ಜಗತ್ತಿನಲ್ಲಿರುವ ೫೮ ಸಾವಿರ ೭೦೦ ದೊಡ್ಡ ಅಣೆಕಟ್ಟುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳ ಆಯುಷ್ಯ ಮುಗಿಯುತ್ತಾ ಬಂದಿರುವುದರಿಂದ ಜಗತ್ತಿಗೆ ಅಪಾಯ ಕಾದಿದೆ! – ಸಂಯುಕ್ತ ರಾಷ್ಟ್ರಗಳು
ಜಗತ್ತಿನಲ್ಲಿರುವ ೫೮ ಸಾವಿರ ೭೦೦ ದೊಡ್ಡ ಅಣೆಕಟ್ಟುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳನ್ನು ೧೯೩೦ ರಿಂದ ೧೯೭೦ ರ ಕಾಲಾವಧಿಯಲ್ಲಿ ಕಟ್ಟಲಾಗಿದೆ. ಕಟ್ಟುವಾಗ ಅವುಗಳ ಕಾರ್ಯಕ್ಷಮತೆಯ ಸಮಯಮಿತಿಯನ್ನು ೫೦ ರಿಂದ ೧೦೦ ವರ್ಷಗಳೆಂದು ನಿರ್ಧರಿಸಲಾಗಿತ್ತು. ಪ್ರತಿಯೊಂದು ಅಣೆಕಟ್ಟು ಕಟ್ಟಿಯಾದ ೫೦ ವರ್ಷಗಳ ನಂತರ ಅದರಿಂದಾಗುವ ಅಪಾಯದಲ್ಲಿ ಹೆಚ್ಚಳವಾಗುತ್ತದೆ.