ತಪ್ಪು ಸುಧಾರಿಸುವಂತೆ ಮೂರನೆಯ ಬಾರಿ ಎಚ್ಚರಿಕೆ ನೀಡಿದ ಭಾರತ
ವಿಶ್ವ ಆರೋಗ್ಯ ಸಂಸ್ಥೆಗೆ ಶಬ್ದಗಳ ಭಾಷೆಯು ಅರ್ಥವಾಗುವುದಿಲ್ಲ. ಹಾಗಾಗಿ ಭಾರತವು ಅದಕ್ಕೆ ವಾರ್ಷಿಕ ದೇಣಿಗೆ ನೀಡುವುದನ್ನು ನಿಲ್ಲಿಸಬೇಕು
ನವ ದೆಹಲಿ – ವಿಶ್ವ ಆರೋಗ್ಯ ಸಂಸ್ಥೆಯು ಭಾರತೀಯ ಮಾನಚಿಹ್ನೆ (ನಕಾಶೆ)ಯನ್ನು ಮತ್ತೊಮ್ಮೆ ಅಯೋಗ್ಯ ಪದ್ಧತಿಯಲ್ಲಿ ತೋರಿಸಿದೆ. ಭಾರತವು ಮೂರನೆಯ ಸಲ ಈ ಸಂಸ್ಥೆಗೆ ಎಚ್ಚರಿಕೆಯನ್ನು ನೀಡಿದೆ. ಭಾರತವು ಸಂಘಟನೆಯ ಅಧ್ಯಕ್ಷ ಡಾ. ಟ್ರೆಡಾಸ್ ಇವರಿಗೆ ಪತ್ರವನ್ನು ಬರೆದು ತಪ್ಪನ್ನು ಸುಧಾರಣೆ ಮಾಡಲು ತಿಳಿಸಿದೆ.
The @WHO map currently shows the union territories of #JammuAndKashmir and #Ladakh in a shade different to the rest of the country.@DrTedros @narendramodi @PMOIndia
READ THE FULL STORY HERE: https://t.co/uqLRPPtwvK
— Outlook Magazine (@Outlookindia) January 14, 2021
(ಸೌಜನ್ಯ : A.I.O.C)
ವಿಶ್ವ ಆರೋಗ್ಯ ಸಂಸ್ಥೆಯ ಜಾಲತಾಣದಲ್ಲಿರುವ ಭಾರತದ ಮಾನಚಿತ್ರದಲ್ಲಿ (ನಕಾಶೆಯಲ್ಲಿ) ಜಮ್ಮು-ಕಾಶ್ಮೀರ ಮತ್ತು ಲಡಾಖ ಇವೆರಡೂ ಭೂಭಾಗಗಳನ್ನು ಭಾರತದಿಂದ ಪ್ರತ್ಯೇಕಿಸಿ ತೋರಿಸಲಾಗಿದೆ.