ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ.

ಉಯಿಘರ್ ಮುಸಲ್ಮಾನರ ವಿರುದ್ಧ ಚೀನಾದಿಂದಾಗುತ್ತಿರುವ ದಮನಕ್ಕೆ ಪಾಕಿಸ್ತಾನದ ಬೆಂಬಲ !

ಚೀನಾವು ತನ್ನ ಕ್ಸಿನ್‍ಜಿಯಾಂಗ್ ಪ್ರಾಂತ್ಯದಲ್ಲಿನ ಉಯಿಘರ್ ಮುಸಲ್ಮಾನರನ್ನು ದಮನಿಸುತ್ತಿದೆ. ಇದನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿಸಿದ್ದಾರೆ. ಚೀನಾದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ಭಾರತ ವಿರೋಧಿ ಮತ್ತು ಮೋದಿ ವಿರೋಧಿ ವಿಚಾರಸರಣಿಯ ವರದಿಗಾರರು ಬೇಕಾಗಿದ್ದಾರೆ ! – ‘ನ್ಯೂಯಾರ್ಕ್ ಟೈಮ್ಸ್’ನ ಜಾಹಿರಾತು

ಅಮೇರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಈ ದೈನಿಕವು ವರದಿಗಾರರು ಬೇಕಾಗಿದ್ದಾರೆ ಎಂದು ಜಾಹೀರಾತನ್ನು ನೀಡುತ್ತಾ ಅದರಲ್ಲಿ ‘ಭಾರತ ವಿರೋಧೀ ಮತ್ತು ಮೋದಿ ವಿರೋಧಿ’ ವಿಚಾರಸರಣಿಯವರು ಅರ್ಹರಾಗಿದ್ದಾರೆ ಎಂದು ಅರ್ಹತೆಯನ್ನು ನೀಡಿದೆ. ಜುಲೈ ೧ ರಂದು ಈ ಜಾಹಿರಾತನ್ನು ಪ್ರಕಟಿಸಲಾಯಿತು. ದಕ್ಷಿಣ ಏಶಿಯಾ ಉದ್ಯೋಗದ ಬಗ್ಗೆ ವರದಿಯನ್ನು ಸಂಕಲನ ಮಾಡುವ ಕೆಲಸಕ್ಕಾಗಿ ಈ ಜಾಹೀರಾತನ್ನು ನೀಡಲಾಗಿತ್ತು ದೆಹಲಿಯಿಂದ ಕೆಲಸ ಮಾಡಬೇಕಾಗಲಿದೆ ಎಂದು ಅದರಲ್ಲಿ ಹೇಳಲಾಗಿದೆ.

ಹಿಂದಿನ ಆದೇಶದಿಂದ ಪ್ರಭಾವಕ್ಕೊಳಗಾಗದೆ ಆರೋಪಿ ಮೋಹನ್ ನಾಯಕ್ ಇವರ ಜಾಮೀನು ಅರ್ಜಿ ಇತ್ಯರ್ಥಗೊಳಿಸಿ

ಸರ್ವೋಚ್ಚ ನ್ಯಾಯಾಲಯವು ನಾಯಕ ಅವರ ಜಾಮೀನಿನ ಮೇಲೆ ಅಪರಾಧವನ್ನು ರದ್ದು ಪಡಿಸಿದ ತೀರ್ಪಿನಿಂದ ಪ್ರಭಾವಕ್ಕೊಳಗಾಗದೇ ಇತ್ಯರ್ಥ ಪಡಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಆದೇಶ ನೀಡಿದೆ. ಅದೇ ರೀತಿ ಈ ಅರ್ಜಿಯ ಬಗ್ಗೆ ಉತ್ತರ ನೀಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.

ಪಠ್ಯಪುಸ್ತಕದಲ್ಲಿ ತಪ್ಪಾದ ಇತಿಹಾಸವನ್ನು ಬದಲಾಯಿಸುವ ಸಂಸದೀಯ ಸಮಿತಿಯು ಈ ಬಗೆಗಿನ ಸೂಚನೆಯನ್ನು ಕೋರುವ ದಿನಾಂಕವನ್ನು ಜುಲೈ ೧೫ ರ ತನಕ ಮುಂದುವರಿಸಿದೆ !

ಈ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ವಿನಯ ಸಹಸ್ರಬುದ್ಧೆ ಇವರು ಮಾತನಾಡಿ, ಭಾರತೀಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಮೊದಲು ದೇಶಕ್ಕೆ ಸ್ಥಾನವನ್ನು ನೀಡಬೇಕು. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮತ್ತು ೧೯೯೮ ರಲ್ಲಿಯ ಪೋಖರಣ ಪರಮಾಣು ಪರೀಕ್ಷಣೆಗೂ ಪಠ್ಯ ಪುಸ್ತಕದಲ್ಲಿ ಸ್ಥಾನ ನೀಡಬೇಕು.

