ಬೇಹುಗಾರಿಕೆ ನಡೆಸುವ ಚೀನಾದ ನೌಕೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು !

ಭಾರತದ ವಿರೋಧದ ನಂತರವೂ ಶ್ರೀಲಂಕಾವು ಅನುಮತಿ ನೀಡಿದ ನಂತರ ಚೀನಾದ ‘ಯುವಾನ್ ವಾಂಗ್ – ೫’ ಈ ಬೆಹುಗಾರಿಕೆ ನಡೆಸುವ ನೌಕೆ ಆಗಸ್ಟ್ ೧೬ ರಂದು ಬೆಳಿಗ್ಗೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು.

ಭಾರತ ಶ್ರೀಲಂಕೆಗೆ ನೀಡಲಿದೆ ಸಮುದ್ರದ ಮೇಲೆ ನಿಗಾ ವಹಿಸುವ ‘ಡೋರ್ನಿಯರ’ ವಿಮಾನ

ಒಂದೆಡೆ ಶ್ರೀಲಂಕಾವು ಪಾಕಿಸ್ತಾನದ ಯುದ್ಧನೌಕೆ ಮತ್ತು ಚೀನಾದ ಗುಪ್ತಚರ ನೌಕೆಗಳಿಗೆ ತನ್ನ ಬಂದರಿನಲ್ಲಿ ಬರಲು ಅನುಮತಿ ನೀಡಿದರೇ ಇನ್ನೊಂದೆಡೆ ಭಾರತವು ಶ್ರೀಲಂಕೆಗೆ ಈ ರೀತಿಯ ಸೈನಿಕ ಸಹಾಯ ನೀಡುವುದು ಎಷ್ಟು ಸೂಕ್ತವಾಗಿದೆ ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ !

ಶ್ರೀಲಂಕಾದ ರಾಮಾಯಣಕ್ಕೆ ಸಂಬಂಧಿಸಿರುವ ಸ್ಥಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ

ನಾವು ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಒತ್ತು ನೀಡಲಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಾ ಇವರು ಹೇಳಿದ್ದಾರೆ.

ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಜುಲೈ ೧೩ ರಂದು ರಾಜೀನಾಮೆ ನೀಡಲಿದ್ದಾರೆ !

ಶ್ರೀಲಂಕಾದ ರಾಷ್ಟ್ರಪತಿ ಗೊಟಾಬಾಯ ರಾಜಪಕ್ಷೆ ಅವರ ನಿವಾಸದ ಮೇಲೆ ಪ್ರತಿಭಟನಾಕಾರರು ನಿಯಂತ್ರಣ ಪಡೆದ ನಂತರ ಅಲ್ಲಿ ದೊಡ್ಡ ಮೊತ್ತದ ಹಣ ದೊರೆತಿದೆ. ಮತ್ತೊಂದೆಡೆ, ಜುಲೈ ೧೩ ರಂದು ರಾಜಪಕ್ಷೆ ರಾಜೀನಾಮೆ ಘೋಷಿಸಿದ್ದಾರೆ. ಅವರು ಪ್ರಸ್ತುತ ನೌಕಾಪಡೆಯ ಒಂದು ಹಡಗಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀಲಂಕಾ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರ ನಿವಾಸದಿಂದ ಪರಾರಿ!

ಶ್ರೀಲಂಕಾದ ನಾಗರಿಕರು ಅಪಾರ ಸಂಖ್ಯೆಯಲ್ಲಿ ರಾಷ್ಟ್ರಾಧ್ಯಕ್ಷರ ನಿವಾಸದತ್ತ ಮೆರವಣಿಗೆ ನಡೆಸಿದ ನಂತರ ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಅವರು ತಮ್ಮ ನಿವಾಸದಿಂದ ಪಲಾಯನಗೈದರು. ರಾಜಪಕ್ಷೆ ರಾಜೀನಾಮೆಗೆ ನಾಗರಿಕರು ಒತ್ತಾಯಿಸಿದ್ದಾರೆ. ಮೂಲಗಳ ಪ್ರಕಾರ ರಾಜಪಕ್ಷೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ !

ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣ ಆಗಿದ್ದರಿಂದ ಪರಿಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ಅಧ್ಯಕ್ಷ ಗೋಟಾಬಾಯಾ ರಾಜಪಕ್ಷೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಷೆ ರಾಜೀನಾಮೆಗೆ ವಿರೋಧ ಪಕ್ಷದ ನಾಯಕರು ಈಗಾಗಲೇ ಒತ್ತಾಯಿಸಿದ್ದಾರೆ.

ನನ್ನ ತಪ್ಪುಗಳಿಂದ ದೇಶ ಆರ್ಥಿಕ ಸಂಕಷ್ಟದಲ್ಲಿದೆ! – ಗೊಟಾಬಾಯ ರಾಜಪಕ್ಷೆ, ರಾಷ್ಟ್ರಾಧ್ಯಕ್ಷ, ಶ್ರೀಲಂಕಾ

ದೇಶದ ಪ್ರಸ್ತುತ ದುಸ್ಥಿತಿಗೆ ಅಂತಿಮವಾಗಿ ನಾನೇ ಹೊಣೆ ಎಂದು ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಾಬಾಯ ರಾಜಪಕ್ಷೆ ಅವರು ಮಂತ್ರಿಮಂಡಳದೆದುರು ಒಪ್ಪಿಕೊಂಡಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರಗಳಿಂದ ದೇಶ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗೆ ಹೇಳುತ್ತ ಅವರು ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿಯೂ ಹೇಳಿದರು.

ಶ್ರೀಲಂಕಾಗೆ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ೨೨ ಸಾವಿರ ಕೋಟಿ ರೂಪಾಯಿಗಳು ಬೇಕಾಗಿದೆ !

ಶ್ರೀಲಂಕಾ ದಿವಾಳಿಯಾಗಿದೆ. ದೇಶದಲ್ಲಿ ಕೇವಲ ೫ ಸಾವಿರ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಸಂಗ್ರಹದಲ್ಲಿ ಬಾಕಿ ಉಳಿದಿರುವುದು. ಈ ಪರಿಸ್ಥಿತಿಯಿಂದ ಹೊರಬರಲು ಶ್ರೀಲಂಕಾಗೆ ಸುಮಾರು ೨೨ ಸಾವಿರ ಕೋಟಿ ರೂಪಾಯಿಗಳ ಅವಶ್ಯಕತೆ ಇದೆ.

ರಾಷ್ಟ್ರಪತಿ ಸ್ಥಾನ ಬಿಟ್ಟುಕೊಡಲು ಗೊಟಬಯಾ ರಾಜಪಕ್ಷೆ ನಿರಾಕರಣೆ !

ಈ ಮೊದಲು ಮಂತ್ರಿ ಮಂಡಲದ ಎಲ್ಲ ಸಚಿವರು ರಾಜೀನಾಮೆ ನೀಡಿದ ನಂತರ ವಿರೋಧ ಪಕ್ಷದ ಸದಸ್ಯರನ್ನು ಸರಕಾರದಲ್ಲಿ ಸಹಭಾಗಿಯಾಗಲು ರಾಜಪಕ್ಷೆ ಕೇಳಿಕೊಂಡಿದ್ದರು. ಆದಕ್ಕೆ ವಿರೋಧ ಪಕ್ಷ ನಿರಾಕರಿಸಿತ್ತು.

ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದ ನಂತರ ಸಂಪೂರ್ಣ ದೇಶದಲ್ಲಿ ಸಂಚಾರ ನಿಷೇಧ ಹೇರಲಾಗಿದೆ. ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗಿದೆ.