ಪಾಕಿಸ್ತಾನವು ನಡೆಸಿದ ‘ಶಾಹೀನ್ -೩’ ಎಂಬ ಕ್ಷಿಪಣಿ ಪರೀಕ್ಷಣೆಯಲ್ಲಿ ಪಾಕಿಸ್ತಾನದ ನಾಗರಿಕರಿಗೆ ಗಾಯ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು ತನ್ನ ಬ್ಯಾಲೆಸ್ಟಿಕ್ ಕ್ಷಿಪಣಿ ‘ಶಾಹೀನ – ೩’ ಇದನ್ನು ಜನವರಿ ೨೦ ರಂದು ಪರೀಕ್ಷಣೆ ಮಾಡಿತು. ಆದರೆ ಇದರಲ್ಲಿ ಪಾಕಿಸ್ತಾನದ ನಾಗರಿಕರು ಗಾಯಗೊಂಡಿದ್ದಾರೆ. ಈ ಪರೀಕ್ಷಣೆಯನ್ನು ಬಲುಚಿಸ್ತಾನದ ಡೆರಾ ಗಾಝಿ ಖಾನ್‌ನಲ್ಲಿ ನಡೆಸಲಾಗಿತ್ತು. ಆಗ ಡೆರಾ ಬುಗ್ತಿ ಎಂಬಲ್ಲಿನ ವಸತಿ ಪ್ರದೇಶದಲ್ಲಿ ಈ ಕ್ಷಿಪಣಿಯು ಬಿದ್ದ ಕಾರಣ ಮನೆಗಳಿಗೆ ಹಾನಿಯುಂಟಾಯಿತು ಮತ್ತು ಅನೇಕ ನಾಗರಿಕರು ಗಾಯಗೊಂಡರು.