ಬಾಂಗ್ಲಾದೇಶದಲ್ಲಿ ಅತ್ಯಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು

ಬಾಂಗ್ಲಾದೇಶ ಹೀಗೆ ಮಾಡಬಲ್ಲದು ಹೀಗಿರುವಾಗ, ಭಾರತವೂ ಏಕೆ ಮಾಡಬಾರದು ?

ಢಾಕಾ (ಬಾಂಗ್ಲಾದೇಶ) – ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಬದಲು ಮರಣದಂಡನೆ ನೀಡಲು ಬಾಂಗ್ಲಾದೇಶ ಸರಕಾರವು ತನ್ನ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸಧ್ಯ ಸಂಸತ್ತಿನ ಅಧಿವೇಶನ ನಡೆಯುತ್ತಿಲ್ಲದ ಕಾರಣ ಸರಕಾರದಿಂದ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಬಾಂಗ್ಲಾದೇಶದಲ್ಲಿ ಸಧ್ಯದ ಕಾನೂನಿನ ಪ್ರಕಾರ ಅತ್ಯಾಚಾರಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆಯಿದೆ. ಪೀಡಿತೆಯು ಮೃತಳಾದಲ್ಲಿ ಮರಣದಂಡನೆಗಾಗಿ ಅನುಮತಿಸಲಾಗುತ್ತದೆ.

ಕೆಲವು ದಿನಗಳ ಹಿಂದೆ, ಲೈಂಗಿಕ ಅತ್ಯಾಚಾರಗಳ ಪ್ರಕರಣಗಳ ನಂತರ ಢಾಕಾ ಮತ್ತು ಇತರ ಸ್ಥಳಗಳಲ್ಲಿ ಆಂದೋಲನಗಳನ್ನು ಹಮ್ಮಿಕೊಳ್ಳಲಾಗಿತ್ತು. ಜನವರಿಯಿಂದ ಆಗಸ್ಟ್ ವರೆಗೆ ದೇಶದಲ್ಲಿ ೮೮೯ ಅತ್ಯಾಚಾರದ ಘಟನೆಗಳಾಗಿವೆ. ಇವುಗಳಲ್ಲಿ ೪೧ ಸಂತ್ರಸ್ತೆಯರು ಸಾವನ್ನಪ್ಪಿದ್ದಾರೆ.