೫ ಲಕ್ಷ ರೂಪಾಯಿಗಳ ಲಂಚವನ್ನು ಪಡೆಯುತ್ತಿದ್ದ ಕರ್ಣಾವತಿ(ಗುಜರಾತ)ಯ ಈಡಿಯ ೨ ಅಧಿಕಾರಿಗಳ ಬಂಧನ

ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಾಪಿಸಲಾದ ಈಡಿಯ ಅಧಿಕಾರಿಗಳೇ ಭ್ರಷ್ಟರಾಗಿದ್ದಾರೆ, ಇದರಿಂದ ಎಲ್ಲಾ ತನಿಖಾ ಸಂಸ್ಥೆಗಳು ಭ್ರಷ್ಟಾಚಾರದಿಂದ ಕೂಡಿದೆ, ಎಂಬುದು ಗಮನಕ್ಕೆ ಬರುತ್ತದೆ ! ಈ ಸ್ಥಿತಿಯನ್ನು ಕೇವಲ ಹಿಂದೂ ರಾಷ್ಟ್ರದಲ್ಲೇ ಬದಲಾಯಿಸಬಹುದು !

ಗುಜರಾತಿನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ, ಇಸ್ಪೀಟು ಆಡುವ ಭಾಜಪದ ಶಾಸಕ ಮತ್ತು ಇತರೆ ೨೫ ಜನರ ಬಂಧನ.

ಇಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಒಂದು ರೆಸಾರ್ಟನಲ್ಲಿ ಇಸ್ಪೀಟು ಆಡುವ ಮತ್ತು ಮದ್ಯ ಸಂಗ್ರಹ ಹೊಂದಿರುವ ಪ್ರಕರಣದಲ್ಲಿ ಭಾಜಪ ಶಾಸಕ ಕೇಸರಿ ಸಿಂಹ ಸೋಲಂಕಿ ಮತ್ತು ಇತರೆ ೨೫ ಜನರನ್ನು ಬಂಧಿಸಲಾಗಿದೆ.

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಕಂಡು ಬಂದ ಡ್ರೋನ್

‘ಭಯೋತ್ಪಾದಕರಿಂದ ಡ್ರೋನ ಬಳಕೆಯಾಗುತ್ತಿರುವುದು ಅತ್ಯಂತ ಚಿಂತೆಯ ವಿಷಯವಾಗಿದೆ. ಒಂದು ವೇಳೆ ಈ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಕೊಳ್ಳದಿದ್ದರೆ ಭಯೋತ್ಪಾದಕ ವಿರುದ್ಧದ ಹೋರಾಟದಲ್ಲಿ ಗೆಲ್ಲುವುದು ಅತ್ಯಂತ ಕಠಿಣವಾಗಲಿದೆ’ ಎಂದು ಭಾರತವು ತಿಳಿಸಿದೆ.

‘ಗಂಗಾಜಲ’ದಿಂದ ಕೊರೊನಾ ಸೋಂಕಿಗೆ ಉಪಚರಿಸಲು ಮಾನ್ಯತೆ ನೀಡಿರಿ!- ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಮನವಿ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕ ವಿಜಯ ನಾಥ ಮಿಶ್ರಾ ಇವರು ಮಾತನಾಡುತ್ತಾ, ವರ್ಷ ೧೮೯೬ ರಲ್ಲಿ ಕಾಲರಾ ಮಹಾಮಾರಿಯ ಸಮಯದಲ್ಲಿ ಡಾ. ಹ್ಯಾಕಿಂಗ ಇವರು ಒಂದು ಸಂಶೋಧನೆಯನ್ನು ನಡೆಸಿದ್ದರು. ಅದರಲ್ಲಿ ಗಂಗಾನದಿಯ ನೀರನ್ನು ಕುಡಿಯುವ ಜನರಿಗೆ ಕಾಲರಾ ಬರುವುದಿಲ್ಲ ಎಂದು ಕಂಡು ಬಂದಿತ್ತು.

‘ಮೆರಿಟಾಯಿಮ್ ಕಮಾಂಡ್’ ಮತ್ತು ‘ಏಯರ್ ಡಿಫೆನ್ಸ್ ಕಮಾಂಡ್’ ಸ್ಥಾಪಿಸಲಾಗುವುದು!

ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಅಪಾಯವನ್ನು ಗಮನಿಸಿ, ಮೆರಿಟಾಯಿಮ್ ಕಮಾಂಡ್ ಸ್ಥಾಪಿಸಲಾಗುತ್ತಿದೆ. ಈ ಕಮಾಂಡ ಭಾರತೀಯ ಮಹಾಸಾಗರ ಕ್ಷೇತ್ರದ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲಿದೆ. ಸಧ್ಯಕ್ಕೆ ಸೈನ್ಯ ನೆಲೆ, ನೌಕಾ ನೆಲೆ ಮತ್ತು ಇನ್ನಿತರೆ ಯಂತ್ರಗಳ ರಕ್ಷಣೆಯನ್ನು ಮಾಡಲಿದೆ.