ರಷ್ಯಾ ರಾಷ್ಟ್ರಪತಿ ಪುತಿನ ಇವರ ವಿರುದ್ಧ ರಸ್ತೆಗಿಳಿದ ಲಕ್ಷಗಟ್ಟಲೆ ರಷ್ಯನ್ ನಾಗರಿಕರು

  • ವಿರೋಧ ಪಕ್ಷ ನೇತಾರ ಅಲೆಕ್ಸಿ ನವಲ್ನಿ ಇವರ ಬಂಧನಕ್ಕೆ ವಿರೋಧ !
  • ೩ ಸಾವಿರಕ್ಕಿಂತಲೂ ಹೆಚ್ಚು ಜನರ ಬಂಧನ

ಮಾಸ್ಕೋ (ರಷ್ಯಾ) – ವಿರೋಧ ಪಕ್ಷದ ನೇತಾರ ಅಲೆಕ್ಸಿ ನವಲ್ನಿ ಇವರನ್ನು ಬಂಧಿಸಿದ ನಂತರ ರಷ್ಯಾದಲ್ಲಿ ರಾಷ್ಟ್ರಪತಿ ವ್ಲಾದಿಮೀರ್ ಪುತಿನ್ ಇವರ ವಿರುದ್ಧ ಲಕ್ಷಗಟ್ಟಲೆ ಜನರು ರಾಜಧಾನಿ ಮಾಸ್ಕೋದಲ್ಲಿ ರಸ್ತೆಗಿಳಿದಿದ್ದಾರೆ. ರಷ್ಯಾದ ಸುಮಾರು ೧೦೦ ನಗರಗಳಲ್ಲಿ ಜನರು ಬೀದಿಗಿಳಿದಿದ್ದು, ಮಾಸ್ಕೋದಲ್ಲಿ ಪೊಲೀಸರು ಆಂದೋಲನಕಾರರ ಮೇಲೆ ಲಾಠಿಪ್ರಹಾರ ನಡೆಸಿ ಸಾರಾಸಗಟಾಗಿ ಪೊಲೀಸು ವಾಹನಗಳಲ್ಲಿ ದಬ್ಬಿದರು. ಪೊಲೀಸರು ೩೦೦೦ ಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಮಾಸ್ಕೋದಿಂದ ದೂರದಲ್ಲಿರುವ ಸೈಬೀರಿಯಾ, ಸೇಂಟ ಪೀಟರ್ಸ್ ಬರ್ಗ್ ನಲ್ಲಿಯೂ ಜನರು ರಸ್ತೆಗಿಳಿದಿದ್ದಾರೆ. ಈ ಆಂದೋಲನಕಾರರಲ್ಲಿ ಮಹಾವಿದ್ಯಾಯಲದ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ಸೇರಿ ಎಲ್ಲರೂ ಪಾಲ್ಗೊಂಡಿದ್ದಾರೆ. ನವಲ್ನಿ ಇವರ ಪತ್ನಿ ಯುಲಿಯಾ ಇವರು ಸಹ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಅವರನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.

ನವಲ್ನಿ ಇವರನ್ನು ೧೭ ಜನವರಿಯಂದು ಮಾಸ್ಕೋದಲ್ಲಿ ಬಂಧಿಸಲಾಗಿದೆ. ನವಲ್ನಿ ಇವರು ಪುತಿನ ಇವರ ಕಟ್ಟಾ ವಿರೋಧಿ ಎಂದು ಪ್ರಸಿದ್ಧರಾಗಿದ್ದಾರೆ. ಅಗಸ್ಟ ೨೦೨೦ರಲ್ಲಿ ನವಲ್ನಿ ಇವರಿಗೆ ವಿಷಪ್ರಾಶನ ಮಾಡಿಸಲಾಗಿತ್ತು. ವಿಮಾನ ಪ್ರವಾಸದಲ್ಲಿ ಅವರಿಗೆ ವಿಷಯುಕ್ತ ಪೇಯವನ್ನು ಕುಡಿಯಲು ನೀಡಲಾಗಿತ್ತು. ಅನಂತರ ಅವರ ಸ್ಥಿತಿಯು ಗಂಭೀರವಾಗಿತ್ತು. ಅದರಿಂದ ಗುಣಮುಖರಾದ ನಂತರ ನವಲ್ನಿ ಇವರು ಜರ್ಮನಿಯಲ್ಲಿ ಆಶ್ರಯವನ್ನು ಪಡೆದಿದ್ದರು. ವಿಶ್ರಾಂತಿ ಪಡೆದ ನಂತರ ಬರ್ಲಿನ್ ನಿಂದ ನವಲ್ನಿಯವರು ೧೬ ಜನವರಿಯಂದು ಮಾಸ್ಕೋಗೆ ಹಿಂತಿರುಗಿದ್ದರು. ಆ ಸಮಯದಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲಾಗಿತ್ತು.