ಟ್ವಿಟರ್ ಕಾನೂನು ಪಾಲಿಸದಿದ್ದಲ್ಲಿ ಸರಕಾರವು ಕ್ರಮ ಕೈಗೊಳ್ಳಬಲ್ಲದು ! – ದೆಹಲಿ ಉಚ್ಚ ನ್ಯಾಯಾಲಯ

ಟ್ವಿಟರ್ ತಾನು ಮಾಹಿತಿ ಮತ್ತು ತಂತ್ರಜ್ಞಾನದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಬಗ್ಗೆ ಇನ್ನು ನಾವು ಟ್ವಿಟರ್ ಗೆ ಯಾವುದೇ ಭದ್ರತೆಯನ್ನು ನೀಡುವುದಿಲ್ಲ. ಸರಕಾರವು ಟ್ವಿಟರ್ ಮೇಲೆ ಕ್ರಮ ಕೈಗೊಳ್ಳಲು ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸುವಾಗ ತಿಳಿಸಿದೆ.

ಕೇರಳ ವಿಧಾನಸಭೆಯಲ್ಲಿ ಹಾನಿಯನ್ನುಂಟು ಮಾಡಿದ ಶಾಸಕರ ಮೇಲಿನ ಖಟ್ಲೆಯನ್ನು ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

೨೦೧೫ ರಂದು ಕೇರಳ ವಿಧಾನಸಭೆಯಲ್ಲಿ ಲೆಫ್ಟ ಡೆಮೊಕ್ರೆಟಿಕ್ ಫ್ರಂಟ್‍ನ (ಎಲ್.ಡಿ.ಎಫ್.ನ) ಶಾಸಕರಿಂದ ಆಗಿದ್ದ ಹಾನಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅವರ ಮೇಲಿನ ಖಟ್ಲೆಯನ್ನು ಹಿಂಪಡೆಯುವಂತೆ ಆದೇಶಿಸುವುದನ್ನು ನಿರಾಕರಿಸಿದೆ. ಈ ಬಗ್ಗೆ ಮುಂದಿನ ಆಲಿಕೆ ಜುಲೈ ೧೫ ರಂದು ನಡೆಯಲಿದೆ.

ಅಸ್ಸಾಂನಲ್ಲಿ ಹೆಚ್ಚಾಗುತ್ತಿರುವ ಮುಸಲ್ಮಾನರ ಜನಸಂಖ್ಯೆಯನ್ನು ನಿಯಂತ್ರಿಸುವ ಪ್ರಯತ್ನ

ಮುಸಲ್ಮಾನರ ಜನಸಂಖ್ಯೆಯಲ್ಲಾಗುತ್ತಿರುವ ಹೆಚ್ಚಳವು ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ಅಡಚಣೆಯಾಗಿದೆ ಎಂದು ಮುಸಲ್ಮಾನ ನೇತಾರರು ಈ ಸಭೆಯಲ್ಲಿ ಒಪ್ಪಿಕೊಂಡರು. ಮತ್ತು ಅದನ್ನು ದೂರಗೊಳಿಸಲು ಪರಿಹಾರವನ್ನು ಸೂಚಿಸಲು ೮ ಗುಂಪುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜ್ಯದ ಮುಸಲ್ಮಾನ ನಾಯಕರು ಸಹಭಾಗಿಯಾಗಲಿದ್ದಾರೆ.

ಚೀನಾದ ಸೈನಿಕರು ಶ್ರೀಲಂಕಾದಲ್ಲಿ ಕೆಲಸ ಮಾಡುವುದಕ್ಕೆ ಸ್ಥಳಿಯ ನಾಗರಿಕರಿಂದ ವಿರೋಧ !

