ಡೋಡಾ (ಜಮ್ಮೂ-ಕಾಶ್ಮೀರ) ಇಲ್ಲಿಯ ಶಿವಮಂದಿರದಲ್ಲಿದ್ದ ಭಗವಾನ ಶಿವನ ಮೂರ್ತಿಯು ದುಷ್ಕರ್ಮಿಗಳಿಂದ ಧ್ವಂಸ !

ಕಾಶ್ಮೀರ ಸಮಸ್ಯೆಯು ಧಾರ್ಮಿಕವಾಗಿರುವುದರಿಂದ ಅದರ ಬುಡಕ್ಕೆ ಎಲ್ಲಿಯ ವರೆಗೆ ಪೆಟ್ಟು ಹಾಕಿ ಅದನ್ನು ಕಿತ್ತು ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಹೀಗೆಯೇ ಇರಲಿದೆ !

ಅಪಹರಿಸಿದ ಯಾಸಿನ್ ಮಲೀಕ್ ನನ್ನು ನ್ಯಾಯಾಲಯದಲ್ಲಿ ಗುರುತಿಸಿದ ರುಬಿಯಾ !

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇವರ ಮಗಳು ಮತ್ತು ಮೆಹಬೂಬಾ ಮುಪ್ತಿ ಇವರ ಸಹೋದರಿ ರುಬಿಯಾ ಸಯೀದ್ ಇವರನ್ನು ಅಪಹರಿಸಿದ್ದು ಭಯೋತ್ಪಾದಕ ಯಾಸಿನ್ ಮಲ್ಲಿಕ್ ಎಂದು ರುಬಿಯಾ ಇವರು ಹೇಳಿದರು.

ಕಠುವಾ (ಜಮ್ಮು) ಇಲ್ಲಿಯ ಶಿವ ಮಂದಿರದಲ್ಲಿ ಹನುಮಾನ ಮೂರ್ತಿ ಧ್ವಂಸ

ಇಲ್ಲಿಯ ಮಹಾನಪೂರ ತಾಲೂಕಿನ ಪಲಕ ಗ್ರಾಮದಲ್ಲಿ ದುಶ್ಕರ್ಮಿಗಳಿಂದ ಶಿವ ಮಂದಿರದಲ್ಲಿನ ಹನುಮಾನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಅಮರನಾಥ ಗೂಹೆಯ ಬಳಿ ಬಂದಿರುವ ನೆರೆಯಿಂದಾಗಿ ೧೬ ಜನರ ಮೃತ್ಯುವಾದರೆ ೪೦ ಜನರು ಕಾಣೆಯಾಗಿದ್ದಾರೆ

ಅಮರನಾಥ ಗೂಹೆಯ ಬಳಿ ಇರುವ ಯಾತ್ರಿಗಳ ತಂಗುದಾಣದ ಬಳಿ ಜುಲೈ ೮ರಂದು ಅಪಾರ ಮಳೆ ಬಂದಿತು. ಇದರಿಂದಾಗಿ ನೆರೆ ಬಂದು ಇಲ್ಲಿಯವರೆಗೆ ೧೬ ಜನರು ಮೃತಪಟ್ಟಿದ್ದರೆ, ೪೦ ಜನರು ಕಾಣೆಯಾಗಿದ್ದಾರೆ. ಈ ಮಳೆಯಲ್ಲಿ ಈ ತಂಗುದಾಣದಲ್ಲಿರುವ ಕೆಲವು ಡೆರೆಗಳು, ಪ್ರಸಾದಾಲಯಗಳಿಗೆ ಹಾನಿಯಾಗಿದೆ.

ಒಂದೇ ರಾತ್ರಿಯಲ್ಲೇ ಎರಡು ಸೇತುವೆ ಕಟ್ಟಿ ಅಮರನಾಥ ಯಾತ್ರೆಯ ಮಾರ್ಗ ತೆರವುಗೊಳಿಸಿದ ಸೈನ್ಯ !

ಭಾರತೀಯ ಸೈನ್ಯ ಒಂದೇ ರಾತ್ರಿಯಲ್ಲೇ ಜಮ್ಮು ಕಾಶ್ಮೀರದ ಎರಡು ಸೇತುವೆಗಳನ್ನು ಕಟ್ಟಿದ್ದಾರೆ. ಆದ್ದರಿಂದ ಅಮರನಾಥ ಯಾತ್ರೆ ಪ್ರಾರಂಭವಾಗಿದೆ. ಅಮರನಾಥ ಯಾತ್ರೆಯ ಮಾರ್ಗದಲ್ಲಿ ಬಾಲಟಾಲ ಎಂಬಲ್ಲಿ ಎರಡು ಸೇತುವೆಗಳು ಭೂಕುಸಿತದಿಂದ ಕೊಚ್ಚಿ ಹೋಗಿದ್ದವು, ಅಮರನಾಥ ಯಾತ್ರೆಯ ಮಾರ್ಗದಲ್ಲಿ ವಿಘ್ನ ನಿರ್ಮಾಣವಾಗಿತ್ತು.

