ನನ್ನ ತಪ್ಪುಗಳಿಂದ ದೇಶ ಆರ್ಥಿಕ ಸಂಕಷ್ಟದಲ್ಲಿದೆ! – ಗೊಟಾಬಾಯ ರಾಜಪಕ್ಷೆ, ರಾಷ್ಟ್ರಾಧ್ಯಕ್ಷ, ಶ್ರೀಲಂಕಾ

ಕೊನೆಗೂ ಕ್ಷಮೆಯಾಚಿಸಿದ ಶ್ರೀಲಂಕೆಯ ರಾಷ್ಟ್ರಾಧ್ಯಕ್ಷ !

ಕೊಲಂಬೊ (ಶ್ರೀಲಂಕಾ) – ದೇಶದ ಪ್ರಸ್ತುತ ದುಸ್ಥಿತಿಗೆ ಅಂತಿಮವಾಗಿ ನಾನೇ ಹೊಣೆ ಎಂದು ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಾಬಾಯ ರಾಜಪಕ್ಷೆ ಅವರು ಮಂತ್ರಿಮಂಡಳದೆದುರು ಒಪ್ಪಿಕೊಂಡಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರಗಳಿಂದ ದೇಶ ಅರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗೆ ಹೇಳುತ್ತ ಅವರು ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುವುದಾಗಿಯೂ ಹೇಳಿದರು. ರಾಜಪಕ್ಷೆಯವರು ಹೊಸ ಮಂತ್ರಿಮಂಡಳದ ಸ್ಥಾಪನೆ ಮಾಡಿದ್ದಾರೆ. 2020ರಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಷೇಧಿಸಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಗೊಟಾಬಾಯ ರಾಜಪಕ್ಷೆಯವರು ಹೇಳಿದ್ದಾರೆ. ಈ ನಿರ್ಧಾರದಿಂದಾಗಿ ದೇಶದ ಧಾನ್ಯಗಳ ಉತ್ಪಾದನೆಯು ಬಹಳ ಕಡಿಮೆಯಾಗಿದೆ. ಇದು ನಾಗರಿಕರ ಅಕ್ರೋಶಕ್ಕೆ ಕಾರಣವಾಯಿತು. ನನ್ನ ನಿರ್ಧಾರ ತಪ್ಪಾಗಿತ್ತು. ಈಗ ಅದನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.