ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜೆ ಪ್ರಾರಂಭವಾಗುವ ಮೊದಲು ಮತಾಂಧರಿಂದ ೨ ಸ್ಥಳಗಳಲ್ಲಿ ದೇವಿಯ ವಿಗ್ರಹಗಳು ಧ್ವಂಸ

ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳು ಮತ್ತು ಅವರ ಶ್ರದ್ಧಾಸ್ಥಾನಗಳು ಅಸುರಕ್ಷಿತವಾಗಿವೆ. ಹಿಂದೂಗಳನ್ನು ಮತ್ತು ಅವರ ಶ್ರದ್ಧಾಸ್ಥಾನಗಳನ್ನು ರಕ್ಷಿಸಲು ಭಾರತ ಸರ್ಕಾರ ಸಂಬಂಧಪಟ್ಟ ದೇಶಗಳ ಮೇಲೆ ಒತ್ತಡ ಹೇರಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಢಾಕಾ (ಬಾಂಗ್ಲಾದೇಶ) – ನವರಾತ್ರಿ ಪ್ರಾರಂಭವಾಗುವ ಮೊದಲು ಬಾಂಗ್ಲಾದೇಶದ ಫರೀದ್‌ಪುರದಲ್ಲಿ ಬೋಲ್‌ಮರಿ ಹಾಗೂ ನಾರಾಯಣಗಂಜ್‌ನ ಅರೈಹಜಾರ್‌ನಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹಗಳನ್ನು ಧ್ವಂಸ ಮಾಡಲಾಯಿತು. ಈ ಪ್ರಕರಣದಲ್ಲಿ ಮೊಹಮ್ಮದ್ ನಯನ್ ಶೇಖ್ (18 ವರ್ಷ) ಮತ್ತು ಮೊಹಮ್ಮದ್ ರಾಜು ಮೃಧಾ (25 ವರ್ಷ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಪೂಜಾ ಮಂಡಳಿಗಳಲ್ಲಿ ಹಾಗೂ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಆಡಳಿತವು ಪೂಜಾ ಮಂಡಲಗಳಿಗೆ ಸೂಚಿಸಿದೆ. ಕ್ಯಾಮೆರಾಗಳ ಅಳವಡಿಕೆಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುವ ಬಗ್ಗೆಯೂ ಆಡಳಿತವು ಆಶ್ವಾಸನೆ ನೀಡಿದೆ.

ಇದಕ್ಕೂ ಮೊದಲು, ಅಕ್ಟೋಬರ್ 1 ರ ರಾತ್ರಿ ನೃಪೆನ ಮಾಲೊ ಎಂಬ ಹಿಂದೂ ವ್ಯಕ್ತಿಯ ಮನೆಯಲ್ಲಿದ್ದ ಶ್ರೀ ಕಾಳಿ ದೇವಿಯ ವಿಗ್ರಹವನ್ನು ಧ್ವಂಸ ಮಾಡಿದ್ದರು; ಆದರೆ ಘಟನೆಯಲ್ಲಿ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.