ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಸರಕಾರಿ ಸಂಸ್ಥೆಗಳಿಂದಲೇ ಹಿಂದೂಗಳ ದೇವತೆಗಳ ಈ ರೀತಿ ಅವಮಾನವಾಗುವುದು ಖೇದಕರವಾಗಿದೆ ! ಸರಕಾರವು ಇತರ ಪಂಥೀಯರ ಶ್ರದ್ಧಾಸ್ಥಾನಗಳ ಉತ್ಸವಗಳಲ್ಲಿ ಈ ರೀತಿ ಕಸದ ವಾಹನವನ್ನು ಬಳಸುವ ಧೈರ್ಯ ತೋರಿಸುತ್ತಿತ್ತೇ ?
ಜಬಲಪುರ (ಮಧ್ಯಪ್ರದೇಶ) – ಇಲ್ಲಿಯ ಪುರಸಭೆಯ(ಮುನಿಸಿಪಾಲಿಟಿ) ಆಡಳಿತವರ್ಗದವರು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಕಸದ ವಾಹವನ್ನು ಉಪಯೋಗಿಸುತ್ತಿದ್ದರು. ಇದನ್ನು ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸುತ್ತಾ ಆ ವಾಹನವನ್ನು ತಡೆಗಟ್ಟಿದರು. ಆಡಳಿತವು ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲು ಕಸದ ವಾಹನವನ್ನು ಉಪಯೋಗಿಸಲಾಗುತ್ತಿರುವ ವಿಷಯವು ಹಿಂದುತ್ವನಿಷ್ಠ ವಿಕಾಸ ಖರೆ ಇವರಿಗೆ ಸಿಕ್ಕಿತು. ಅವರು ಈ ವಿಷಯವನ್ನು ಹಿಂದೂ ಮಹಾಸಭೆಯ ಪಂ. ಅಮಿರ ಖಂಪರಿಯಾ ಹಾಗೂ ಹಿಂದೂ ಧರ್ಮ ಸೇನೆಯ ಯೋಗೇಶ ಅಗ್ರವಾಲ ಇವರಿಗೆ ತಿಳಿಸಿದರು. ಇವರೆಲ್ಲರು ಜಿಲ್ಲಾ ಬಾರ ಅಧ್ಯಕ್ಷ ಸುಧೀರ ನಾಯಕ ಹಾಗೂ ಆಭರಣ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ಆನಂದ ಮೋಹನ ಪಾಠಕ ಇವರೊಂದಿಗೆ ಆ ವಾಹನದ ಎದುರಿಗೆ ಹೋಗಿ ಕುಳಿತು ವಾಹನವನ್ನು ನಿಲ್ಲಿಸಿದರು.
ಈ ಸಮಯದಲ್ಲಿ ಪಂ. ಅಮಿರ ಖಂಪರಿಯಾ ಇವರು, “ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಹಿಂದೂ ಧರ್ಮದ ಮಾನ್ಯತೆಗನುಸಾರ ಬಾಳೆ ಎಲೆ, ಹೂವಿನ ಹಾರ ಇತ್ಯಾದಿಗಳೊಂದಿಗೆ ಸಂಪೂರ್ಣ ಸ್ವಚ್ಛವಾಗಿರುವ ವಾಹನವನ್ನು ಉಪಯೋಗಿಸಬೇಕು”, ಎಂದು ಹೇಳಿದರು. ಯೊಗೇಶ ಅಗ್ರವಾಲ ಇವರು ‘ಶ್ರೀಗಣೇಶನ ಈ ರೀತಿಯಲ್ಲಿ ಅವಮಾನವಾಗುವುದನ್ನು ನಾವು ಸಹಿಸುವುದಿಲ್ಲ, ಅದೇ ರೀತಿ ಏನೇ ಆದರೂ, ಸನಾತನ ಧರ್ಮದಲ್ಲಿ ಹೇಳಿರುವಂತಹ ವಿಷಯಗಳ ವಿರುದ್ಧ ಕೃತಿ ಹಾಗೂ ಹಿಂದುತ್ವದ ವಿರೋಧವನ್ನೂ ನಾವು ಸಹಿಸುವುದಿಲ್ಲ’, ಎಂದು ಆಡಳಿತದವರಿಗೆ ಎಚ್ಚರಿಕೆಯನ್ನು ನೀಡಿದರು. ಈ ಸಮಯದಲ್ಲಿ ಅರ್ಜುನ ನಾಮದೇವ, ಅಂಕಿತ ಶ್ರೀವಾಸ್ತವ, ನೀರಜ ರಾಜಪುತ, ಸುಧಾಕರ ಮಿಶ್ರಾ, ಬಬಲು ಪಂಡಾ ಇನ್ನಿತರ ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.