೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯ ಮಾಹಿತಿಯನ್ನು ಕದ್ದಿರುವ ಬ್ರಿಟನ್ ನ ಕಂಪನಿಯ ವಿರುದ್ಧ ಅಪರಾಧ ದಾಖಲು

ಸುರಕ್ಷಾ ವ್ಯವಸ್ಥೆಗೆ ಇದರ ಲವಲೇಶದಷ್ಟು ಮಾಹಿತಿ ಹೇಗೆ ಸಿಗಲಿಲ್ಲ? ಇದು ಅತ್ಯಂತ ಲಜ್ಜಾಸ್ಪದವಾಗಿದೆ !

ನವ ದೆಹಲಿ – ೫ ಲಕ್ಷ ೬೨ ಸಾವಿರ ಭಾರತೀಯರ ಫೇಸ್‌ಬುಕ್ ಖಾತೆಯಿಂದ ಮಾಹಿತಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬ್ರಿಟನ್‌ನ ‘ಕೆಂಬ್ರಿಜ್ ಅನಾಲಿಟಿಕಾ’ ಎಂಬ ಕಂಪನಿಯ ವಿರುದ್ಧ ಕೇಂದ್ರಿಯ ತನಿಖಾ ದಳವು (ಸಿಬಿಐ) ಅಪರಾಧವನ್ನು ದಾಖಲಿಸಿದೆ.

ಇದೇ ಪ್ರಕರಣದಲ್ಲಿ ಸಿಬಿಐಯು ಬ್ರಿಟನ್‌ನಲ್ಲಿರುವ ಗ್ಲೊಬಲ್ ಸೈನ್ಸ್ ರಿಸರ್ಚ ಎಂಬ ಕಂಪನಿಯ ವಿರುದ್ಧವೂ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.