ಉಜ್ಜೈನ್‌ನಲ್ಲಿನ ಮಹಾಕಾಲ ದೇವಸ್ಥಾನದ ಶಿವಲಿಂಗದ ಮೇಲೆ ಪಂಚಾಮೃತದ ಬದಲು ಕೇವಲ ಶುದ್ಧ ಹಾಲಿನ ಅಭಿಷೇಕವನ್ನು ಮಾಡಿ ! – ಸರ್ವೋಚ್ಚ ನ್ಯಾಯಾಲಯದ ಆದೇಶ

ನವ ದೆಹಲಿ – ಮಧ್ಯಪ್ರದೇಶದ ಉಜ್ಜೈನ್‌ನಲ್ಲಿನ ಪ್ರಸಿದ್ಧ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನದ ಶಿವಲಿಂಗವು ಸವೆಯುವುದನ್ನು ತಡೆಗಟ್ಟಲು ಶಿವ ಭಕ್ತರು ಅದರ ಮೇಲೆ ಪಂಚಾಂಮೃತದ ಅಭಿಷೇಕವನ್ನು ಮಾಡಬೇಡಿ. ಶಿವಲಿಂಗದ ಮೇಲೆ ಶುದ್ಧ ಹಾಲಿನ ಅಭಿಷೇಕವನ್ನು ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದೆ.

‘ನಾವು ಭಕ್ತರಿಗೆ ಶುದ್ಧ ಹಾಲನ್ನು ಒದಗಿಸಿ ಕೊಡುವೆವು, ಅದೇರೀತಿ ಅಶುದ್ಧ ಹಾಲಿನ ಅಭಿಷೇಕ ಆಗದಂತೆ ಕಾಳಜಿಯೂ ವಹಿಸುವೆವು’, ಎಂದು ದೇವಸ್ಥಾನದ ಸಮಿತಿಯು ನ್ಯಾಯಾಲಯದಲ್ಲಿ ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನಕ್ಕೆ ಅನೇಕ ಸೂಚನೆಗಳನ್ನು ನೀಡಿದೆ. ‘ಯಾವುದೇ ರೀತಿಯ ಲೇಪನ ಅಥವಾ ಉಜ್ಜಬಾರದು. ದೇವಸ್ಥಾನದ ಭಸ್ಮ ಆರತಿಯಲ್ಲಿ ಸುಧಾರಣೆ ಮಾಡುವಂತೆ ಆದೇಶ ನೀಡಿದೆ. ಆರತಿಯ ಸಮಯದಲ್ಲಿ ಉತ್ಪನ್ನವಾಗುವ ಧೂಮದಿಂದಾಗಿ ಶಿವಲಿಂಗಕ್ಕೆ ಹಾನಿಯಾಗದಿರಲಿ; ಆದ್ದರಿಂದ ಈ ನಿರ್ದೇಶನವನ್ನು ನೀಡಲಾಗಿದೆ. ಶಿವಲಿಂಗದ ಮೇಲಿನ ಹಾರಗಳ ಭಾರವನ್ನೂ ಕಡಿಮೆ ಮಾಡಬೇಕು, ಎಂದೂ ನ್ಯಾಯಾಲಯವು ಹೇಳಿದೆ. (ಧಾರ್ಮಿಕ ವಿಷಯಗಳ ಬಗೆಗಿನ ಅಂಶಗಳನ್ನು ಹಿಂದೂಗಳ ಧರ್ಮಾಚಾರ್ಯರ ಮಾರ್ಗದರ್ಶನ ಪಡೆಯಬೇಕು, ಎಂದು ಸಮಸ್ತ ಹಿಂದೂಗಳ ಅಪೇಕ್ಷೆಯಾಗಿದೆ ! -ಸಂಪಾದಕರು)

