೧೦ ನೇ ತರಗತಿಯ ಪರೀಕ್ಷೆಯಲ್ಲಿ ಸನಾತನದ ಬಾಲ ಸಾಧಕರ ಸುಯಶಸ್ಸು !

ಶೇ. ೯೮.೭೦ ರಷ್ಟು ಅಂಕ ಪಡೆದ ಭಟ್ಕಳದ ಕು. ಪಾರ್ಥ ಪುಂಡಲೀಕ ಪೈ

ಕು. ಪಾರ್ಥ ಪೈ

ಭಟ್ಕಳದ ಸನಾತನದ ಸಾಧಕರಾದ ಶ್ರೀ. ಪುಂಡಲೀಕ ಪೈ ಮತ್ತು ಸೌ. ಅಂಜಲಿ ಪುಂಡಲೀಕ ಪೈ ಇವರ ಸುಪುತ್ರರಾದ ಕು. ಪಾರ್ಥ ಪುಂಡಲೀಕ ಪೈ ಇವರು ಈ ೨೦೧೯ – ೨೦೨೦ ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೮.೭೦ ಅಂಕವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

ಇದರ ಬಗ್ಗೆ ಚಿ. ಪಾರ್ಥ ಪೈಯವರ ಪೋಷಕರು ಹೇಳುತ್ತಾ ‘ಪಾರ್ಥನು ಪ್ರತಿ ದಿನ ಬೆಳಗ್ಗೆ ೫ ಗಂಟೆಗೆ ಎದ್ದು ಶಾಲೆಯ ಅಭ್ಯಾಸ ಮಾಡುವುದು ಮತ್ತು ಅದಾದ ನಂತರ ನಿಯಮಿತವಾಗಿ ಸಂಧ್ಯಾವಂದನೆ ಮಾಡುತ್ತಾನೆ. ಇವರಲ್ಲಿ ಸ್ವಯಂಶಿಸ್ತು ತುಂಬಾ ಇರುತ್ತದೆ. ತಮ್ಮ ವೈಯಕ್ತಿಕ ವಸ್ತುಗಳ ಜೊತೆಗೆ ಶಾಲೆಯ ವಸ್ತುಗಳನ್ನು ಸಹ ಬಳಕೆ ಮಾಡಿ ಆದ ನಂತರ ವ್ಯವಸ್ಥಿತವಾಗಿ ಇಡುತ್ತಾರೆ. ಪ್ರತಿ ದಿನ ರಾತ್ರಿ ಮಲಗುವ ಮೊದಲು ತಂದೆ ತಾಯಿಯವರ ಜೊತೆಗೂಡಿ ವಿಷ್ಣುಸಹಸ್ರನಾಮ ಪಠಣ ಮಾಡುತ್ತಾನೆ. ಇದಲ್ಲದೆ ಇತರ ಕಲೆಗಳನ್ನು ಸಹ ಅಭ್ಯಾಸ ಮಾಡುತ್ತಾನೆ. ಶಾಸ್ತ್ರೀಯ ಸಂಗೀತ ಕಲಿಯುವುದು ಮತ್ತು ಕೊಳಲು ವಾದನ ಮಾಡುತ್ತಾನೆ. ಸತತ ಕಲಿಯುವ ಸ್ಥಿತಿಯಲ್ಲಿ ಇರುತ್ತಾನೆ. ಅಲ್ಲದೇ ಏನಾದರೂ ಹೊಸದನ್ನು ಮಾಡಬೇಕು ಕಲಿಯಬೇಕು ಎನ್ನುವ ಹಂಬಲ ಸಹ ಇರುತ್ತದೆ. ‘ನನ್ನ ಈ ಸಾಧನೆಗೆ ಆಧ್ಯಾತ್ಮಿಕ ಸಾಧನೆ ಪ್ರೇರಣೆ ಆಯಿತು ಎಂದು ಹೇಳುತ್ತಾನೆ ಎಂದು ಹೇಳಿದ್ದಾರೆ.

