‘ಫ್ರಾನ್ಸ್ ನ ಲಕ್ಷಾಂತರ ಜನರನ್ನು ಕೊಲ್ಲುವ ಸಂಪೂರ್ಣ ಅಧಿಕಾರ ಮುಸ್ಲಿಮರಿಗೆ ಇದೆ !’ – ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮ್ಮದ್‌ರವರ ಟ್ವೀಟ್

ಫ್ರಾನ್ಸ್‌ನ ನೀಸ್ ನಗರದ ಒಂದು ಚರ್ಚ್‌ನಲ್ಲಿ ಮತಾಂಧರು ನಡೆಸಿದ ದಾಳಿಯನ್ನು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮದ್ ಬೆಂಬಲಿಸಿದ್ದಾರೆ, ‘ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ನಂತರ ಅವರು ಟ್ವೀಟ್ ಅನ್ನು ತೆಗೆದುಹಾಕಿದ್ದಾರೆ.

ಪಾಕಿಸ್ತಾನದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸಗೊಳಿಸಿದ ಮತಾಂಧರು

ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಥಾರಪಾರಕರದ ನಗರಪರಕರದಲ್ಲಿನ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿನ ಡಾ. ರೇಖಾ ಮಾಹೇಶ್ವರಿಯವರು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧ್ವಂಸ ಮಾಡಿದ ಮೂರ್ತಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜೆ ಪ್ರಾರಂಭವಾಗುವ ಮೊದಲು ಮತಾಂಧರಿಂದ ೨ ಸ್ಥಳಗಳಲ್ಲಿ ದೇವಿಯ ವಿಗ್ರಹಗಳು ಧ್ವಂಸ

ನವರಾತ್ರಿ ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ಬೋಲ್‌ಮರಿ ಹಾಗೂ ನಾರಾಯಣಗಂಜ್‌ನ ಅರೈಹಜಾರ್‌ನಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಈ ಪ್ರಕರಣದಲ್ಲಿ ಮೊಹಮ್ಮದ್ ನಯನ್ ಶೇಖ್ (18 ವರ್ಷ) ಮತ್ತು ಮೊಹಮ್ಮದ್ ರಾಜು ಮೃಧಾ (25 ವರ್ಷ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸುವ ಮಸೂದೆಯನ್ನು ಪಾಕಿಸ್ತಾನ ಸಂಸತ್ತು ಅಂಗೀಕರಿಸಿದೆ

ತಥಾಕಥಿತ ಬೇಹುಗಾರಿಕೆ ಪ್ರಕರಣದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಬಂಧನದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸಲು ಮಸೂದೆಯೊಂದು ಪಾಕಿಸ್ತಾನ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ.

ಫ್ರಾನ್ಸ್‌ನ ಸರ್ಕಾರಿ ಕಟ್ಟಡಗಳ ಮೇಲೆ ಮುಹಮ್ಮದ್ ಪೈಗಂಬರರ ವ್ಯಂಗ್ಯಚಿತ್ರಗಳ ಪ್ರದರ್ಶನ

ಕೆಲವು ದಿನಗಳ ಹಿಂದೆ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತರಗತಿಯಲ್ಲಿ ತೋರಿಸಿದ್ದಕ್ಕೆ ಮತಾಂಧನೊಬ್ಬ ಸ್ಯಾಮ್ಯುಯೆಲ್ ಎಂಬ ಹೆಸರಿನ ಶಿಕ್ಷಕನ ಶಿರಚ್ಛೆದ ಮಾಡಿದ್ದ. ಈ ಘಟನೆಯ ನಂತರ ಫ್ರಾನ್ಸ್‌ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೆಮೊಕ್ರಟಿಕ್ ಪಕ್ಷದಿಂದ ಶ್ರೀ ದುರ್ಗಾದೇವಿಯ ವಿಡಂಬನೆ

ಮುಂದಿನ ತಿಂಗಳು ನಡೆಯಲಿರುವ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಕ್ರಟಿಕ್ ಪಕ್ಷದ ಜೋ ಬಿಡನ್ ಸ್ಪರ್ಧಿಸಲಿದ್ದಾರೆ. ಭಾರತೀಯ ಮೂಲದ ಮಹಿಳೆಯ ಮಗಳು ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಪದವಿಯ ಅಭ್ಯರ್ಥಿಯಾಗಿದ್ದಾರೆ. ಭಾರತದಲ್ಲಿ ಚುನಾವಣಾ ಪ್ರಚಾರದಲ್ಲಿ ಧರ್ಮದ ಆಧಾರದಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು

ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಬದಲು ಮರಣದಂಡನೆ ನೀಡಲು ಬಾಂಗ್ಲಾದೇಶ ಸರಕಾರವು ತನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಧ್ಯ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲದ ಕಾರಣ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುವುದು.

ಚರ್ಚ್‌ನಲ್ಲಿ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ ಲೂಯಿಸಿಯಾನ ಚರ್ಚ್‌ನ ಪಾದ್ರಿಯ ಬಂಧನ

ಇಲ್ಲಿಯ ಪ್ರಸಿದ್ಧ ಲೂಯಿಸಿಯಾನ ಚರ್ಚ್‌ನ ಕ್ಲಾರ್ಕ್ ಎಂಬ ಹೆಸರಿನ ಓರ್ವ ಪಾದ್ರಿಯು ಚರ್ಚ್‌ನೊಳಗೆ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿರುವಾಗ ಸಿಕ್ಕಿಬಿದ್ದನಂತರ ಆತನನ್ನು ಹಾಗೂ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರು ಇದನ್ನು ನೋಡಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ.

ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ದೇವಸ್ಥಾನ ಧ್ವಂಸ

ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಕಡಿಯು ಘನೌರ್ ಪಟ್ಟಣದ ಶ್ರೀ ರಾಮದೇವ ಕಾದಿಯೋಘಂವರ ಈ ಹಿಂದೂ ದೇವಸ್ಥಾನವನ್ನು ಅಕ್ಟೋಬರ್ ೧೦ ರಂದು ಧ್ವಂಸ ಮಾಡಲಾಯಿತು. ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಒಡೆಯಲಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಶೈದಿಯನ್ನು ಬಂಧಿಸಲಾಗಿದೆ.

ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯಕ್ಕೆ ಪ್ರೇರಣೆ ನೀಡುತ್ತಾಳೆ ! – ಸಲಮಾ ಹಯೆಕ್

ಹಾಲಿವುಡ್‌ನ ಖ್ಯಾತ ನಟಿ ಸಲಮಾ ಹಯೆಕ್ ಇವರು ಸಾಮಾಜಿಕ ಮಾಧ್ಯಮವಾದ ‘ಇನ್‌ಸ್ಟಾಗ್ರಾಮ್’ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯವನ್ನು ಪ್ರೇರಣೆ ನೀಡುತ್ತಾಳೆ ಎಂದು ಬರೆದಿದ್ದಾರೆ.