೧. ಮೊಸರು, ತುಪ್ಪ ಹಾಗೂ ಜೇನುತುಪ್ಪದಿಂದ ಉಜ್ಜಿದರೆ ಶಿವಲಿಂಗವು ಸವೆಯುತ್ತದೆ ಎಂಬ ನಿರೀಕ್ಷಣೆಯನ್ನು ನ್ಯಾಯಾಲಯವು ದಾಖಲಿಸಿಕೊಂಡಿದೆ. ಆದ್ದರಿಂದ ಶಿವಲಿಂಗದ ಮೇಲೆ ಸೀಮಿತ ಪ್ರಮಾಣದಲ್ಲಿ ಶುದ್ಧ ಹಾಲಿನಿಂದ ಅಭಿಷೇಕವನ್ನು ಮಾಡುವ ಅವಕಾಶವನ್ನು ನೀಡುತ್ತಾ ಇತರ ಎಲ್ಲ ಪ್ರಕಾರಗಳ ಅಭಿಷೇಕಗಳನ್ನು ನಿಷೇಧಿಸುವುದೇ ಯೋಗ್ಯವಿದೆ, ಎಂದು ನ್ಯಾಯಾಲಯವು ಹೇಳಿದೆ.

೨. ಪರಂಪರೆಯನುಸಾರ ಎಲ್ಲ ಪೂಜೆ ಹಾಗೂ ಅಭಿಷೇಕಕ್ಕೆ ಶುದ್ಧ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಅರ್ಚಕ ಹಾಗೂ ಪಂಡಿತರು ಯಾವುದೇ ಭಕ್ತರಿಂದ ಶಿವಲಿಂಗದ ಮೇಲೆ ಲೇಪನ ಅಥವಾ ಹಾಲನ್ನು ಬಿಟ್ಟು ಬೇರೆ ಯಾವುದೇ ವಸ್ತುಗಳಿಂದ ಅಭಿಷೇಕವನ್ನು ಮಾಡುವುದಿಲ್ಲ ಇದರ ಬಗ್ಗೆ ಕಾಳಜಿವಹಿಸಬೇಕು. ಒಂದುವೇಳೆ ಭಕ್ತರು ಹೀಗೆ ಮಾಡುವಾಗ ಸಿಕಿಬಿದ್ದರೇ ಆ ಭಕ್ತರೊಂದಿಗೆ ಅರ್ಚಕರೂ ಅಪರಾಧಿಗಳಾಗುವರು, ಎಂದೂ ನ್ಯಾಯಾಲಯವು ಹೇಳಿದೆ.

೩. ದೇವಸ್ಥಾನ ಸಮಿತಿಯಿಂದ ಪರಂಪರಾಂಗತ ಪದ್ದತಿಯಿಂದ ಪೂಜೆ ಹಾಗೂ ಅಭಿಷೇಕ ಮಾಡಲಾಗುವುದು. ಗರ್ಭಗುಡಿಯ ಪೂಜೆಯ ಸ್ಥಳದಲ್ಲಿ ೨೪ ಗಂಟೆಗಳ ಕಾಲ ಸಿಸಿಟಿವಿ ಕ್ಯಾಮೆರಾದಿಂದ ನಿಗಾ ಇಡಲಾಗುವುದು. ೬ ತಿಂಗಳ ತನಕ ಚಿತ್ರೀಕರಣವನ್ನು ಕಾಪಾಡಬೇಕು. ಯಾವುದೇ ಅರ್ಚಕನು ಈ ಆದೇಶದ ಉಲ್ಲಂಘನೆಯನ್ನು ಮಾಡಿದರೇ, ದೇವಸ್ಥಾನ ಸಮಿತಿಯು ಆ ಅರ್ಚಕನ ವಿರುದ್ಧ ಕ್ರಮ ಕೈಗೊಳ್ಳಬಹುದು. ದೇವಸ್ಥಾನ ಸಮಿತಿಯಿಂದಲೇ ಹಾಲಿನ ವ್ಯವಸ್ಥೆ ಮಾಡಲಾಗುವುದು. ಹಾಲಿನ ಗುಣಮಟ್ಟ ಒಳ್ಳೆಯದಾಗಿರಬೇಕು ಅದಕ್ಕಾಗಿಯೂ ವ್ಯವಸ್ಥೆ ಮಾಡಲಾಗುವುದು, ಎಂದು ನ್ಯಾಯಾಲಯವು ಹೇಳಿದೆ.