ಚೀನಾದ ಸೈನಿಕರು ಇಲ್ಲಿಯ ಪ್ರಾಚೀನ ಸರೋವರದ ಹತ್ತಿರ ಕೆಲಸ ಮಾಡುತ್ತಿರುವಾಗ ಸ್ಥಳಿಯ ನಾಗರಿಕರು ನೋಡಿದ ನಂತರ ಅವರು ಸೈನಿಕರನ್ನು ವಿರೋಧಿಸಿದರು. ಈ ಸೈನಿಕರು ಸಮವಸ್ತ್ರದಲ್ಲಿದ್ದರಿಂದ ಸ್ಥಳಿಯ ನಾಗರಿಕರಿಗೆ ಗಮನಕ್ಕೆ ಬಂದಿತು. ಇನ್ನೊಂದು ಕಡೆ ಶ್ರೀಲಂಕಾದಲ್ಲಿನ ಚೀನಾದ ರಾಯಭಾರಿಯು ಸಮವಸ್ತ್ರದಲ್ಲಿರುವ ತಮ್ಮ ಸೈನಿಕರಾಗಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ.

‘ದೇಶದಲ್ಲಿ ಮುಸಲ್ಮಾನರು ಇರಬಾರದು’, ಎನ್ನುವ ಹಿಂದೂಗಳು ಯಾರೂ ಇಲ್ಲ ! – ಸರಸಂಘಚಾಲಕ ಡಾ. ಮೋಹನ್ ಭಾಗವತ್

ತಮ್ಮನ್ನು ಯಾವುದೇ ಧರ್ಮಕ್ಕೆ ಸೀಮಿತವಾಗಿರಿಸದೇ ರಾಷ್ಟ್ರೀಯತೆಯ ಭಾವನೆಯಿಂದ ಎಲ್ಲರು ಒಟ್ಟಾಗಬೇಕು. ಪರಸ್ಪರರ ಮೇಲೆ ದಾಳಿ ಮಾಡುವುದು. ಪರಸ್ಪರರಲ್ಲಿ ಯಾವುದಾದರೂ ಕಾರಣದಿಂದ ಗುಂಪಾಗಿ ನಡೆಯುವುದು, ಇದು ಭಾರತೀಯ ಸಂಸ್ಕೃತಿಯೊಂದಿಗೆ ಹೊಂದುವುದಿಲ್ಲ ಮತ್ತು ಇದನ್ನು ತಕ್ಷಣ ನಿಲ್ಲಬೇಕು ಹಾಗೂ ಇಂತಹವುಗಳ ಮೇಲೆ ನಿಷೇಧ ಹೇರಬೇಕು.

ಜಿಹಾದಿ ಭಯೋತ್ಪಾದಕ ಹಫೀಜ್ ಸಯೀದ್ ಮನೆಯ ಹತ್ತಿರ ನಡೆದ ಸ್ಪೋಟದ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್‍ನ ಆರೋಪ !

ಇದನ್ನೆ ‘ಕಳ್ಳನಿಗೊಂದು ಪಿಳ್ಳೆನೆವ’ ಎನ್ನುತ್ತಾರೆ ! ತಲೆನೋವಾಗಿ ಪರಿಣಮಿಸಿದ ಭಯೋತ್ಪಾದಕರನ್ನು ನಿಯಂತ್ರಿಸಲು ಪಾಕಿಸ್ತಾನವೇ ಸ್ಪೋಟವನ್ನು ನಡೆಸಿ ಅದನ್ನು ಭಾರತ ಮಾಡಿದೆ ಎಂದು ಆರೋಪ ಹೊರಿಸುವ ಪ್ರಯತ್ನ ಹಾಸ್ಯಾಸ್ಪದವಾಗಿದೆ, ಇದು ಎಲ್ಲರಿಗೆ ತಿಳಿದ ವಿಷಯವಾಗಿದೆ !

‘ಹಿಂದೂ’ ಎಂದು ಹೇಳಿಕೊಂಡು ಮುಸಲ್ಮಾನ ವ್ಯಕ್ತಿಯಿಂದ ಹಿಂದೂ ವಿಧವೆ ಮಹಿಳೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ದೌರ್ಜನ್ಯ

‘ಈ ಹಿಂದೂ ಮಹಿಳೆಯ ಹಣೆಯ ಮೇಲೆ ಕುಂಕುಮ ಹಚ್ಚಿದ; ಅಂದರೆ ಆಕೆಯೊಂದಿಗೆ ವಿವಾಹವಾಗಿದೆ’, ಎಂದು ಭ್ರಮೆಗೊಳಪಡಿಸಲು ಈ ಮತಾಂಧ ಯುವಕನಿಂದ ಪ್ರಯತ್ನವಾಗುತ್ತಿತ್ತು. ಅನಂತರ ಆತ ಆಕೆಯ ಮೇಲೆ ಮತಾಂತರವಾಗಲು ಒತ್ತಡವನ್ನು ಹಾಕಿದ. ಆಕೆಯ ಲೈಂಗಿಕ ಅತ್ಯಾಚಾರವನ್ನೂ ಮಾಡಿದ.

ಇಂಡೋನೇಶಿಯಾದ ಜ್ವಾಲಾಮುಖಿಯ ಹತ್ತಿರ ಶ್ರೀ ಗಣೇಶನ ಪೂಜೆ ಮಾಡುವ ಆದಿವಾಸಿ ಹಿಂದೂಗಳು !

ಪ್ರಾಚೀನ ಕಾಲದಿಂದಲೂ ‘ಯದ್ರಯಾ ಕಸಾಡಾ’ ಹೆಸರಿನ ಧಾರ್ಮಿಕ ಉತ್ಸವವನ್ನು ಆಯೋಜಿಸಲಾಗುತ್ತದೆ. ಇಂಡೋನೇಶಿಯಾದಲ್ಲಿ ವಾಸಿಸುವ ಆದಿವಾಸಿ ಹಿಂದೂಗಳು ‘ಟೆಂಗರ’ ಎಂಬ ಜಾತಿಯವರಾಗಿದ್ದು ಅವರು ಪೂಜೆ ಮಾಡಲು ಪೂರ್ವ ಜಾವಾದಲ್ಲಿನ ಪ್ರೊಬೊಲಿಂಗಗೊದಲ್ಲಿರುವ ಮೌಂಟ್ ಬ್ರೊಮೊ ಜ್ವಾಲಾಮುಖಿಯ ಬಳಿ ಹೋಗುತ್ತಾರೆ.

ಸಂಸ್ಕೃತ ಭಾಷೆಯ ಏಕೈಕ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ನಿಧನ

ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ ‘ಸುಧರ್ಮಾ’ದ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಜೂನ್ ೩೦ ರಂದು ಹೃದಯಾಘಾತದಿಂದ ನಿಧನರಾದರು. ೨೦೨೦ ರಲ್ಲಿ ಅವರು ಮತ್ತು ಅವರ ಪತ್ನಿ ಎಸ್. ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಹ ಸಂತಾಪ ಸೂಚಿಸಿದ್ದಾರೆ.

ಕೊರೊನಾದ ಮೂರನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು ! – ತಜ್ಞರ ಅಂದಾಜು

ಭಾರತೀಯರು ಕೊರೊನಾದ ನಿಯಮಗಳನ್ನು ಪಾಲಿಸದಿದ್ದರೆ ಕೊರೊನಾದ ೩ ನೇ ಅಲೆಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಬಹುದು; ಆದರೆ ಎರಡನೇ ಅಲೆಯಲ್ಲಿ ಪ್ರತಿದಿನ ಎಷ್ಟು ರೋಗಿಗಳ ಸಂಖ್ಯೆ ನಮೂದಾಗಿತ್ತೋ ಅದರ ತುಲನೆಯಲ್ಲಿ ಮೂರನೇ ಅಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೊರೊನಾದ ಕುರಿತು ಸರಕಾರಿ ಗುಂಪಿನ ವಿಜ್ಞಾನಿಯು ಹೇಳಿದ್ದಾರೆ.