|
ಕೌಲಾಲಂಪುರ್ (ಮಲೇಷ್ಯಾ) – ಫ್ರಾನ್ಸ್‌ನ ನೀಸ್ ನಗರದ ಒಂದು ಚರ್ಚ್‌ನಲ್ಲಿ ಮತಾಂಧರು ನಡೆಸಿದ ದಾಳಿಯನ್ನು ಮಲೇಷ್ಯಾದ ಮಾಜಿ ಪ್ರಧಾನಿ ಮಹಾತಿರ್ ಮೊಹಮದ್ ಬೆಂಬಲಿಸಿದ್ದಾರೆ, ‘ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಹಕ್ಕು ಮುಸಲ್ಮಾನರಿಗೆ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ನಂತರ ಅವರು ಟ್ವೀಟ್ ಅನ್ನು ತೆಗೆದುಹಾಕಿದ್ದಾರೆ. ನೀಸ್‌ನಲ್ಲಿ ಮತಾಂಧರು ಒಂದು ಕೈಯಲ್ಲಿ ಕುರಾನ್ ಮತ್ತು ಇನ್ನೊಂದು ಕೈಯಲ್ಲಿ ಚಾಕು ತೆಗೆದುಕೊಂಡು ದಾಳಿ ಮಾಡಿದರು. ಈ ೨೦ ವರ್ಷದ ಮತಾಂಧ ಇಟಲಿ ಮೂಲಕ ಫ್ರಾನ್ಸ್‌ಗೆ ಬಂದಿದ್ದ, ಎಂದು ಇಲ್ಲಿಯವರೆಗೆ ನಡೆದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
'Muslims have the right to kill millions of French people', ex-Malaysia PM Mahathir Mohamad shocks with his tweet | Indiablooms – First Portal on Digital News Management https://t.co/IhG5EFrb9Z #MahathirMohamad, #FranceKillings, #Macron, #Nice, #Muslims_are_one
— India Blooms (@indiablooms) October 29, 2020
FACT CHECK: Did former Malaysian PM Mahathir Mohamad tweet ‘Muslims have right to kill millions of French people’?https://t.co/57Wth4B9Qb
— Times Fact Check (@timesfactcheck) October 30, 2020
ಮಹಾತಿರ ಇವರು ಒಂದರಹಿಂದೆ ಒಂದರಂತೆ ೧೪ ಟ್ವೀಟ್ಸ್‌ಗಳನ್ನು ಮಾಡುತ್ತಾ, ‘ಮುಸಲ್ಮಾನರಿಗೆ ಕೋಪಗೊಳ್ಳುವ ಹಕ್ಕಿದೆ.’ ಈ ಹಿಂದೆ ನಡೆದ ನರಮೇಧಕ್ಕಾಗಿ ಫ್ರಾನ್ಸ್ ನ ಲಕ್ಷಾಂತರ ನಾಗರಿಕರನ್ನು ಕೊಲ್ಲುವ ಸಂಪೂರ್ಣ ಅಧಿಕಾರ ಅವರಿಗೆ ಇದೆ; ಆದರೆ ಮುಸಲ್ಮಾನರು ಇನ್ನೂ ‘ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ’ ಆಗಿಲ್ಲ. ಫ್ರಾನ್ಸ್ ತನ್ನ ನಾಗರಿಕರಿಗೆ ಇತರರ ಭಾವನೆಗಳ ಬಗ್ಗೆ ವಿಚಾರ ಮಾಡುವುದನ್ನು ಕಲಿಸಬೇಕು. (ಯಾರು ಸ್ವತಃ ಬೇರೆಯವರ ಭಾವನೆಗಳ ಬಗ್ಗೆ ಕಾಳಜಿ ಮಾಡುವುದಿಲ್ಲ, ಅವರು ಬೇರೆಯವರಿಂದ ಇಂತಹ ಬೇಡಿಕೆ ಮಾಡುವುದು ಹಾಸ್ಯಾಸ್ಪದವಾಗಿದೆ ! – ಸಂಪಾದಕ)