೪. ದೇವಸ್ಥಾನದಿಂದ ೫೦೦ ಮೀಟರ ಅಂತರದ ಅತಿಕ್ರಮಣವನ್ನು ತೆಗೆಯುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಲ್ಲಿ ಆದೇಶ ನೀಡಿದೆ.(ಅತಿಕ್ರಮಣ ಆಗುವ ತನಕ ಆಡಳಿತ ಹಾಗೂ ಪೊಲೀಸರು ನಿದ್ರೆ ಮಾಡುತ್ತಿದ್ದರೇ ? ನ್ಯಾಯಾಲಯಕ್ಕೆ ಈ ರೀತಿಯ ಆದೇಶವನ್ನು ಏಕೆ ಕೊಡಬೇಕಾಗುತ್ತದೆ ? ಪೊಲೀಸ್ ಹಾಗೂ ಆಡಳಿತವರ್ಗದವರಿಗೆ ಈ ಅತಿಕ್ರಮಣ ಕಾಣಿಸುವುದಿಲ್ಲವೇ ? ಇಲ್ಲಿಯವರೆಗಿನ ಅತಿಕ್ರಮಣಗಳ ಮೇಲೆ ಕ್ರಮ ಕೈಗೊಳ್ಳದಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಆದೇಶವನ್ನು ನೀಡಬೇಕು, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು)

೫. ದೇವಸ್ಥಾನದ ಸದ್ಯದ ವಾಸ್ತುವಿನ ಬಗ್ಗೆ ದೇವಸ್ಥಾನ ಸಮಿತಿಯ ತಜ್ಞರ ಸಮೂಹವು ಡಿಸೆಂಬರ್ ೧೫ ೨೦೨೦ರ ತನಕ ನ್ಯಾಯಾಲಯದಲ್ಲಿ ವರದಿಯನ್ನು ಸಲ್ಲಿಸಬೇಕು. ದೇವಸ್ಥಾನದ ಶಿವಲಿಂಗದ ರಕ್ಷಣೆ ಯಾವ ಪದ್ದತಿಯಲ್ಲಿ ಮಾಡಬಹುದು ? ಹಾಗೂ ದೇವಸ್ಥಾನ ಕಾಮಗಾರಿಯು ಕುಸಿಯದಂತೆ ಕಾಳಜಿಯನ್ನು ವಹಿಸಲಾಗುವುದು ? ಇದರ ಬಗ್ಗೆ ಸಮಿತಿಯು ಸಲಹೆಯನ್ನು ನೀಡಬೇಕು, ಎಂದು ನ್ಯಾಯಾಲಯವು ಹೇಳಿದೆ. (ದೇವಸ್ಥಾನದ ವಾಸ್ತುವಿನ ರಕ್ಷಣೆಗಾಗಿ ದೇವಸ್ಥಾನ ಸಮಿತಿಯೇ ನಿರ್ಧಾರವನ್ನು ತೆಗೆದುಕೊಳ್ಳುವುದು ಅಪೇಕ್ಷಿತವಿದೆ; ಆದರೆ ಅದಕ್ಕಾಗಿ ನ್ಯಾಯಾಲಯಕ್ಕೆ ಆದೇಶ ನೀಡಬೇಕಾಗುತ್ತಿದ್ದಲ್ಲಿ, ಇಂತಹ ದೇವಸ್ಥಾನ ಸಮಿತಿಯು ಏಕೆ ಬೇಕು ? – ಸಂಪಾದಕರು)

ಭಗವಾನ ಶಿವನ ಕೃಪೆಯಿಂದ ಈ ಕೊನೆಯ ತೀರ್ಪು ನೀಡಿದೆ ! – ನ್ಯಾ. ಅರುಣ ಮಿಶ್ರಾ

ನ್ಯಾ. ಅರುಣ ಮಿಶ್ರಾ ಇವರ ಅಧ್ಯಕ್ಷತೆಯಲ್ಲಿ ವಿಭಾಗೀಯಪೀಠವು ಈ ಅರ್ಜಿಯ ತೀರ್ಪು ನೀಡಿತು. ನ್ಯಾ. ಮಿಶ್ರಾ ಇವರ ಕಾರ್ಯಕಾಲದ ಕೊನೆಯ ಖಟ್ಲೆಯಾಗಿತ್ತು. ‘ಭಗವಾನ ಶಿವನ ಕೃಪೆಯಿಂದ ನನ್ನ ಕಾರ್ಯಕಾಲದಲ್ಲಿ ಈ ಕೊನೆಯ ತೀರ್ಪನ್ನು ನಾನು ನೀಡಿದೆ’, ಎಂದು ಆಲಿಕೆಯ ನಂತರ ನ್ಯಾ. ಮಿಶ್ರಾ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.