ಸಹೋದರಬಿದಿಗೆ ನಿಮಿತ್ತ ಎಲ್ಲೆಡೆಯ ಹಿಂದೂ ಬಾಂಧವರಿಗೆ ಕರೆ !

ಸಹೋದರಬಿದಿಗೆಯ ನಿಮಿತ್ತ ಸಹೋದರಿಗೆ ಚಿರಂತನ ಜ್ಞಾನಾಮೃತವಾಗಿರುವ ಸನಾತನ ಸಂಸ್ಥೆಯ ಗ್ರಂಥವನ್ನು ನೀಡಿ, ಹಾಗೆಯೇ ರಾಷ್ಟ್ರ-ಧರ್ಮ ಇವುಗಳ ಬಗ್ಗೆ ಅಭಿಮಾನವನ್ನು ಹೆಚ್ಚಿಸುವ `ಸನಾತನ ಪ್ರಭಾತ’ದ ವಾಚಕಿಯನ್ನಾಗಿಸಿ ಅಮೂಲ್ಯ ಉಡುಗೊರೆಯನ್ನು ನೀಡಿ !

೧. ಸಹೋದರಬಿದಿಗೆ ಮತ್ತು ಆ ನಿಮಿತ್ತ ನೀಡಲಾಗುವ ಉಡುಗೊರೆ !

ಕಾರ್ತಿಕ ಶುಕ್ಲ ಬಿದಿಗೆ ಅಂದರೆ ಸಹೋದರ ಬಿದಿಗೆ ಅಥವಾ ಯಮದ್ವಿತೀಯಾ ! ಈ ವರ್ಷ ೨೬.೧೦.೨೦೨೨ ರಂದು ಸಹೋದರಬಿದಿಗೆ ಇದೆ. ಹಿಂದೂ ಸಂಸ್ಕೃತಿಗನುಸಾರ ಈ ದಿನಕ್ಕೆ ಮಹತ್ವವಿದೆ. ಈ ದಿನ ಸಹೋದರನು ಸಹೋದರಿಯ ಬಳಿ ಭೋಜನಕ್ಕಾಗಿ ಹೋಗುತ್ತಾನೆ. `ಸಹೋದರನು ತನ್ನ ರಕ್ಷಣೆಯನ್ನು ಮಾಡಬೇಕು’, ಎಂದು ಅವಳು ಸಹೋದರನಿಗೆ ಆರತಿಯನ್ನು ಬೆಳಗುತ್ತಾಳೆ ಮತ್ತು ಸಹೋದರನು ಸಹೋದರಿಗೆ ಉಡುಗೊರೆಯನ್ನು ಕೊಡುತ್ತಾನೆ. ಈ ನಿಮಿತ್ತದಿಂದ ಸಹೋದರಿಗೆ ವಿವಿಧ ರೀತಿಯಲ್ಲಿ ಉಡುಗೊರೆಗಳನ್ನು ಕೊಡುವ ಪದ್ಧತಿ ಇದೆ. ಅನೇಕಬಾರಿ ಸಹೋದರರು ಸಹೋದರಿಯರಿಗೆ ಹೊಸಬಟ್ಟೆಗಳು, ಆಭರಣಗಳು ಮುಂತಾದ ಉಡುಗೊರೆಯನ್ನು ಕೊಡುತ್ತಾರೆ, ಕೆಲವರು ನಗದು ಹಣವನ್ನೇ ಕೊಡುತ್ತಾರೆ.

೨. ಪ್ರಸ್ತುತ ಕಾಲಕ್ಕನುಸಾರ ಶ್ರೇಷ್ಠವಾದ ಉಡುಗೊರೆ !

ಸಹೋದರಬಿದಿಗೆಯಂದು ತನ್ನ ಸಹೋದರಿಗೆ ಮೇಲಿನ ಅಶಾಶ್ವತ ಉಡುಗೊರೆಗಳನ್ನು ಕೊಡುವುದಕ್ಕಿಂತ ಚಿರಂತನ ಜ್ಞಾನದ ಪ್ರಸಾರವನ್ನು ಮಾಡುವ ಸನಾತನದ ಗ್ರಂಥಸಂಪತ್ತಿನಲ್ಲಿನ ಗ್ರಂಥಗಳನ್ನು ಉಡುಗೊರೆ ಕೊಡಬಹುದು. ಅದೇ ರೀತಿ ಅವಳಿಗೆ `ಸನಾತನ ಪ್ರಭಾತ’ದ ನಿಯತಕಾಲಿಕೆಯ ವಾಚಕಿಯನ್ನಾಗಿ ಮಾಡಬಹುದು. ಪ್ರಸ್ತುತ ಕಾಲಾನುಸಾರವಾಗಿ ಈ ಉಡುಗೊರೆಯು ಹೆಚ್ಚು ಉಪಯುಕ್ತವಾಗುವುದು.

೩. ಸಹಜಸುಲಭ ಭಾಷೆಯಲ್ಲಿ ಧರ್ಮಶಾಸ್ತ್ರವನ್ನು ಹೇಳಿ ಧರ್ಮಶ್ರದ್ಧೆಯನ್ನು ಹೆಚ್ಚಿಸುವ ಸನಾತನದ ಗ್ರಂಥಗಳು !

ಸನಾತನ ಸಂಸ್ಥೆಯು ಸಪ್ಟೆಂಬರ್ ೨೦೨೨ ರ ವರೆಗೆ ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳಲ್ಲಿನ ೩೫೭ ಗ್ರಂಥಗಳು ಮತ್ತು ಕಿರುಗ್ರಂಥಗಳು ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಕನ್ನಡ, ತಮಿಳು, ತೆಲುಗು, ಮಲ್ಯಾಳಮ್, ಬಂಗಾಲಿ, ಓಡಿಯಾ, ಆಸಾಮಿ, ಗುರುಮುಖಿ ಈ ಭಾರತೀಯ, ಸರ್ಬಿಯನ್, ಜರ್ಮನ್, ಸ್ಪ್ಯಾನಿಷ್, ಫ್ರೆಂಚ್ ಮತ್ತು ನೇಪಾಳಿ ಈ ವಿದೇಶಿ ಭಾಷೆಗಳಲ್ಲಿ ಒಟ್ಟು ೯೦ ಲಕ್ಷಗಳಿಗಿಂತಲೂ ಹೆಚ್ಚು ಪ್ರತಿಗಳನ್ನು ಪ್ರಕಾಶಿಸಿದೆ. ಈ ಗ್ರಂಥಗಳು ೧೭ ಭಾಷೆಗಳಲ್ಲಿ ಲಭ್ಯವಾಗಿದ್ದೂ ಅವು ವಾಚಕರಿಗೆ `ಕಾಲಕ್ಕನುಸಾರ ಯಾವ ಸಾಧನೆ ಆವಶ್ಯಕವಾಗಿದೆ ? ದೇವತೆಗಳ ಉಪಾಸನೆಯನ್ನು ಹೇಗೆ ಮಾಡಬೇಕು ? ಧಾರ್ಮಿಕ ಉತ್ಸವಗಳನ್ನು ಹೇಗೆ ಆಚರಿಸಬೇಕು ?’ ಮುಂತಾದ ವಿಷಯಗಳಲ್ಲಿನ ಅಮೂಲ್ಯ ಜ್ಞಾನವನ್ನು ಸಹಜಸುಲಭ ಭಾಷೆಯಲ್ಲಿ ಕೊಡುತ್ತದೆ. ಆದುದರಿಂದ ಯಾರಿಗೆ ಉಡುಗೊರೆಯನ್ನು ಕೊಡುತ್ತೇವೆಯೋ, ಅವರಿಗೆ ಧರ್ಮದ ಬಗ್ಗೆ ಶ್ರದ್ಧೆ ಹೆಚ್ಚಾಗುತ್ತದೆ.

೪. ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಕೊಡುವ ಸನಾತನ ಪ್ರಭಾತ !

ಪ್ರಸ್ತುತ ಸಮಾಜದ ಪರಿಸ್ಥಿತಿಯು ಬಿಕ್ಕಟ್ಟಿನಿಂದ ಕೂಡಿರುವುದರಿಂದ ಸ್ತ್ರೀಯರು ಅನೇಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತಿದೆ. ಆದುದರಿಂದ ಅವರಿಗೆ ಈ ಸಮಸ್ಯೆಯ ಬಗ್ಗೆ ಅರಿವು ಮಾಡಿಕೊಟ್ಟು ಜಾಗೃತಗೊಳಿಸುವುದು ಇದು ಇಂದಿನ ಕಾಲಕ್ಕೆ ಆವಶ್ಯಕವಾಗಿದೆ. `ಸನಾತನ ಪ್ರಭಾತ’ವು ನಿರಂತರವಾಗಿ ಈ ಸಮಾಜಕ್ಕೆ ಉಪಯೋಗವಾಗುವ ಕಾರ್ಯವನ್ನು ಮಾಡುತ್ತಿದೆ. ಸ್ವರಕ್ಷಣೆಗಾಗಿ ಪ್ರೇರೇಪಿಸುವ, ಹಾಗೆಯೇ `ಸಾಧನೆಯ ಆಧಾರ ನೀಡಿ ಪ್ರತಿಕೂಲ ಪ್ರಸಂಗಗಳನ್ನು ಹೇಗೆ ಎದುರಿಸಬೇಕು ?’, ಇವುಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುವ ಲೇಖನಗಳು ಈ ನಿಯತಕಾಲಿಕೆಯಲ್ಲಿ ನಿಯಮಿತವಾಗಿ ಪ್ರಕಟಿಸಲಾಗುತ್ತದೆ. ಆದುದರಿಂದ ಸ್ತ್ರೀಯರಿಗೆ ಕಠಿಣ ಪ್ರಸಂಗಗಳನ್ನು ಎದುರಿಸುವ ಮನೋಧೈರ್ಯವು ನಿರ್ಮಾಣವಾಗತೊಡಗುತ್ತದೆ.

ಭಗಿನಿಯ ಮನಸ್ಸಿನಲ್ಲಿ ಸಾಧನೆಯ ಮಹತ್ವವನ್ನು ಬಿಂಬಿಸಿ ಅವಳಿಗೆ ಜೀವನದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡುವ `ಸನಾತನ ಪ್ರಭಾತ’ದ ವಾಚಕಿಯನ್ನಾಗಿಸುವುದು ಮತ್ತು ಅದರಲ್ಲಿನ ಅಮೂಲ್ಯ ಮಾಹಿತಿಗಳನ್ನು ಓದಲು ಉದ್ಯುಕ್ತಗೊಳಿಸುವುದು, ಇದಕ್ಕಿಂತ ಇತರ ಶ್ರೇಷ್ಠವಾದ ಉಡುಗೊರೆ ಬೇರೊಂದಿಲ್ಲ.

ಸಹೋದರಿಗೆ ಕೊಡಲು ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳು ಬೇಕಿದ್ದರೆ ಸ್ಥಳೀಯ ವಿತರಕರಲ್ಲಿ ಬೇಡಿಕೆಯನ್ನು ನೀಡಬಹುದು. ಅವಳಿಗೆ `ಸನಾತನ ಪ್ರಭಾತ’ದ ವಾಚಕಿಯೆಂದು ಮಾಡಲು www.SanatanPrabhat.org/Subscribe/ ಈ ಸಂಪರ್ಕ ಕೊಂಡಿ (ಲಿಂಕ್) ನೋಡಬೇಕು ಅಥವಾ ಸ್ಥಳೀಯ ಸಾಧಕರನ್ನು ಸಂಪರ್ಕಿಸಬೇಕು. (೨೮.೯.೨೦೨೨)