ಕೊಲಂಬೋ (ಶ್ರೀಲಂಕಾ) – ಭಾರತವು ಶ್ರೀಲಂಕಾಗೆ ಸಮುದ್ರದ ಮೇಲೆ ನಿಗಾ ಇಡುವ ಒಂದು ‘ಡೋರ್ನಿಯರ್’ ವಿಮಾನವನ್ನು ನೀಡಲಿದೆ. ಕೋಲಂಬೋದ ಒಂದು ಕಾರ್ಯಕ್ರಮದಲ್ಲಿ ಈ ವಿಮಾನವನ್ನು ನೀಡಲಾಗುತ್ತಿದ್ದು, ಆ ಸಂದರ್ಭದಲ್ಲಿ ರಾಷ್ಟ್ರಪತಿ ರಾನಿಲ ವಿಕ್ರಮಸಿಂಘೆ ಉಪಸ್ಥಿತರಿರಲಿದ್ದಾರೆ. ೨೦೧೮ರಲ್ಲಿ ಎರಡೂ ದೇಶಗಳಲ್ಲಿ ೨ ‘ಡೋರ್ನಿಯರ’ ವಿಮಾನಗಳನ್ನು ನೀಡುವ ವಿಷಯದಲ್ಲಿ ಒಪ್ಪಂದ ಆಗಿತ್ತು. (೨೦೧೮ರ ಒಪ್ಪಂದವಾಗಿದ್ದರೂ, ಇಂದಿನ ಪರಿಸ್ಥಿತಿಯನ್ನು ನೋಡಿದರೆ ಅದನ್ನು ರದ್ದುಗೊಳಿಸುವುದು ಅಥವಾ ಸ್ಥಗಿತಗೊಳಿಸುವುದು ಆವಶ್ಯಕವಿತ್ತು ! ಮೊದಲೇ ಶ್ರೀಲಂಕಾದ ನೌಕಾದಳ ಭಾರತೀಯ ಮೀನುಗಾರರನ್ನು ಅವರ ಗಡಿಯಲ್ಲಿ ನುಗ್ಗಿದ್ದಾರೆಂದು ಹೇಳುತ್ತಾ ಬಂಧಿಸುತ್ತಲೇ ಇರುತ್ತದೆ. ಇಂತಹದರಲ್ಲಿ ಒಂದು ವೇಳೆ ವಿಮಾನವನ್ನು ಭಾರತದ ವಿರುದ್ಧವೇ ಉಪಯೋಗಿಸಿದರೆ, ಅದಕ್ಕೆ ಯಾರು ಜವಾಬ್ದಾರರು ? – ಸಂಪಾದಕರು)
#India will hand over a #Dornier maritime surveillance aircraft to #SriLanka Navy today at a ceremony in #Colombo in the presence of President #RanilWickremesinghe.https://t.co/0Ap0Lwc7pr
— News9 (@News9Tweets) August 15, 2022
ಸಂಪಾದಕೀಯ ನಿಲುವುಒಂದೆಡೆ ಶ್ರೀಲಂಕಾವು ಪಾಕಿಸ್ತಾನದ ಯುದ್ಧನೌಕೆ ಮತ್ತು ಚೀನಾದ ಗುಪ್ತಚರ ನೌಕೆಗಳಿಗೆ ತನ್ನ ಬಂದರಿನಲ್ಲಿ ಬರಲು ಅನುಮತಿ ನೀಡಿದರೇ ಇನ್ನೊಂದೆಡೆ ಭಾರತವು ಶ್ರೀಲಂಕೆಗೆ ಈ ರೀತಿಯ ಸೈನಿಕ ಸಹಾಯ ನೀಡುವುದು ಎಷ್ಟು ಸೂಕ್ತವಾಗಿದೆ ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ ! |