ಬೇಹುಗಾರಿಕೆ ನಡೆಸುವ ಚೀನಾದ ನೌಕೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು !

ಭಾರತದ ಸೈನಿಕ ಮತ್ತು ಅಣು ಸ್ಥಾವರಗಳು ರಡಾರಿನಲ್ಲಿ !

ಕೋಲಂಬೋ (ಶ್ರೀಲಂಕಾ) – ಭಾರತದ ವಿರೋಧದ ನಂತರವೂ ಶ್ರೀಲಂಕಾವು ಅನುಮತಿ ನೀಡಿದ ನಂತರ ಚೀನಾದ ‘ಯುವಾನ್ ವಾಂಗ್ – ೫’ ಈ ಬೆಹುಗಾರಿಕೆ ನಡೆಸುವ ನೌಕೆ ಆಗಸ್ಟ್ ೧೬ ರಂದು ಬೆಳಿಗ್ಗೆ ಶ್ರೀಲಂಕಾದ ಹಂಬನಟೋಟಾ ಬಂದರಗೆ ತಲುಪಿತು. ಈ ನೌಕೆ ಆಗಸ್ಟ್ ೨೨ ವರೆಗೆ ಇಲ್ಲೇ ಇರಲಿದೆ. ಈ ಬೆಹುಗಾರಿಕೆ ನೌಕೆಯು ಸುಮಾರು ೭೫೦ ಕಿಲೋಮೀಟರ್ ಅಂತರದವರೆಗೆ ವೀಕ್ಷಣೆ ನಡೆಸಲು ಸಾಧ್ಯವಿದೆ. ಅದರ ಮೇಲೆ ಉಪಗ್ರಹ ಮತ್ತು ಕ್ಷಿಪಣಿಗಳ ಮೇಲೆ ಗಮನ ಇರಿಸಲು ವಿಶೇಷ ವ್ಯವಸ್ಥೆ ಇದೆ. ಭಾರತ ಈ ಪ್ರಕರಣದಲ್ಲಿ ಜಾಗರೂಕವಾಗಿದ್ದು ಈ ನೌಕೆಯ ಮೇಲೆ ನಿಗಾ ಇಟ್ಟಿದೆ.

ಹಂಬನಟೋಟಾ ಬಂದರಗೆ ತಲುಪಿದ ನಂತರ ಈ ನೌಕೆಯ ಮೇಲಿನ ರಡಾರದ ಗುರಿಯಲ್ಲಿ ದಕ್ಷಿಣ ಭಾರತದ ಕಲಪಕ್ಕಂ ಮತ್ತು ಕೂಡಾನಕೂಲಮ್ ನಂತಹ ಮುಖ್ಯ ಸೈನಿಕ ಮತ್ತು ಅಣುಸ್ಥಾವರಗಳು ಬರುತ್ತವೆ. ಇದರ ಜೊತೆಗೆ ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡಿನ ಬಂದರಗಳೂ ಕೂಡ ರಡಾರಿನ ಕ್ಷೇತ್ರಕ್ಕೆ ಬರುತ್ತದೆ. ಕೆಲವು ತಜ್ಞರು, ಚೀನಾ ಭಾರತದ ನೌಕಾದಳದ ಸ್ಥಳಗಳು ಮತ್ತು ಅಣುಸ್ಥಾವರಗಳ ಬೇಹುಗಾರಿಕೆಗಾಗಿ ಈ ನೌಕೆ ಶ್ರೀಲಂಕಾಗೆ ಕಳುಹಿಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.