ತಮ್ಮ ‘ಇನ್‌ಸ್ಟಾಗ್ರಾಮ್’ನಲ್ಲಿ ಶ್ರೀ ಲಕ್ಷ್ಮೀದೇವಿಯ ಗುಣಗಾನ ಮಾಡಿ ದೇವಿಯ ಚಿತ್ರ ಪೋಸ್ಟ್ ಮಾಡಿದ ಹಾಲಿವುಡ್‌ನ ಖ್ಯಾತ ನಟಿ ಸಲಮಾ ಹಯೆಕ್ !
|
ನವ ದೆಹಲಿ – ಹಾಲಿವುಡ್‌ನ ಖ್ಯಾತ ನಟಿ ಸಲಮಾ ಹಯೆಕ್ ಇವರು ಸಾಮಾಜಿಕ ಮಾಧ್ಯಮವಾದ ‘ಇನ್‌ಸ್ಟಾಗ್ರಾಮ್’ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಮಾತೆ ಶ್ರೀ ಲಕ್ಷ್ಮೀದೇವಿಯು ಆಂತರಿಕ ಸೌಂದರ್ಯವನ್ನು ಪ್ರೇರಣೆ ನೀಡುತ್ತಾಳೆ ಎಂದು ಬರೆದಿದ್ದಾರೆ. ಯಾವಾಗ ನಾನು ನನ್ನ ಆಂತರಿಕ ಸೌಂದರ್ಯದೊಂದಿಗೆ ಅನುಸಂಧಾನದಲ್ಲಿರಲು ಬಯಸಿದಾಗಲೆಲ್ಲ, ಆಗ ಮಾತೆ ಶ್ರೀ ಲಕ್ಷ್ಮೀದೇವಿಯ ಧ್ಯಾನ ಮಾಡುತ್ತೇನೆ ಮತ್ತು ಯೋಗ ಮಾಡುತ್ತೇನೆ.
Hinduism always outwits others, thanks to its inherent teachings to experience the Infinite !
No need to influence or deceive or force anyone to follow its principles.
Be proud to be a HINDU !@noconversion @ChakraNews @HinduAmerican @RituRathaur https://t.co/mtiJfkKOK3
— Sanatan Prabhat (@sanatanprabhat) October 9, 2020
ಮಾತೆ ಶ್ರೀ ಲಕ್ಷ್ಮೀದೇವಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತು, ಸೌಭಾಗ್ಯ, ಪ್ರೀತಿ, ಸೌಂದರ್ಯ, ಮಾಯೆ, ಆನಂದ ಮತ್ತು ಸಮೃದ್ಧಿಯ ಪ್ರತೀಕವಾಗಿದ್ದಾಳೆಂದು ಪರಿಗಣಿಸಲಾಗಿದೆ. ಅವರ ವಿಗ್ರಹವು ಆನಂದ ನೀಡುತ್ತದೆ. ನಿಮ್ಮ ಆಂತರಿಕ ಸೌಂದರ್ಯಕ್ಕೆ ಆನಂದವೇ ಪ್ರಮುಖ ಕಾರಣವಾಗಿದೆ’ ಎಂದು ಬರೆದಿದ್ದಾರೆ. ಈ ಪೋಸ್ಟ್ ಜೊತೆಗೆ ಅವರು ಮಾತೆ ಶ್ರೀ ಲಕ್ಷ್ಮೀದೇವಿಯ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ.
When I want to connect with my inner beauty, I start my meditation focusing on the goddess Lakshmi.
Cuando quiero conectarme con mi belleza interior, comienzo mi meditación enfocándome en la diosa Lakshmi.#innerbeauty#hinduism#lakshmi pic.twitter.com/0gfNm5HDFO— Salma Hayek (@salmahayek) October 7, 2020
೧. ಪ್ರಸಿದ್ಧ ಹಾಲಿವುಡ್ ನಟರು ಮತ್ತು ನಟಿಯರು ಸಲಮಾ ಅವರ ಪೋಸ್ಟ್‌ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅವರಲ್ಲಿ ಜೂಲಿಯಾ ರಾಬರ್ಟ್ಸ್, ರಸೆಲ್ ಬ್ರಾಂಡ್, ಮಾಯಲಿ ಸೈರಸ್ ಸೇರಿದ್ದಾರೆ. ಭಾರತದಲ್ಲಿ ನಟಿ ಬಿಪಾಶಾ ಬಸು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
೨. ಸಲಮಾ ಹಯೆಕ್ ಅವರು ೨೦೦೩ ರಲ್ಲಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಮೆಕ್ಸಿಕೊ’ ಚಲನಚಿತ್ರದಿಂದ ಚಿರಪರಿಚಿತರಾಗಿದ್ದರು.