ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸುವ ಮಸೂದೆಯನ್ನು ಪಾಕಿಸ್ತಾನ ಸಂಸತ್ತು ಅಂಗೀಕರಿಸಿದೆ

ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್

ಇಸ್ಲಾಮಾಬಾದ್ (ಪಾಕಿಸ್ತಾನ) – ತಥಾಕಥಿತ ಬೇಹುಗಾರಿಕೆ ಪ್ರಕರಣದಲ್ಲಿ ಪಾಕಿಸ್ತಾನದ ಜೈಲಿನಲ್ಲಿ ಬಂಧನದಲ್ಲಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ಶಿಕ್ಷೆಯನ್ನು ಪರಿಶೀಲಿಸಲು ಮಸೂದೆಯೊಂದು ಪಾಕಿಸ್ತಾನ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ.

೧. ಮಸೂದೆಯನ್ನು ‘ಇಂಟರನ್ಯಾಶನಲ್ ಕೋರ್ಟ್ ಆಫ್ ಜಸ್ಟಿಸ್ (ವಿಮರ್ಶೆ ಮತ್ತು ಮರುಪರಿಶೀಲನೆ) ಸುಗ್ರೀವಾಜ್ಞೆ’ ಎಂದು ಮಸೂದೆಯ ಹೆಸರಾಗಿದೆ. ಈ ಮಸೂದೆಯನ್ನು ಸಂಸತ್ತಿನಲ್ಲಿ ತೀವ್ರ ವಿರೋಧದ ನಡುವೆಯೂ ಕಾನೂನು ಮತ್ತು ನ್ಯಾಯಕ್ಕೆ ಸಂಬಂಧಿಸಿದ ಸ್ಥಾಯಿ ಸಮಿತಿಯು ಚರ್ಚಿಸಿ ಅಂಗೀಕರಿಸಿತು.

೨. ಪಾಕಿಸ್ತಾನದ ನ್ಯಾಯ ಮತ್ತು ಕಾನೂನು ಸಚಿವ ಫಾರೂಕ್ ನಸೀಮ್ ಅವರು, ಈ ಮಸೂದೆಯನ್ನು ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ತರಲಾಗಿದೆ ಎಂದು ಹೇಳಿದರು. ಒಂದು ವೇಳೆ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸದಿದ್ದರೆ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ನ್ಯಾಯಾಲಯದ ನಿರ್ಣಯವನ್ನು ಪಾಲಿಸದ ನಿರ್ಬಂಧಗಳನ್ನು ಎದುರಿಸಬೇಕಾಗುತ್ತಿತ್ತು. (ಇದರರ್ಥ ನಿರ್ಬಂಧಗಳ ಭಯದಿಂದ ಕೇವಲ ತೋರಿಕೆಗಾಗಿ ಪಾಕಿಸ್ತಾನ ಈ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯ ಮೇಲೆ ಯಾವುದೇ ನೇರ ಕ್ರಮ ಕೈಗೊಳ್ಳಲಾಗುವುದಿಲ್ಲ, ಅದು ಅಷ್ಟೇ ನಿಜವಾಗಿದೆ ! – ಸಂಪಾದಕ)