ಪಾಕಿಸ್ತಾನದಲ್ಲಿ ನವರಾತ್ರಿಯ ಸಮಯದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸಗೊಳಿಸಿದ ಮತಾಂಧರು

ಈ ಮೇಲಿನ ಚಿತ್ರವನ್ನು ಯಾರ ಭಾವನೆಗೆ ನೋವಾಗುವ ಉದ್ದೇಶವಾಗಿರದೆ ಕೇವಲ ಮಾಹಿತಿಗಾಗಿ ಪ್ರಕಾಶಿಸುತ್ತಿದ್ದೇವೆ

ನವ ದೆಹಲಿ – ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿನ ಥಾರಪಾರಕರದ ನಗರಪರಕರದಲ್ಲಿನ ಸಿಂಹವಾಹಿನಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಮತಾಂಧರು ಧ್ವಂಸ ಮಾಡಿಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿನ ಡಾ. ರೇಖಾ ಮಾಹೇಶ್ವರಿಯವರು ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಧ್ವಂಸ ಮಾಡಿದ ಮೂರ್ತಿಯ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟನಲ್ಲಿ ಅವರು, ನಾವು ಶಾಂತಿಯುತವಾಗಿ ನವರಾತ್ರಿಯನ್ನು ಆಚರಿಸುತ್ತೇವೆ; ಆದರೆ ಕೆಲವು ಮತಾಂಧರಿಗೆ ಅದು ಇಷ್ಟವಾಗುವುದಿಲ್ಲ, ಅವರು ನಗರಪರಕರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸ ಮಾಡಿದರು. ಪಾಕಿಸ್ತಾನವು ಎಲ್ಲರದ್ದಾಗಿದೆ ಹಾಗೂ ನೀವು ಅದನ್ನು ಸ್ವೀಕಾರ ಮಾಡಲೇಬೇಕು. ಇಂತಹ ಘಟನೆಗಳನ್ನು ತಡೆಯಬೇಕು. ಇಂತಹ ಘಟನೆಗಳಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತದೆ’ ಎಂದು ಬರೆದಿದ್ದಾರೆ.

೧. ಕರಾಚಿಯ ಮಾಜಿ ಮಹಾಪೌರ ಆರಿಫ್ ಅಜಾಕಿಯಾ ಇವರು ಟ್ವೀಟ್ ಮಾಡುತ್ತಾ, ಭಾರತದಲ್ಲಿ ಒಂದು ಮಸೀದಿಯನ್ನು ಬೀಳಿಸಿದಾಗ ಜಾತ್ಯತೀತವಾದಿಗಳು ಮೊಸಳೆ ಕಣ್ಣೀರು ಸುರಿಸುತ್ತಾರೆ ಹಾಗೂ ಪಾಕಿಸ್ತಾನದಲ್ಲಿ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿದಾಗ ಮಾತ್ರ ಶಾಂತವಾಗಿರುತ್ತಾರೆ ಎಂದು ಹೇಳಿದರು.

೨. ಸಿಂಧ ಪ್ರಾಂತದ ಮುಖ್ಯಮಂತ್ರಿಗಳ ವಿಶೇಷ ಸಹಾಯಕ ಪುಂಜೋ ಭೀಲ್ ಇವರು ಈ ಘಟನೆಯ ಬಗ್ಗೆ ದುಖಃವನ್ನು ವ್ಯಕ್ತ ಪಡಿಸುತ್ತ, ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದು ಹೇಳಿದರು.

೩. ಈ ಹಿಂದೆ ಸಿಂಧ್‌ನಲ್ಲೇ ಬದೀನ್ ಜಿಲ್ಲೆಯ ಕಡಿಯೂ ಘನೌರ್ ನಗರದಲ್ಲಿ ಅಕ್ಟೋಬರ ೧೦ ರಂದು ಒಂದು ಹಿಂದೂ ದೇವಸ್ಥಾನವನ್ನು ಧ್ವಂಸ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಮ್ಮದ ಇಸ್ಮಾಯಿಲ್ ಶೈದಿಯನ್ನು ಬಂಧಿಸಿದ್ದರು.