗೆ ಬೆಂಬಲವಾಗಿ ನಿಂತು ನ್ಯಾಯಾಲಯ ಪ್ರಕ್ರಿಯೆಯನ್ನು ನಿರಪೇಕ್ಷವಾಗಿ ಮಾಡಿದ್ದಕ್ಕೆ ಅವರು ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಂತಹ ಧರ್ಮನಿಷ್ಠ ಮತ್ತು ರಾಷ್ಟ್ರನಿಷ್ಠ ನಿಸ್ವಾರ್ಥ ನ್ಯಾಯವಾದಿಗಳಿಂದಾಗಿ ಹಿಂದುತ್ವದ ಕಾರ್ಯ ಮಾಡುವವರಿಗೆ ಆಧಾರ ಸಿಗುತ್ತಿದೆ. ಸಮಿತಿಯ ಪರವಾಗಿ ಅಭಿನಂದನೆಗಳು ! – ಶ್ರೀ. ಚಂದ್ರ ಮೊಗೇರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ.