ಹಿಂದೂ ರಾಷ್ಟ್ರದಲ್ಲಿ ಅಣೆಕಟ್ಟುಗಳಿರುವುದಿಲ್ಲ, ಸರೋವರಗಳು ಮತ್ತು ಕೆರೆಗಳನ್ನು ನಿರ್ಮಿಸಲಾಗುವುದು!
ನ್ಯೂಯಾರ್ಕ(ಅಮೇರಿಕಾ) – ಜಗತ್ತಿನಲ್ಲಿರುವ ೫೮ ಸಾವಿರ ೭೦೦ ದೊಡ್ಡ ಅಣೆಕಟ್ಟುಗಳಲ್ಲಿ ಹೆಚ್ಚಿನ ಅಣೆಕಟ್ಟುಗಳನ್ನು ೧೯೩೦ ರಿಂದ ೧೯೭೦ ರ ಕಾಲಾವಧಿಯಲ್ಲಿ ಕಟ್ಟಲಾಗಿದೆ. ಕಟ್ಟುವಾಗ ಅವುಗಳ ಕಾರ್ಯಕ್ಷಮತೆಯ ಸಮಯಮಿತಿಯನ್ನು ೫೦ ರಿಂದ ೧೦೦ ವರ್ಷಗಳೆಂದು ನಿರ್ಧರಿಸಲಾಗಿತ್ತು. ಪ್ರತಿಯೊಂದು ಅಣೆಕಟ್ಟು ಕಟ್ಟಿಯಾದ ೫೦ ವರ್ಷಗಳ ನಂತರ ಅದರಿಂದಾಗುವ ಅಪಾಯದಲ್ಲಿ ಹೆಚ್ಚಳವಾಗುತ್ತದೆ. ಅಣೆಕಟ್ಟು ಒಡೆಯುವುದು. ದುರುಸ್ತಿ ಮತ್ತು ನಿರ್ವಹಣೆಯ ಖರ್ಚು ಹೆಚ್ಚಾಗುವುದು, ಕಲ್ಮಶ ಸಂಗ್ರಹವಾಗುವ ಪ್ರಮಾಣವು ಹೆಚ್ಚಾಗುವುದು, ತಾಂತ್ರಿಕ ಅಡಚಣೆಗಳು ಎದುರಾಗುವುದು, ಮುಂತಾದ ಪ್ರಸಂಗಗಳಾಗುತ್ತವೆ. ಹಾಗಾಗಿ ೨೦೫೦ ರ ತನಕ ಜಗತ್ತಿನ ಹೆಚ್ಚಿನ ಜನರು ಹಳೆಯ ಅಣೆಕಟ್ಟುಗಳ ಪ್ರಭಾವವಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಭೀತಿಯನ್ನು ಸಂಯುಕ್ತ ರಾಷ್ಟ್ರಗಳ ವರದಿಯಲ್ಲಿ ವ್ಯಕ್ತಪಡಿಸಲಾಗಿದೆ. ಈ ವರದಿಯಲ್ಲಿ ಅಮೇರಿಕಾ, ಫ್ರಾನ್ಸ್, ಕೆನಡಾ, ಭಾರತ, ಜಪಾನ, ಝಾಂಬಿಯಾ, ಜಿಂಬಾಬ್ವೆ, ಮುಂತಾದ ದೇಶಗಳ ಅಣೆಕಟ್ಟುಗಳ ಸಮೀಕ್ಷೆಯನ್ನು ಮಾಡಲಾಗಿದೆ.
ಸಂಯುಕ್ತ ರಾಷ್ಟ್ರಗಳ ವಿಶ್ವವಿದ್ಯಾಲಯಗಳ ಅಂತರ್ಗತ ಬರುವ ಕೆನಡಾದ ‘ಜಲ, ಪರ್ಯಾವರಣ ಮತ್ತು ಆರೋಗ್ಯ ಸಂಸ್ಥೆ’ ಯು ‘ಕಾಲಬಾಹ್ಯವಾಗತ್ತಿರುವ ಜಲಸಂಗ್ರಹ : ಒಂದು ಹೊಸ ಅಪಾಯ’ ಎಂಬ ಹೆಸರಿನಲ್ಲಿ ವರದಿಯನ್ನು ತಯಾರಿಸಿದೆ. ಈ ವರದಿಗನುಸಾರ ಇಲ್ಲಿನ ಅನೇಕ ಅಣೆಕಟ್ಟುಗಳ ಆಯುಷ್ಯವು ಯಾವಾಗಲೋ ಮುಗಿದಿದೆ ಅಥವಾ ಮುಂಬರುವ ಕೆಲವೇ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲಾಗಿದೆ.