ಶೇ. ೯೭.೨೮ ರಷ್ಟು ಅಂಕ ಪಡೆದ ಭಟ್ಕಳದ ಕು. ಯೋಗೇಶ್ವರ ಕಾಶಿನಾಥ ಪ್ರಭು

ಕು. ಯೋಗೇಶ್ವರ ಪ್ರಭು

ಭಟ್ಕಳದ ಸಾಧಕರಾದ ಶ್ರೀ. ಕಾಶಿನಾಥ ಪ್ರಭು ಮತ್ತು ಸೌ. ಮಾಲಾ ಕಾಶಿನಾಥ ಪ್ರಭು ಇವರ ಸುಪುತ್ರರಾದ ಕು. ಯೋಗೇಶ್ವರ ಕಾಶಿನಾಥ ಪ್ರಭು ಇವರು ಈ ೨೦೧೯ – ೨೦೨೦ ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. ೯೭.೨೮ ರಷ್ಟು ಅಂಕವನ್ನು ಪಡೆದಿದ್ದಾರೆ.

ಕು. ಯೋಗೇಶ್ವರ ಕಾಶಿನಾಥ ಪ್ರಭು ಇವರ ಬಗ್ಗೆ ತಿಳಿಸಿದ ಅವರು ಪೋಷಕರು, ‘ಮಂಗಳೂರಿನಲ್ಲಿ ಬಾಲಸಾಧಕರಿಗೆ ನಡೆದ ಸಾಧನಾ ಶಿಬಿರಕ್ಕೆ ಹೋಗಿ ಬಂದ ನಂತರ ಸಾಧನೆ, ನಾಮಜಪ, ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಬಗ್ಗೆ ಉತ್ತಮ ಕಲ್ಪನೆ ಸಿಕ್ಕಿ ಆ ರೀತಿ ಮಾಡಿದನ. ಅವನು ಓದಲು ಕುಳಿತುಕೊಳ್ಳುವಲ್ಲಿ ಆಧ್ಯಾತ್ಮಿಕ ಉಪಾಯಕ್ಕಾಗಿ ಸಾತ್ತ್ವಿಕ ಸುಗಂಧದ್ರವ್ಯ ಮತ್ತು ಕರ್ಪೂರವನ್ನು ಇಟ್ಟುಕೊಂಡು ಅದರ ಉಪಯೋಗ ಮಾಡಿ ಉಪಾಯ ಮಾಡುತ್ತಾನೆ. ದಿನವಿಡಿ ಭಗವಂತನಿಗೆ ಪ್ರಾರ್ಥನೆ, ಕೃತಜ್ಞತೆ ವ್ಯಕ್ತಪಡಿಸುತ್ತಾನೆ. ಪ್ರತಿವಾರ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುತ್ತಾನೆ. ಪ್ರತಿದಿನ ಬೆಳಗ್ಗೆ ೫.೩೦ ಗಂಟೆಗೆ ಏಳುತ್ತಾನೆ ಮತ್ತು ತಪ್ಪದೇ ಅಗ್ನಿಹೋತ್ರ, ಸಂಧ್ಯಾವಂದನೆ ಮಾಡುತ್ತಾನೆ. ಈ ಬಾರಿ ಪರೀಕ್ಷೆಯ ದಿನಾಂಕ ಬದಲಾಗುತ್ತಿದ್ದರೂ ಅವನು ವಿಚಲಿತನಾಗದೆ ವಿದ್ಯಾಭ್ಯಾಸ ಮತ್ತು ವ್ಯಷ್ಟಿ ಸಾಧನೆಯತ್ತ ಗಮನ ಕೊಡುತ್ತಿದ್ದರು. ‘ಇದೆಲ್ಲ ಗುರುಕೃಪೆ ಮತ್ತು ಗುರುಗಳು ಹೇಳಿದ ಸಾಧನೆಯಿಂದ ಸಾಧ್ಯವಾಯಿತು ಎನ್ನುತ್ತಾನೆ ಎಂದು ಹೇಳಿದ್ದಾರೆ.