ಶ್ರೀಲಂಕಾದ ರಾಮಾಯಣಕ್ಕೆ ಸಂಬಂಧಿಸಿರುವ ಸ್ಥಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ

ಶ್ರೀಲಂಕಾದ ನೂತನ ಪ್ರವಾಸಿ ರಾಯಬಾರಿ ಮತ್ತು ಮಾಜಿ ಕ್ರಿಕೇಟ್‌ಪಟು ಸನಥ ಜಯಸೂರ್ಯಾ ಭರವಸೆ

ಕೊಲಂಬೋ (ಶ್ರೀಲಂಕಾ) – ನಾವು ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಒತ್ತು ನೀಡಲಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಾ ಇವರು ಹೇಳಿದ್ದಾರೆ. ಶ್ರೀಲಂಕಾದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ೫೨ ಪ್ರವಾಸಿ ಸ್ಥಳಗಳಿಗೆ. ಸದ್ಯ ಶ್ರೀಲಂಕಾ ಆರ್ಥಿಕ ಸಂಕಟವನ್ನು ಎದುರಿಸುತ್ತಿದೆ. ಅರ್ಥವ್ಯವಸ್ಥೆಗೆ ಚಾಲನೆ ನೀಡಲು ಶ್ರೀಲಂಕಾ ಪ್ರವಾಸೋದ್ಯಮ ಹೆಚ್ಚಿಸಲು ಒತ್ತು ನೀಡಲು ಇಚ್ಛಿಸುತ್ತಿದೆ. ಈ ಸಂದರ್ಭದಲ್ಲಿ ಜಯಸೂರ್ಯಾ ಇವರು ಭಾರತೀಯ ಉಚ್ಚಾಯುಕ್ತ ಗೋಪಾಲ ಬಾಗಳೆ ಇವರನ್ನು ಭೇಟಿಯಾದರು.

ಭಾರತೀಯ ಉಚ್ಚಾಯುಕ್ತರು ಈ ಬಗ್ಗೆ ಟ್ವೀಟ ಮಾಡಿ, ‘ಸನತ್ ಜಯಸೂರ್ಯಾ ಇವರು ಉಚ್ಚಾಯುಕ್ತರನ್ನು ಭೇಟಿಯಾದರು. ಈ ವೇಳೆ ಭಾರತ ಮತ್ತು ಶ್ರೀಲಂಕಾವಾಸಿಗಳ ನಡುವೆ ಇರುವ ಸಂಬಂಧ ದೃಢಗೊಳಿಸುವ ಮತ್ತು ಶ್ರೀಲಂಕಾದ ಅರ್ಥವ್ಯವಸ್ಥೆ ಸುಧಾರಣೆಯ ಒಂದು ಭಾಗವೆಂದು ಪ್ರವಾಸೋದ್ಯಮಕ್ಕೆ ಚಾಲನೆ ನೀಡುವುದರ ಮೇಲೆ ಚರ್ಚೆಗಳಾದವು’, ಎಂದು ಮಾಹಿತಿ ನೀಡಿದರು.