ಬೀಜಿಂಗ್ (ಚೀನಾ) – ಚೀನಾದ ಐಸ್ ಕ್ರೀಂನಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ. ಈ ಐಸ್‌ಕ್ರೀಮ್‌ನ ೩೯೦ ಪೆಟ್ಟಿಗೆಗಳನ್ನು ಮಾರಾಟ ಮಾಡಲಾಗಿದ್ದು ಖರೀದಿ ಮಾಡುವವರ ಹುಡುಕಾಟ ನಡೆಯುತ್ತಿದೆ. ಯಾವ ಸಂಸ್ಥೆಯ ಐಸ್ ಕ್ರೀಂನಲ್ಲಿ ಕೊರೋನಾದ ವೈರಾಣು ಕಂಡು ಬಂದಿತೋ ಆ ಸಂಸ್ಥೆಯನ್ನು ಆಡಳಿತವು ಬಂದ್ ಮಾಡಿದೆ. ಈ ಸಂಸ್ಥೆಯಲ್ಲಿ ಈಗ ಸ್ಯಾನಿಟೈಜೇಶನ್ ಮಾಡಲಾಗುತ್ತಿದೆ. ಅಲ್ಲದೆ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಪರೀಕ್ಷಣೆ ನಡೆಸಲಾಗಿದೆ. ಈ ಐಸ್ ಕ್ರೀಮ್‌ಗಳಲ್ಲಿ ನ್ಯೂಜಿಲೆಂಡ್‌ನ ಹಾಲಿನ ಪುಡಿ ಮತ್ತು ಉಕ್ರೇನ್‌ನಿಂದ ಮೊಸರು ಪುಡಿ ಸೇರಿಸಲಾಗುತ್ತದೆ. ಈ ಆಹಾರವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿದೆ ಎಂದು ಸರಕಾರ ತಿಳಿಸಿದೆ.
The #coronavirus was found on #icecream produced in eastern #China, prompting a recall of cartons from the same batch, according to the governmenthttps://t.co/Nq8FoVCqd5
— FinancialXpress (@FinancialXpress) January 17, 2021
(ಸೌಜನ್ಯ : One india Hindi)