ಪಾದ್ರಿಗಳ ಈವರೆಗಿನ ಇತಿಹಾಸವನ್ನು ಗಮನಿಸಿದರೆ, ಇಂತಹ ಘಟನೆಗಳೇ ಹೆಚ್ಚು ಸಂಖ್ಯೆಯಲ್ಲಿವೆ ಎಂಬುದು ಕಂಡುಬರುತ್ತದೆ. ಪಾದ್ರಿಗಳಿಂದಾಗುವ ಇಂತಹ ಕೃತ್ಯಗಳಿಂದ ಅವರಿಗೆ ಸಿಕ್ಕಿದ ಆಧ್ಯಾತ್ಮಿಕ ಶಿಕ್ಷಣವು ಪರಿಪೂರ್ಣವಲ್ಲ ಎಂಬುದೇ ಸ್ಪಷ್ಟವಾಗುತ್ತದೆ; ಆದ್ದರಿಂದ ಅವರಿಗೆ ಕ್ಷಣಿಕ ಹಾಗೂ ಅಶಾಶ್ವತ ದೈಹಿಕ ಸಂಪರ್ಕದಿಂದ ಸಿಗುವ ಸುಖಕ್ಕಿಂತಲೂ ಮುಂದಿನದ್ದಾದ ಶಾಶ್ವತ ಆಧ್ಯಾತ್ಮಿಕ ಆನಂದದ ವರೆಗೆ ತಲುಪಲು ಸಾಧ್ಯವಾಗಿಲ್ಲ, ಎಂಬುದು ಸ್ಪಷ್ಟವಾಗಿದೆ !
ಲೂಯಿಸಿಯಾನ (ಅಮೇರಿಕಾ) – ಇಲ್ಲಿಯ ಪ್ರಸಿದ್ಧ ಲೂಯಿಸಿಯಾನ ಚರ್ಚ್‌ನ ಕ್ಲಾರ್ಕ್ ಎಂಬ ಹೆಸರಿನ ಓರ್ವ ಪಾದ್ರಿಯು ಚರ್ಚ್‌ನೊಳಗೆ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸುತ್ತಿರುವಾಗ ಸಿಕ್ಕಿಬಿದ್ದನಂತರ ಆತನನ್ನು ಹಾಗೂ ಇಬ್ಬರೂ ಮಹಿಳೆಯರನ್ನು ಬಂಧಿಸಲಾಗಿದೆ. ವ್ಯಕ್ತಿಯೊಬ್ಬರು ಇದನ್ನು ನೋಡಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ. ನಂತರ ಕ್ಲಾರ್ಕ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಂಧಿತ ಮಹಿಳೆಯರಿಬ್ಬರೂ ಅಶ್ಲೀಲ(ಪಾರ್ನ್) ಚಲನಚಿತ್ರಗಳಲ್ಲಿ ಕೆಲಸ ಮಾಡುವ ನಟಿಯರಾಗಿದ್ದಾರೆ.