ಪಾಕ್‌ನ ವಿಮಾನಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬೇಡಿ ! – ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ಸೂಚನೆ

  •  ಪಾಕ್‌ನ ವೈಮಾನಿಕರ (ಪೈಲೆಟ್) ಹತ್ತಿರ ನಕಲಿ ಲೈಸೆನ್ಸ್ (ಅನುಮತಿ ಪತ್ರ) ಇರುವುದಾಗಿ ಸೂಚನೆ
  • ಭಯೋತ್ಪಾದಕ ದೇಶವಾಗಿರುವ ಪಾಕ್‌ನ ವಿಮಾನಯಾನ ಕಂಪನಿಗಳ ಮೇಲೆಯೇ ವಿಶ್ವಸಂಸ್ಥೆ ನಿರ್ಬಂಧ ಹೇರಬೇಕು !

ಇಸ್ಲಾಮಾಬಾದ್ (ಪಾಕಿಸ್ತಾನ್) – ತಮ್ಮ ಸಿಬ್ಬಂದಿಗಳಿಗೆ ವಿಶ್ವಸಂಸ್ಥೆ ‘ಪಾಕಿಸ್ತಾನದ ಯಾವುದೇ ವಿಮಾನ ಯಾನ ಕಂಪನಿಗಳ ವಿಮಾನಗಳಲ್ಲಿ ಪ್ರವಾಸ ಮಾಡಬಾರದು’, ಎಂದು ಹೇಳಿದೆ. ಪಾಕ್‌ನ ವೈಮಾನಿಕರ ಹತ್ತಿರ ವಿಮಾನವನ್ನು ಹಾರಿಸಲು ನಕಲಿ ಲೈಸೆನ್ಸ್ (ಅನುಮತಿ ಪತ್ರ) ಇರುವುದರಿಂದ ಈ ಸೂಚನೆಯನ್ನು ಕೊಡಲಾಗಿದೆ. ಕಳೆದ ವರ್ಷ ಕರಾಚಿಯಲ್ಲಿ ಪಾಕ್‌ನ ಪ್ರವಾಸಿ ವಿಮಾನವು ಅಪಘಾತಕ್ಕೊಳಗಾಗಿತ್ತು. ಆಗ ಪಾಕ್‌ನಲ್ಲಿ ೪೦೦ ಕ್ಕಿಂತ ಹೆಚ್ಚು ವೈಮಾನಿಕರ ಹತ್ತಿರ ವಿಮಾನವನ್ನು ಹಾರಿಸುವ ಲೈಸೆನ್ಸೇ (ಅನುಮತಿ ಪತ್ರ) ಇರಲಿಲ್ಲ ಅಥವಾ ನಕಲಿ ಇರುವುದಾಗಿ ಬಹಿರಂಗವಾಗಿತ್ತು