ಈ ವರದಿಯಲ್ಲಿ ಮುಂದೆ ಹೀಗೆ ಹೇಳಲಾಗಿದೆ.
೧. ಭಾರತದಲ್ಲಿರುವ ದೊಡ್ಡ ಅಣೆಕಟ್ಟುಗಳ ಪೈಕಿ ೧ ಸಾವಿರ ೧೧೫ ಅಣೆಕಟ್ಟುಗಳು ೨೦೨೫ರಲ್ಲಿ ೫೦ ವರ್ಷಗಳನ್ನು ಪೂರೈಸುತ್ತವೆ. ಇವು ಮತ್ತು ಜಗತ್ತಿನ ಇಂತಹ ಅನೇಕ ಹಳೆಯ ಅಣೆಕಟ್ಟುಗಳು ಅಪಾಯಕಾರಿಯಾಗುವ ಸಂಭವವಿವೆ.
೨. ಜಗತ್ತಿನಾದ್ಯಂತ ದೊಡ್ಡ ಅಣೆಕಟ್ಟುಗಳಲ್ಲಿ ೧ಸಾವಿರದಿಂದ ೮ ಸಾವಿರ ೩೦೦ ಘನ ಕಿಲೋಮೀಟರ ಜಲಸಂಗ್ರಹ (ಕೆನಡಾದ ಶೇ. ೮೦ ಜಮೀನಿನಷ್ಟು) ಇದೆ. ಶೇ. ೯೩ ದೊಡ್ಡ ಅಣೆಕಟ್ಟುಗಳು ಕೇವಲ ೨೫ ದೇಶಗಳಲ್ಲಿವೆ.
೩. ೩೨ ಸಾವಿರ ೭೧೬ ದೊಡ್ಡ ಅಣೆಕಟ್ಟುಗಳಲ್ಲಿ (ಒಟ್ಟು ಅಣೆಕಟ್ಟುಗಳ ಪೈಕಿ ಶೇ. ೫೫) ಅಣೆಕಟ್ಟುಗಳು ಚೀನಾ, ಭಾರತ, ಜಪಾನ ಮತ್ತು ದಕ್ಷಿಣ ಕೊರಿಯಾ ಈ ದೇಶಗಳಲ್ಲಿವೆ.
ಭಾರತದಲ್ಲಿರುವ ಅಣೆಕಟ್ಟುಗಳು
೧. ೨೦೨೫ರ ತನಕ ೧ ಸಾವಿರದ ೧೧೫ ದೊಡ್ಡ ಅಣೆಕಟ್ಟುಗಳಿಗೆ ೫೦ ವರ್ಷ ಪೂರ್ಣವಾಗುತ್ತದೆ
೨. ೨೦೫೦ರ ತನಕ ೪ ಸಾವಿರ ೨೫೦ ದೊಡ್ಡ ಅಣೆಕಟ್ಟುಗಳು ೫೦ ವರ್ಷಕ್ಕಿಂತಲೂ ಹಳೆಯದ್ದು ಮತ್ತು ೬೪ ಅಣೆಕಟ್ಟುಗಳು ೧೫೦ ವರ್ಷಗಳದ್ದಾಗುವುವು.
೩. ಕೇರಳದಲ್ಲಿರುವ ೧೦೦ ವರ್ಷದಷ್ಟು ಹಳೆಯ ಮುಲ್ಲಪೆರಿಯಾರ ಅಣೆಕಟ್ಟು ಒಡೆದರೆ ೩೫ ಲಕ್ಷ ಜನರ ಜೀವ ಅಪಾಯಕ್ಕೊಳಗಾಗುವ ಸಂಭವವಿದೆ.