|
ಅಮೆರಿಕನ್ ಆಪ್ ಬಂದ ಮಾಡುವ ಮೂಲಕ ಸ್ವದೇಶಿಯನ್ನು ಉಪಯೋಗಿಸುವಂತೆ ಆಗ್ರಹಿಸುವ ಟರ್ಕಿಯ ರಾಷ್ಟ್ರಾಧ್ಯಕ್ಷರಿಂದ ಭಾರತೀಯ ನಾಯಕರು ಮತ್ತು ಜನರು ಏನಾದರೂ ಕಲಿಯುತ್ತಾರೆಯೇ ?
ಅಂಕಾರಾ (ಟರ್ಕಿ) – ‘ವಾಟ್ಸಪ್’ ತನ್ನ ಗೌಪ್ಯತೆ ನೀತಿಯನ್ನು ಬದಲಾಯಿಸಿದೆ. ಹೊಸ ನೀತಿ ನಿಯಮಗಳನ್ನು ಪಾಲಿಸದಿದ್ದರೆ, ಬಳಕೆದಾರರ ಖಾತೆಯನ್ನು ಬಂದ ಮಾಡಲಾಗುವುದು ಎಂದು ವಾಟ್ಸಪ್ ತಿಳಿಸಿದೆ. ವಾಟ್ಸಪ್‌ನ ಹೊಸ ನಿಯಮಗಳು ಮತ್ತು ನೀತಿಗಳನ್ನು ಒಪ್ಪಿದರೆ, ಬಳಕೆದಾರರ ಸಂಪೂರ್ಣ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಸೇರಿದಂತೆ ಇತರ ಸಂಸ್ಥೆಗಳ ವೆಬ್‌ಸೈಟ್‌ಗಳು ಅಥವಾ ಆಪಗಳಲ್ಲಿ ಶೇರ್(ಪ್ರಸಾರ) ಮಾಡಲಾಗುವುದು. ಇದರಿಂದ ಬಳಕೆದಾರರು ಚಿಂತೆಯಲ್ಲಿರುವ ಹಿನ್ನಲೆಯಲ್ಲಿ ಟರ್ಕಿಯ ರಾಷ್ಟ್ರಾಧ್ಯಕ್ಷ ತಯ್ಯಪ್ ಎರ್ದೊಗನ್ ಅವರ ಪ್ರಸಾರ ಮಾಧ್ಯಮಕ್ಕೆ ಸಂಬಂಧಿಸಿದ ವಿಭಾಗವು ರಾಷ್ಟ್ರಾಧ್ಯಕ್ಷರ ‘ವಾಟ್ಸಪ್’ನ ಖಾತೆಯನ್ನು ಬಂದ ಮಾಡಲಾಗುವುದು ಎಂದು ಘೋಷಿಸಿದೆ. ಅದೇರೀತಿ ‘ನಾವು ಇನ್ನು ಮುಂದೆ ವಾಟ್ಸಪ್ ಬಳಸುವುದಿಲ್ಲ’ ಎಂದು ಟರ್ಕಿಯ ರಕ್ಷಣಾ ಸಚಿವಾಲಯ ಘೋಷಿಸಿದೆ. ‘ಎರ್ದೊಗನ್ ಈಗ ವಾಟ್ಸಪ್ ಬದಲಿಗೆ ‘ಬೀಪ್’ ಎಂಬ ಸ್ವದೇಶಿ ಅಪ್ಲಿಕೇಶನ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಾಹಿತ ಬಂದಿದೆ. ‘ಬೀಪ್’ ಟರ್ಕಿಯ ‘ಟರ್ಕಸೆಲ್ ಎಲೆಟಿಸಿಮ್ ಹಿಜಮೆಟಲೆರಿ ಎಎಸ್’ ಈ ಸಂಸ್ಥೆಯ ಒಡೆತನದ ಎನ್‌ಕ್ರಿಪ್ಟೆಡ್ ಅಪ್ಲಿಕೇಶನ್ ಆಗಿದೆ.