ಕಾಶ್ಮೀರದ ಹಿಂದೂಗಳನ್ನು ಸುರಕ್ಷಿತ ಸ್ಥಾನಕ್ಕೆ ಸ್ಥಳಾಂತರಿಸಿ !

ಕಾಶ್ಮೀರಿ ಹಿಂದೂ ಸಂಘಟನೆಯಾದ ‘ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿಯು’ ಜಮ್ಮು – ಕಾಶ್ಮೀರ ಮತ್ತು ಲಡಾಖ ಉಚ್ಚ ನ್ಯಾಯಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದೆ.

ಜಮ್ಮೂ-ಕಾಶ್ಮೀರದಲ್ಲಿ ೩ ಜಿಹಾದಿ ಭಯೋತ್ಪಾದಕರ ಬಂಧನ

ಸೈನ್ಯವು ಇಲ್ಲಿ ಲಷ್ಕರ-ಎ-ತೊಯಬಾದ ೩ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಆಶಿಕ ಹುಸೈನ ಹಾಜಮ ಗುಲಾಮ, ಮೋಹಿ ದೀನ ಡಾರ ಹಾಗೂ ತಾಹಿರ ಬಿನ ಅಹಮದ ಇವು ಅವರ ಹೆಸರುಗಳಾಗಿವೆ.

ದಂಗೆ ನಡೆಸಿದ ಮುಸಲ್ಮಾನರ ಮೇಲೆ ಯೋಗಿ ಸರಕಾರವು ‘ಗ್ಯಾಂಗಸ್ಟರ್ ಆಕ್ಟ್’ ಜಾರಿ ಮಾಡಲಿದೆ !

ನೂಪುರ ಶರ್ಮಾರವರ ವಿರುದ್ಧ ಜೂನ್ ೧೦ ರಂದು ಶುಕ್ರವಾರದ ನಮಾಜಿನ ನಂತರ ಭಾರತದಾದ್ಯಂತ ೧೪ ರಾಜ್ಯಗಳಲ್ಲಿ ೯೦ ಕ್ಕೂ ಹೆಚ್ಚಿನ ಕಡೆಗಳಲ್ಲಿ ಮುಸಲ್ಮಾನರು ಒಂದೇ ಸಮಯಕ್ಕೆ ಮೆರವಣಿಗೆ ನಡೆಸಿದರು. ನೂಪುರ ಶರ್ಮಾರವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಅನೇಕ ಸ್ಥಳಗಳಲ್ಲಿ ಹಿಂಸಾತ್ಮಕ ಆಂದೋಲನ ನಡೆಸಿದರು

‘ನೂಪುರ ಶರ್ಮಾರಂತಹವರ ಶಿರಚ್ಛೇದ ಮಾಡುವೆವು !’ (ಅಂತೆ)

ಬಂಧುಗಳೇ, ಸಮಯವು ನಮಗೆ ಶಿರಚ್ಛೇದವನ್ನು ಮಾಡಲು ಕಲಿಸುತ್ತದೆ. ನಾವು ಸಹಿಸಿಕೊಳ್ಳುವವರೆಗೂ ನಾವು ಮೌನವಾಗಿರಬಹುದು ಎಂಬುದನ್ನು ನೆನಪಿಡಿ. ನಮ್ಮ ಸಹನೆಯು ಮೀರಿ ಹೋದರೆ ನೂಪುರ ಶರ್ಮಾ ಅವರಂತಹ ದೇಹ ಒಂದುಕಡೆ ಮತ್ತು ರುಂಡ ಒಂದು ಕಡೆ ಸಿಗಬಹುದು, ಎಂದು ಡೋಡಾ ಜಿಲ್ಲೆಯ ಭದ್ರವಾಹದ ಮಸೀದಿಯಲ್ಲಿಯ ಒಬ್ಬ ಮೌಲಾನಾ ಬೆದರಿಕೆ ಹಾಕಿದ್ದಾನೆ.

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ ! – ಆದಿತ್ಯ ಠಾಕರೆ

ಕಾಶ್ಮೀರಿ ಹಿಂದೂಗಳಿಗೆ ಮಹಾರಾಷ್ಟ್ರದ ಬಾಗಿಲು ಯವಾಗಲೂ ತೆರೆದಿರುತ್ತದೆ, ಎಂದು ಶಿವಸೇನೆಯ ನಾಯಕ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕರೆ ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳು ಮತ್ತು ಹಿಂದೂಗಳ ‘ಉದ್ದೇಶಿತ ಹತ್ಯೆ’ ಹಿನ್ನೆಲೆಯಲ್ಲಿ ಶಿವಸೇನಾ ನಾಯಕಿ ಮತ್ತು ಸಂಸದೆ ಪ್ರಿಯಾಂಕಾ ಚತುರ್ವೇದಿ ಕಾಶ್ಮೀರ ಕಣಿವೆಗೆ ಹೋಗಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.