ಶ್ರೀನಗರ – ಕಾಶ್ಮೀರದ ಬಾರಾಮುಲ್ಲಾ ಮತದಾರ ಕ್ಷೇತ್ರದ ಸಂಸದ ಮತ್ತು ಜಿಹಾದಿ ಭಯೋತ್ಪಾದಕ ಶೇಖ್ ಅಬ್ದುಲ್ ರಶೀದ್ (ಇಂಜಿನಿಯರ್ ರಶೀದ್) ಸೆಪ್ಟೆಂಬರ್ 11, 2024 ರಂದು ತಿಹಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ. ಸೆಪ್ಟೆಂಬರ್ 10 ರಂದು ದೆಹಲಿ ನ್ಯಾಯಾಲಯವು ಅವನಿಗೆ ಅಕ್ಟೋಬರ್ 2 ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.
ಜೈಲಿನಿಂದ ಹೊರಬರುತ್ತಿದ್ದಂತೆ, “ನರೇಂದ್ರ ಮೋದಿ ಅವರು ರಚಿಸಿರುವ ‘ಹೊಸ ಕಾಶ್ಮೀರ’ ನಿರೂಪಣೆಯ ವಿರುದ್ಧ ನಾನು ಹೋರಾಡುತ್ತೇನೆ. ಆಗಸ್ಟ್ 5, 2019 ರಂದು, 370 ನೇ ವಿಧಿಯನ್ನು ರದ್ದುಗೊಳಿಸುವ ಮೋದಿಯವರ ನಿರ್ಧಾರವನ್ನು ಕಾಶ್ಮೀರಿ ಜನರು ತಿರಸ್ಕರಿಸಿದ್ದಾರೆ. ನನಗೆ ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಬೇಕಾಗಿದೆ ಮತ್ತು ಕಾಶ್ಮೀರಿ ಜನರು ಕಲ್ಲು ತೂರಾಟಗಾರರಲ್ಲ ಎಂದು ಸಾಬೀತುಪಡಿಸಬೇಕಾಗಿದೆ,” ಎಂದು ಹೇಳಿದ್ದಾನೆ.
ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದ ಮೇಲೆ 2016ರಲ್ಲಿ ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ’ ರಶೀದ್ ನನ್ನು ಬಂಧಿಸಲಾಗಿತ್ತು. 2019 ರಿಂದ ಅವನು ತಿಹಾರ್ ಜೈಲಿನಲ್ಲಿದ್ದ. ಜೈಲಿನಲ್ಲಿದ್ದಾಗ 2024 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ.