ಶ್ರೀ ದುರ್ಗಾದೇವಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಕವಚವು ಮಂತ್ರವಿದ್ಯೆಯಲ್ಲಿನ ಒಂದು ವಿಧವಾಗಿದೆ. ಇದರಲ್ಲಿ ದೇವತೆಯು ನಮ್ಮ ದೇಹದ ರಕ್ಷಣೆಯನ್ನು ಮಾಡಬೇಕೆಂಬ ಪ್ರಾರ್ಥನೆಯಿರುತ್ತದೆ. ಅನೇಕ ವಿಧದ ಮಂತ್ರಗಳ ಸಹಾಯದಿಂದ ಮನುಷ್ಯನ ದೇಹದ ಮೇಲೆ ಮಂತ್ರಕವಚಗಳನ್ನು ನಿರ್ಮಿಸಬಹುದು. ಈ ಕವಚಗಳು ಸ್ಥೂಲ ಕವಚಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತವೆ.

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮರಣೋತ್ತರ ಕ್ರಿಯಾಕರ್ಮಗಳು ಮತ್ತು ಶ್ರಾದ್ಧಾದಿ ವಿಧಿಗಳ ಮಹತ್ವ

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಮೃತದೇಹದ ದಹನ ಮಾಡಿ ಅದರ ಅಸ್ಥಿಗಳನ್ನೂ ಪವಿತ್ರ ಜಲದಲ್ಲಿ ವಿಸರ್ಜನೆ ಮಾಡುವ ಮೂಲಕ ಶರೀರದಲ್ಲಿನ ಪಂಚಮಹಾಭೂತಾತ್ಮಕ ಭಾಗಗಳನ್ನು ಆ ಮಹಾಭೂತಗಳಿಗೆ ಹಿಂದಿರುಗಿಸುತ್ತೇವೆ.

ಶ್ರಾದ್ಧವನ್ನು ಮಾಡುವಾಗ ತೊಂದರೆಗಳು ಬಂದರೆ ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ?

‘ಇಂತಹ ಒಂದು ಕಾರಣಕ್ಕಾಗಿ ಶ್ರಾದ್ಧವನ್ನು ಮಾಡಲು ಆಗುವುದಿಲ್ಲ’ ಎಂದು ಯಾರಿಗೂ ಹೇಳಲು ಸಾಧ್ಯವಾಗದಷ್ಟು ಪರಿಹಾರ ಮಾರ್ಗಗಳನ್ನು ಹಿಂದೂಧರ್ಮದಲ್ಲಿ ಹೇಳಲಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಶ್ರಾದ್ಧವನ್ನು ಮಾಡುವುದು ಎಷ್ಟು ಅವಶ್ಯಕವಾಗಿದೆ ಎಂಬುದು ತಿಳಿಯುತ್ತದೆ.

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ

ಇತ್ತೀಚಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ.

ಶ್ರಾದ್ಧವನ್ನು ಯಾವಾಗ ಮಾಡಬೇಕು ?

ಮೃತ್ಯುವಿನ ತಿಥಿಯು ಗೊತ್ತಿಲ್ಲದೇ, ಕೇವಲ ತಿಂಗಳು ಮಾತ್ರ ಗೊತ್ತಿದ್ದರೆ ಆ ತಿಂಗಳ ಅಮಾವಾಸ್ಯೆಯಂದು ಶ್ರಾದ್ಧವನ್ನು ಮಾಡಬೇಕು.

ಪಿತೃಪಕ್ಷ (ಮಹಾಲಯ ಪಕ್ಷ) (ಮಹಾಲಯಾರಂಭ ೧೦.೯.೨೦೨೨)

ಭಾದ್ರಪದ ಕೃಷ್ಣ ಪಕ್ಷಕ್ಕೆ `ಪಿತೃಪಕ್ಷ’ ಎನ್ನುತ್ತಾರೆ, ಈ ಪಕ್ಷವು ಪಿತೃಗಳಿಗೆ ಪ್ರಿಯವಾಗಿದೆ. ಈ ಪಕ್ಷದಲ್ಲಿ ಪಿತೃಗಳಿಗೆ ಶ್ರಾದ್ಧ ಮಾಡಿದರೆ ಅವರು ವರ್ಷಪೂರ್ತಿ ತೃಪ್ತರಾಗುತ್ತಾರೆ

ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ!

ಇತ್ತೀಚೆಗೆ ಶ್ರೀ ಗಣೇಶ ಮೂರ್ತಿಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀಗಣೇಶ ಮೂರ್ತಿಯನ್ನು ಹರಿಯುವ ನೀರು/ಜಲಾಶಯಗಳಲ್ಲಿ ವಿಸರ್ಜಿಸುವುದು ಆವಶ್ಯಕ ವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಪ್ರದೂಷಣೆ, ನೀರಿನ ಕೊರತೆ ಇತ್ಯಾದಿ ಗಳಿಂದಾಗಿ ಕೆಲವು ಜನರು ಮೂರ್ತಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯುತ್ತಾರೆ.

ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ !

ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಕೆಲವು ಕುಟುಂಬಗಳಲ್ಲಿಯಂತೂ ಶ್ರೀ ಗಣೇಶ ಚತುರ್ಥಿಯ ಸಿದ್ಧತೆಯು ಒಂದು ತಿಂಗಳ ಮೊದಲೇ ಪ್ರಾರಂಭವಾಗಿರುತ್ತದೆ.

ಶ್ರೀ ಗಣೇಶನ ವಿಡಂಬನೆ ಮಾಡಿ ಅಥವಾ ಅದರ ಮೂಕಸಮ್ಮತಿ ಸೂಚಿಸಿ ಪಾಪದ ಪಾಲುದಾರರಾಗಬೇಡಿ !

ಭಾರತೀಯ ಸಂಸ್ಕೃತಿಯು ಕಲೆಯನ್ನು ಹಣ ಸಂಪಾದಿಸುವ ಅಥವಾ ಪ್ರಸಿದ್ಧಿ ಗಳಿಸುವ ಸಾಧನ ಎಂಬ ಸಂಕುಚಿತ ದೃಷ್ಟಿಕೋನದಿಂದ ನೋಡದೆ, ಅದನ್ನು ತನಗಾಗಿ ಹಾಗೂ ಇತರರಿಗಾಗಿ ಈಶ್ವರಪ್ರಾಪ್ತಿಯ ಸಾಧನವೆಂಬ ವ್ಯಾಪಕ ದೃಷ್ಟಿಕೋನದಿಂದ ನೋಡುತ್ತದೆ. ಕಲೆಯನ್ನು ಕೇವಲ ಕಲಾತ್ಮಕತೆಗಾಗಿ ಉಪಯೋಗಿಸಿದಾಗ ಆ ಕಲಾಕೃತಿಯಲ್ಲಿ ದೈವೀ ಸ್ಪಂದನವನ್ನು ಆಕರ್ಷಿಸುವ ಪ್ರಮಾಣ ಕಡಿಮೆಯಿರುತ್ತದೆ.

ಸಂಪೂರ್ಣ ಶ್ರೀ ಗಣೇಶ ಪೂಜೆ

‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡುತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ.