ವಿಶ್ವ ಆರೋಗ್ಯ ಸಂಸ್ಥೆಯ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭಾರತದಿಂದ ಬೇರೆ ತೋರಿಸಲಾಗಿದೆ !
ವಿಶ್ವ ಆರೋಗ್ಯ ಸಂಸ್ಥೆಯಿಂದ ಜಾರಿ ಮಾಡಲದ ನಕ್ಷೆಯಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭೂಭಾಗವನ್ನು ಭಾರತದಿಂದ ಬೇರೆಯಾಗಿರುವಂತೆ ತೋರಿಸಲಾಗಿದೆ. ಈ ಬಣ್ಣದ ನಕ್ಷೆಯು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ ಮತ್ತು ಭಾರತೀಯ ಪ್ರದೇಶವನ್ನು ಕಡು ನೀಲಿ ಬಣ್ಣದಲ್ಲಿ ತೋರಿಸಲಾಗಿದ್ದು, ಜಮ್ಮು – ಕಾಶ್ಮೀರ ಮತ್ತು ಲಡಾಖ್ನ ಭಾಗವನ್ನು ಬೂದು ಬಣ್ಣದಲ್ಲಿ ತೋರಿಸಲಾಗಿದೆ.