ಲಖಿಸರಾಯ(ಬಿಹಾರ)ದಲ್ಲಿ ನಕ್ಸಲರಿಂದ ಅಪಹರಣಕ್ಕೊಳಗಾದ ಶೃಂಗಿಋಷಿ ಧಾಮ್‌ನ ಅರ್ಚಕರ ಹತ್ಯೆ

ಸ್ವಾತಂತ್ರ್ಯ ಬಂದ ೭೩ ವರ್ಷಗಳ ನಂತರವೂ ನಕ್ಸಲರನ್ನು ನಿರ್ನಾಮ ಮಾಡಲು ಸಾಧ್ಯವಾಗದೇ ಇರುವುದು, ಇದು ಇಲ್ಲಿಯ ವರೆಗಿನ ಆಡಳಿತಗಾರರಿಗೆ ಲಜ್ಜಾಸ್ಪದ ! ಈ ಸ್ಥತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಬಿಟ್ಟರೇ ಬೇರೆ ಪರ್ಯಾಯವಿಲ್ಲ !

ಲಖಿಸರಾಯ(ಬಿಹಾರ)ದಲ್ಲಿಯ ಶೃಂಗಿಋಷಿ ಧಾಮ್

ಲಖಿಸರಾಯ (ಬಿಹಾರ) – ಇಲ್ಲಿಂದ ಅಪಹರಿಸಲಾಗಿದ್ದ ಓರ್ವ ಆರ್ಚಕರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಆರ್ಚಕರ ಹೆಸರು ನೀರಜ ಝಾ ಎಂದಾಗಿದೆ. ನೀರಜ ಝಾ ಇವರು ಅಗಸ್ಟ್ ೨೨ ರಂದು ಪೂಜೆ ಮಾಡುತ್ತಿರುವಾಗಲೇ ನಕ್ಸಲರು ಅವರನ್ನು ಅಪಹರಿಸಿದರು. ನಂತರ ನಕ್ಸಲರು ನೀರಜ ಝಾ ಇವರ ಕುಟುಂಬದವರಲ್ಲಿ ೧ ಕೋಟಿ ರೂಪಾಯಿಗಳ ಒತ್ತೆ ಹಣವನ್ನು ಕೇಳಿದರು. ಅಗಸ್ಟ್ ೨೩ ರಂದು ನಕ್ಸಲರು ಪುನಃ ಝಾ ಇವರ ಕುಟುಂಬದವರನ್ನು ಸಂಪರ್ಕಿಸಿ ಒತ್ತೆ ಹಣಕ್ಕಾಗಿ ೧೨ ಗಂಟೆಗಳ ಕಾಲಾವಕಾಶ ನೀಡುತ್ತಾ ‘ಒಂದು ವೇಳೆ ಹಣ ಸಿಗದೇ ಇದ್ದಲ್ಲಿ, ಪರಿಣಾಮ ಕೆಟ್ಟದ್ದಾಗುವುದು’, ಎಂದು ಬೆದರಿಕೆಯನ್ನು ನೀಡಿದರು. ನಂತರ ಝಾ ರವರ ಕುಟುಂಬದವರು ನಕ್ಸಲರಿಗೆ ಮೇಲಿಂದ ಮೇಲೆ ಸಂಪರ್ಕಿಸಿ ತಮ್ಮ ಬಳಿ ಅಷ್ಟು ಹಣ ಇಲ್ಲವೆಂದು ಹೇಳಿದರು. ನಂತರ ನಕ್ಸಲರು ರಾಜಿ ಮಾಡಿಕೊಂಡು ಈ ಹಣವನ್ನು ೨೫ ಲಕ್ಷದ ತನಕ ತಂದಿರುವುದಾಗಿ ಹೇಳಲಾಯಿತು.

ನಕ್ಸಲರು ಅಪಹರಣ ಮಾಡಿದ್ದ ಆರ್ಚಕ ನೀರಜ ಝಾ

ಇನ್ನೊಂದು ಕಡೆ ಪೊಲೀಸರು ನೀರಜ ಝಾರವರ ಬಿಡುಗಡೆಗಾಗಿ ‘ಕೊಂಬಿಂಗ್ ಆಪರೇಶನ್’ ಮಾಡಿದರು. ಈ ಸಮಯದಲ್ಲಿ ಪೊಲೀಸರು ನಕ್ಸಲರ ಎರಿಯಾ ಕಮಾಂಡರ್ ಹಾಗೂ ಕುಖ್ಯಾತ ನಕ್ಸಲ ಅರ್ಜುನ ಕೊಡಾ ಇವರ ಮೇಲೆ ಕಾರ್ಯಾಚರಣೆ ಮಾಡಿದರು, ಅದೇ ರೀತಿ ನಕ್ಸಲ ಬಾಲೇಶ್ವರನ ಪತ್ನಿಯನ್ನೂ ಬಂಧಿಸಲಾಯಿತು. ಆದ್ದರಿಂದ ಆಕ್ರೋಶಗೊಂಡ ನಕ್ಸಲರು ಝಾ ಇವರ ಹತ್ಯೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ನೀರಜ ಝಾ ಹತ್ಯೆಯ ನಂತರ ನಕ್ಸಲರು ಅವರ ತಂದೆಗೆ ಕರೆ ಮಾಡಿ ನೀರಜ ಇವರ ಶವವು ಯಾವ ಸ್ಥಳದಲ್ಲಿ ಬಿದ್ದಿದೆ, ಎಂದು ಹೇಳಿ ಅಲ್ಲಿಂದ ಅದನ್ನು ತೆಗೆದುಕೊಂಡು ಹೋಗಲು ಹೇಳಿದರು. ಝಾ ಇವರ ಕುಟುಂಬದವರು ಅಲ್ಲಿಗೆ ತಲುಪಿದರು. ಝಾ ಅವರ ಕುಟುಂಬದವರಿಗೂ ಗುರುತಿಸಲು ಸಾಧ್ಯವಾಗದ? ಛಿದ್ರವಾದ ಸ್ಥಿತಿಯಲ್ಲಿ ಆ ಶವ ದೊರೆಯಿತು.