ಸನಾತನದ ಗ್ರಂಥಮಾಲಿಕೆ ದೇವರ ಪೂಜೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರ
ಪೂಜಕನಲ್ಲಿ ಮೊದಲಿನಿಂದಲೇ ಸಾತ್ತ್ವಿಕತೆ ಹೆಚ್ಚಿದ್ದರೆ, ಅವನು ಪೂಜೆಯಿಂದ ಈಶ್ವರೀ ಚೈತನ್ಯವನ್ನು ಹೆಚ್ಚು ಗ್ರಹಿಸುತ್ತಾನೆ. ಪೂಜಕನ ಸಾತ್ತ್ವಿಕತೆಯನ್ನು ಹೆಚ್ಚಿಸಲು ವೈಯಕ್ತಿಕ ತಯಾರಿ ಲಾಭದಾಯಕವಾಗಿದೆ !
ಪೂಜಕನಲ್ಲಿ ಮೊದಲಿನಿಂದಲೇ ಸಾತ್ತ್ವಿಕತೆ ಹೆಚ್ಚಿದ್ದರೆ, ಅವನು ಪೂಜೆಯಿಂದ ಈಶ್ವರೀ ಚೈತನ್ಯವನ್ನು ಹೆಚ್ಚು ಗ್ರಹಿಸುತ್ತಾನೆ. ಪೂಜಕನ ಸಾತ್ತ್ವಿಕತೆಯನ್ನು ಹೆಚ್ಚಿಸಲು ವೈಯಕ್ತಿಕ ತಯಾರಿ ಲಾಭದಾಯಕವಾಗಿದೆ !
ದೀಪಾವಳಿಯ ಸಮಯದಲ್ಲಿ ಬಹಳಷ್ಟು ಪ್ರಮಾಣದಲ್ಲಿ ದೇವತೆಗಳ ಚಿತ್ರ ಅಥವಾ ಹೆಸರುಗಳಿರುವ ಲಾಟರಿ ಟಿಕೇಟುಗಳ ಮಾರಾಟವಾಗುತ್ತಿರುತ್ತದೆ. ಹೆಚ್ಚಿನ ಜನರು ಲಾಟರಿ ಟಿಕೇಟುಗಳನ್ನು ಉಪಯೋಗಿಸಿದ ನಂತರ ಅವುಗಳನ್ನು ಮುದ್ದೆ ಮಾಡಿ ಕಸದಲ್ಲಿ ಎಸೆದುಬಿಡುತ್ತಾರೆ.
ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.
ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು.
ಕಾರ್ತಿಕ ಶುಕ್ಲ ಬಿದಿಗೆ ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೨೬.೧೦.೨೦೨೨ ರಂದು ಸಹೋದರಬಿದಿಗೆ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಬಳಿ ಭೋಜನಕ್ಕಾಗಿ ಹೋಗುತ್ತಾನೆ.
ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಇದರ ಅವಧಿ ಹದಿನಾಲ್ಕು ವರ್ಷಗಳು. ನಂತರ ವ್ರತದ ಉದ್ಯಾಪನೆ ಮಾಡಲಾಗುತ್ತದೆ. ಈ ವ್ರತವನ್ನು ಯಾರಾದಾರೂ ಮಾಡಲು ಸೂಚಿಸಿದರೆ ಅಥವಾ ಅನಂತ ವ್ರತದ ದಾರ ದೊರೆತರೆ ಮಾಡುತ್ತಾರೆ.
ನವರಾತ್ರಿಯಲ್ಲಿ ಒಂಭತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಭತ್ತನೇ ದಿನ ಒಂಭತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ.
‘ಸಂಧಿಪೂಜೆ’ ಎಂಬ ಹೆಸರಿನ ಒಂದು ವಿಶೇಷ ಪೂಜೆಯನ್ನು ಅಷ್ಟಮಿ ಮತ್ತು ನವಮಿ ಈ ತಿಥಿಗಳ ಸಂಧಿಕಾಲದಲ್ಲಿ ಮಾಡುತ್ತಾರೆ. ಈ ಪೂಜೆಯು ದುರ್ಗೆಯ ಚಾಮುಂಡಾ ಎಂಬ ರೂಪದ್ದಾಗಿರುತ್ತದೆ. ಈ ರಾತ್ರಿಯಲ್ಲಿ ಸಂಕೀರ್ತನೆ, ಆಟ ಇವುಗಳ ಮೂಲಕ ಜಾಗರಣೆ ಮಾಡುತ್ತಾರೆ.
ಒಂಬತ್ತು ದಿನಗಳವರೆಗೆ ಪ್ರತಿದಿನ ಕುಮಾರಿಯ ಪೂಜೆಯನ್ನು ಮಾಡಿ ಅವಳಿಗೆ ಭೋಜನವನ್ನು ಕೊಡಬೇಕು. ಮುತ್ತೈದೆ ಎಂದರೆ ಪ್ರಕಟ ಶಕ್ತಿ ಮತ್ತು ಕುಮಾರಿ ಎಂದರೆ ಅಪ್ರಕಟ ಶಕ್ತಿ. ಮುತ್ತೈದೆಯಲ್ಲಿ ಪ್ರಕಟ ಶಕ್ತಿಯು ಸ್ವಲ್ಪ ಅಪವ್ಯಯವಾಗುವುದರಿಂದ ಅವಳಿಗಿಂತ ಕುಮಾರಿಯಲ್ಲಿ ಶಕ್ತಿಯ ಪ್ರಮಾಣವು ಜಾಸ್ತಿಯಿರುತ್ತದೆ.
ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ.