ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ದೇವಸ್ಥಾನ ಧ್ವಂಸ

ಪಾಕಿಸ್ತಾನದಲ್ಲಿ ಹಿಂದೂಗಳು ಹಾಗೂ ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತ !

ಶ್ರೀ ರಾಮದೇವ ಕಾದಿಯೋಘಂವರ ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಒಡೆಯಲಾಗಿದೆ

ಬದಿನ್ (ಪಾಕಿಸ್ತಾನ) – ಸಿಂಧ್ ಪ್ರಾಂತ್ಯದ ಬದಿನ್ ಜಿಲ್ಲೆಯ ಕಡಿಯು ಘನೌರ್ ಪಟ್ಟಣದ ಶ್ರೀ ರಾಮದೇವ ಕಾದಿಯೋಘಂವರ ಈ ಹಿಂದೂ ದೇವಸ್ಥಾನವನ್ನು ಅಕ್ಟೋಬರ್ ೧೦ ರಂದು ಧ್ವಂಸ ಮಾಡಲಾಯಿತು. ದೇವಸ್ಥಾನದಲ್ಲಿದ್ದ ವಿಗ್ರಹಗಳನ್ನು ಒಡೆಯಲಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಇಸ್ಮಾಯಿಲ್ ಶೈದಿಯನ್ನು ಬಂಧಿಸಲಾಗಿದೆ.

ದೇವಸ್ಥಾನವನ್ನು ಬದಿನ್ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಪೊಲೀಸ್ ಅಧೀಕ್ಷಕರು ೨೪ ಗಂಟೆಯೊಳಗೆ ಈ ಪ್ರಕರಣದ ವರದಿಯನ್ನು ಕಳಿಸಲು ಹೇಳಿದ್ದಾರೆ.