ಪಾಕಿಸ್ತಾನವು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವಂತೆ ವಿಶ್ವ ಸಂಸ್ಥೆ ಬಳಿ ಆಗ್ರಹಿಸಿದೆ ಎಂದು ಪಾಕ್ ಪ್ರಸಾರ ಮಾಧ್ಯಮಗಳಿಂದ ದಾವೆ

ಇಂತಹ ಬೇಡಿಕೆ ತಮಗೆ ಬಂದಿಲ್ಲ ಎಂದು ವಿಶ್ವ ಸಂಸ್ಥೆಯ ಸ್ಪಷ್ಟೀಕರಣ

  • ಇದರಿಂದ ಪಾಕಿಸ್ತಾನದ ಮತ್ತು ಅದರ ಪ್ರಸಾರಮಾಧ್ಯಮಗಳ ನಕಲಿತನ ಮತ್ತೊಮ್ಮೆ ಬಹಿರಂಗವಾಗುತ್ತಿದೆ!
  • ಸಂಘದ ಮೇಲೆ ನಿರ್ಬಂಧ ಹೇರುವ ವಿಚಾರ ಮಾಡುವುದಕ್ಕಿಂತ ಪಾಕಿಸ್ತಾನವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿರುವ ಭಯೋತ್ಪಾದಕ ಸಂಘಟನೆಗಳ ಮೇಲೆ ಮತ್ತು ಅವರ ತರಬೇತಿ ಕೇಂದ್ರಗಳ ಮೇಲೆ ನಿರ್ಬಂಧವನ್ನು ಹೇರಿ ತಮ್ಮ ದೇಶವನ್ನು ರಕ್ಷಿಸಿಕೊಳ್ಳಬೇಕು!

ಇಸ್ಲಾಮಾಬಾ (ಪಾಕಿಸ್ತಾನ) – ವಿಶ್ವ ಸಂಸ್ಥೆಯ ಪಾಕ್‌ನ ಸ್ಥಾಯಿ ಪ್ರತಿನಿಧಿ ಮನಿರ ಅಕ್ರಮ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆಂಬ ವಾರ್ತೆಯನ್ನು ಪಾಕ್ ಪ್ರಸಾರ ಮಾಧ್ಯಮಗಳು ನೀಡಿವೆ.

(ಸೌಜನ್ಯ : Kaumudy English)

ಅಕ್ರಮ ಇವರು, ‘ಹಿಂದುತ್ವ ಮತ್ತು ಜಾಗತಿಕ ಶಾಂತಿಗೆ ಸಂಘವು ಅಪಾಯಕಾರಿಯಾಗಿದೆ’ ಎಂದು ಹೇಳಿದ್ದಾರೆಂಬ ವಿಷಯದ ಮಾಹಿತಿಯನ್ನು ಪಡೆದುಕೊಳ್ಳುವಾಗ ಪಾಕ್ ರಾಯಬಾರಿಯವರಿಂದ ಇಂತಹ ಯಾವುದೇ ಬೇಡಿಕೆಯು ವಿಶ್ವ ಸಂಸ್ಥೆಯ ಬಳಿ ಬಂದಿಲ್ಲ ಎಂದು ತಿಳಿದುಬಂದಿದೆ.