ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಜೋಡಿಸುವ ಪುಸ್ತಕಗಳನ್ನು ಹಿಂಪಡೆದ ಬ್ರಿಟಿಷ್ ಶಾಲೆ ಮತ್ತು ಪ್ರಕಾಶಕರು !
ಬ್ರಿಟನ್‌ನ ಒಂದು ಶಾಲೆಯ ಜಾಲತಾಣದಿಂದ ‘ಬ್ರಿಟಿಷ್ ಜಿ.ಸಿ.ಎಸ್.ಇ. ಧಾರ್ಮಿಕ ಸ್ಟಡೀಸ್ ವರ್ಕ್‌ಬುಕ್’ಅನ್ನು ತೆಗೆಯಲಾಗಿದೆ. ಅದೇ ರೀತಿ ಪ್ರಕಾಶಕರು ಪುಸ್ತಕವನ್ನು ಹಿಂತೆಗೆದುಕೊಂಡಿದ್ದಾರೆ. ಇಲ್ಲಿನ ಹಿಂದೂಗಳ ವಿರೋಧದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಪುಸ್ತಕದಲ್ಲಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳಲಾಗಿತ್ತು.