ನಕ್ಸಲರನ್ನು ಬೆಂಬಲಿಸುವ, ಅದೇರೀತಿ ರಾಷ್ಟ್ರಘಾತಕ ವಿಚಾರವನ್ನು ಹಾಡಿ ಹೊಗಳುವ ಗೌರಿ ಲಂಕೇಶ ಇವರ ಸ್ಮರಣಾರ್ಥ ಒಟ್ಟಾಗುವ ಸಂಘಟನೆಗಳು ಯಾವ ಮಾನಸಿಕತೆಯನ್ನು ಇಟ್ಟುಕೊಳ್ಳುತ್ತವೆ, ಇದರ ಬಗ್ಗೆ ವಿಚಾರ ಮಾಡದಿರುವುದೇ ಒಳಿತು !
ಬೆಂಗಳೂರು – ಭಾರತಾದ್ಯಂತ ೪೦೦ ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಸೆಪ್ಟೆಂಬರ ೫ ರಂದು ಗೌರಿ ಲಂಕೇಶ ಇವರ ಸ್ಮರಣಾರ್ಥ ಜನರ ಸಾಂವಿಧಾನಿಕ ಹಕ್ಕುಗಳ ಮೇಲೆ ದಾಳಿ, ಅನ್ಯಾಯಗಳ ವಿರುದ್ಧ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ. ಗೌರಿ ಲಂಕೇಶ ಇವರ ಹತ್ಯೆಯ ಮೂರನೇ ವಾರ್ಷಿಕದಿನದ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪತ್ರಕರ್ತ ಪರಿಷತ್ತಿನಲ್ಲಿ ‘ಹಮ ಆಗೆ ಉಠೇ ನಹೀ ತೋ..’ ಈ ಅಭಿಯಾನವನ್ನು ಘೋಷಿಸಿತು. ‘ಈ ಅಭಿಯಾನದಲ್ಲಿ ಮೈದಾನದಲ್ಲಿ ಹಾಗೂ ‘ಆನ್‌ಲೈನ್’ ಪದ್ದತಿಯಿಂದ ಖಂಡನೆ ವ್ಯಕ್ತಪಡಿಸಲಾಗುವುದು’, ಎಂದು ಹೇಳಲಾಯಿತು.
೧. ಪತ್ರಕರ್ತರ ಪರಿಷತ್ತಿನಲ್ಲಿ ಮೋದಿ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ, ಕ್ಷೀಣಿಸುತ್ತಿರುವ ಅರ್ಥವ್ಯವಸ್ಥೆ ಇತ್ಯಾದಿ ಸರಕಾರದ ನಿಲುವುಗಳ ಮೇಲೆ ಟೀಕೆ ಮಾಡಲಾಯಿತು. ‘ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಪ್ರಚೋದನಾಕಾರಿ ಭಾಷಣ ಮಾಡುವ ಮುಖಂಡರನ್ನು ಬಂಧಿಸುವ ಬದಲಾಗಿ, ಐಕ್ಯತೆ, ಶಾಂತತೆ ಹಾಗೂ ಸಂವಿಧಾನಕ್ಕಾಗಿ ಕೆಲಸ ಮಾಡುವ ಮಹಿಳೆ ಹಾಗೂ ಕಾರ್ಯಕರ್ತೆಯರನ್ನು ಬಂಧಿಸಲಾಗುತ್ತಿದೆ’, ಎಂದು ಈ ಸಮಯದಲ್ಲಿ ಹೇಳಿದರು.
೨. ಈ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಗುವುದು, ಅದೇರೀತಿ ಸಾಮಾಜಿಕ ಪ್ರಸಾರ ಮಾಧ್ಯಮಗಳಿಂದ ಚರ್ಚಾಕೂಟವನ್ನೂ ಆಯೋಜಿಸಲಾಗುವುದು, ಆನ್‌ಲೈನ್ ಪ್ರದರ್ಶನವನ್ನು ಮಾಡಲಾಗುವುದು ಹಾಗೂ ದೇಶದ ಜನರಿಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ನಾಗರಿಕರ ಮನವಿಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲಾಗುವುದು, ಎಂದು ಈ ಸಮಯದಲ್ಲಿ ಮಾಹಿತಿ ನೀಡಲಾಯಿತು.