ಗಾಂಜಾದ ಅಂಶವಿರುವ ಔಷಧಿಗಳ ಮೂಲಕ ಕೊರೊನಾಗ್ರಸ್ತ ರೋಗಿಗಳ ಪ್ರಾಣವನ್ನು ಉಳಿಸಬಹುದು – ಕೆನಡಾದ ಸಂಶೋಧಕರ ದಾವೆ

ನವ ದೆಹಲಿ – ಕೆನಡಾದ ಲೆಥಬ್ರಿಜ ವಿದ್ಯಾಪೀಠವು ಗಾಂಜಾವನ್ನು ಉಪಯೋಗಿಸಿ ಕೊರೊನಾದಿಂದ ತೀವ್ರ ಅಪಾಯವಿರುವ ವಯೋಮಾನದವರನ್ನು ಮತ್ತು ತೀವ್ರ ರೋಗಗ್ರಸ್ತರಾಗಿರುವವರನ್ನು ಬದುಕಿಸಬಹುದು ಎಂದು ಹೇಳಿದೆ. ಈ ಸಂಶೋಧನೆಗನುಸಾರ ಶರೀರದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಸಕ್ಷಮಗೊಳಿಸಲು ಗಾಂಜಾ ಸೇವನೆ ಮಾಡುವುದು ಲಾಭದಾಯಕವಾಗಿದೆ. ಕೊರೊನಾ ಹಾಗೂ ಇತರ ಗಂಭೀರ ಅನಾರೋಗ್ಯವಿರುವ ವ್ಯಕ್ತಿಗಳ ಮೇಲೆ ಗಾಂಜಾದ ಅಂಶವಿರುವ ಔಷಧಿಗಳನ್ನು ಉಪಯೋಗಿಸಲು ಪ್ರಾರಂಭಿಸಲಾಗುವುದು ಎಂದೂ ಈ ಅಧ್ಯಯನದಲ್ಲಿ ಹೇಳಲಾಗಿದೆ.

ಈ ವಿದ್ಯಾಪೀಠದಲ್ಲಿ ಸಂಶೋಧಕರ ಒಂದು ಗುಂಪು ಈ ದಾವೆಯಲ್ಲಿ, ಮಾನವೀ ಶರೀರದಲ್ಲಿರುವ ರೋಗನಿರೋಧಕ ಶಕ್ತಿಯು ಕಡಿಮೆಯಾದಾಗ ಶರೀರದಲ್ಲಿ ‘ಸೈಟೋಕಾಯಿನ್ ಸ್ಟಾರ್ಮ್’ ಎಂಬ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಇದರಿಂದ ಶರೀರದಲ್ಲಿ ಆರೋಗ್ಯಶಾಲಿ ಸ್ನಾಯುಗಳ ಮೇಲೆಯೂ ಪರಿಣಾಮವಾಗುತ್ತದೆ. ಕೊರೊನಾದ ಸೊಂಕು ತಗಲಿದ ಹಾಗೂ ಇತರ ಅನಾರೋಗ್ಯವಿರುವ ಅನೇಕ ರೋಗಿಗಳ ಮೃತ್ಯುವಾಗಿದೆ ಎಂದಿದ್ದಾರೆ.
ಗಾಂಜಾದ ಎಲೆಗಳಲ್ಲಿ ಕಂಡುಬರುವ ತತ್ತ್ವವು ಈ ಸೈಟೊಕಾಯಿನ್ ಸ್ಟಾರ್ಮಅನ್ನು ತಡೆಗಟ್ಟಬಲ್ಲದು. ಸೈಟೊಕಾಯಿನ್ ಸ್ಟಾರ್ಮ ಉತ್ಪನ್ನವಾಗಲು ಇಂಟರ್ ಲುಕಿನ-೬ ಮತ್ತು ಟ್ಯುಮರ್ ನೆಸರೊಸಿಸ್ ಫ್ಯಾಕ್ಟರ್ ಅಲ್ಫಾ ಈ ಎರಡು ರಾಸಾಯನಿಕಗಳು ಕಾರಣವಾಗಿರುತ್ತವೆ. ಇದೇ ರಾಸಾಯನಿಕಗಳ ಪ್ರಮಾಣವನ್ನು ಗಾಂಜಾದಲ್ಲಿರುವ ತತ್ತ್ವಗಳ ಸಹಾಯದಿಂದ ಕಡಿಮೆಗೊಳಿಸಬಹುದು.