ನೇಪಾಳ ಮತ್ತು ಭಾರತದ ನಡುವಿನ ಗಡಿವಿವಾದ ಅವರ ಆಂತರಿಕ ಪ್ರಶ್ನೆ! – ಚೀನಾ
ಕಲಾಪಾನಿ ವಿಷಯವು ಭಾರತ ಮತ್ತು ನೇಪಾಳ ನಡುವಿನ ಆಂತರಿಕ ವಿವಾದವಾಗಿದೆ. ಸ್ನೇಹಪರ ಮಾತುಕತೆಯ ಮೂಲಕ ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಪರಿಸ್ಥಿತಿ ಹದಗೆಡದಂತೆ ಅವರು ಯಾವುದೇ ರೀತಿಯ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.